ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ನಾಲ್ಕು ದಿನಗಳು ಕಳೆದಿವೆ. ಕೆಲವರು ಮೊದಲ ನೋಟ, ಭೇಟಿಯಲ್ಲೇ ಬೆರೆತುಕೊಂಡಿದ್ದಾರೆ. ಅಂತೆಯೇ ಯಾರನ್ನು ನೀವು ಎಷ್ಟು ಅರಿತುಕೊಂಡಿದ್ದಾರೆ ಎನ್ನುವುದಕ್ಕೆ ಸೂಕ್ತ ಕಾರಣವನ್ನು ಕೊಟ್ಟು ಲೈಕ್ ಮತ್ತು ಡಿಸ್‍ಲೈಕ್‍ಗಳನ್ನು ಮನೆಯ ಸದಸ್ಯರಿಗೆ ನೀಡಬೇಕು ಎಂದು ಬಿಗ್‍ಬಾಸ್ ಸೂಚಿಸಿದ್ದರು.
ಮನೆಯಲ್ಲಿರುವ ಸದಸ್ಯರಲ್ಲಿ ಪ್ರಶಾಂತ್ ಸಂಬರ್ಗಿ ಕೊಂಚ ಡಿಫ್ರೆಂಟ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಪ್ರಶಾಂತ್ ನಡವಳಿಕೆ ಕುರಿತಾಗಿ ಮನೆಯ ಸದಸ್ಯರಲ್ಲಿ ಭಿನ್ನವಾದ ಅಭಿಪ್ರಾಯಗಳಿವೆ. ಮನೆಯ ಸದಸ್ಯರು ಯಾರು ಮೆಚ್ಚಿಕೊಳ್ಳಲ್ಲ ಎಂದು ವೀಕ್ಷಕರು ಅಂದುಕೊಂಡಿದ್ದರು. ಆದರೆ ಮನೆಯ ಒಳಗೆ ಇರುವ ಒಬ್ಬ ಸದಸ್ಯೆ ಮಾತ್ರ ಸಂಬರ್ಗಿಗೆ ಲೈಕ್ ಒತ್ತಿದ್ದಾರೆ.
ಬಿಗ್ ಮನೆಯಲ್ಲಿ ಪ್ರಶಾಂತ್ ಸಂಬರ್ಗಿ ನೇರ ವ್ಯಕ್ತಿತ್ವ, ಖಡಕ್ ಆಗಿ ಮಾತನಾಡುವುದು, ಕೆಲವಷ್ಟು ವಿಚಾರಗಳಿಗೆ ಮನೆಯಲ್ಲಿರುವ ಸದಸ್ಯರ ವಿರುದ್ಧವಾಗಿ ನಡೆದುಕೊಳ್ಳುವ ನಡುವಳಿಕೆ ಸ್ಪರ್ಧಿಗಳಿಗೆ ಮಾತ್ರವಲ್ಲದೆ ವೀಕ್ಷಕರಿಗೂ ಅಚ್ಚರಿಯನ್ನು ಮೂಡಿಸಿರುವುದಂತೂ ಸತ್ಯ.





