ಒಂದು ಗೇಮ್‍ನಿಂದಾಗಿ ಮನೆಯವರ ಡಬಲ್ ಗೇಮ್ ಪ್ಲ್ಯಾನ್‍ಗಳು ಹೊರಗೆ ಬರುತ್ತಿವೆ. ಪ್ರೇಮ ಪತ್ರಗಳನ್ನು ಹುಡುಕುವ ಡೀಲ್ ಮಾಡಿಕೊಂಡಿದ್ದ ನಿಧಿ ಸುಬ್ಬಯ್ಯ ಮತ್ತು ದಿವ್ಯಾ ಸುರೇಶ್ ಬಗ್ಗೆ ಮನೆಯವರಿಗೆ ಅಸಮಾಧಾನವಿತ್ತು. ಜೊತೆಗೆ ಇದರಲ್ಲಿ ಮಂಜು ಪಾಲಿತ್ತು. ಈಗ ಅಸಲಿ ವಿಚಾರವೊಂದನ್ನು ಮನೆಯ ಕ್ಯಾಪ್ಟನ್ ಅರವಿಂದ್‍ಗೆ ಬಿಗ್ ಬಾಸ್ ತಿಳಿಸಿದ್ದಾರೆ.
ಲವ್ ಲೆಟರ್ ಗೇಮ್‍ನಲ್ಲಿ ಯಾರು ವಿನ್ನರ್ ಆಗ್ತಾರೋ ಅವರಿಗೆ ಕ್ಯಾಪ್ಟನ್ಸಿ ಟಾಸ್ಕ್‍ನಲ್ಲಿ ಭಾಗವಹಿಸುವ ಅವಕಾಶ ಇತ್ತು. ಅತ್ಯುತ್ತಮ ಟಾಸ್ಕ್ ನಿರ್ವಹಣೆ ಮತ್ತು ಅತ್ಯುತ್ತಮ ಆಟಗಾರ್ತಿಯನ್ನಾಗಿ ದಿವ್ಯಾ ಸುರೇಶ್‍ರನ್ನು ಹೆಸರಿಸಲಾಗಿತ್ತು. ಎರಡು ಪಟ್ಟಗಳನ್ನು ಒಬ್ಬರಿಗೆ ನೀಡಿದ್ದರಿಂದ, ಮನೆಯ ಮತ್ತೊಬ್ಬ ಸದಸ್ಯರಿಗೆ ಕ್ಯಾಪ್ಟನ್ಸಿ ಟಾಸ್ಕ್‍ನಲ್ಲಿ ಭಾಗವಹಿಸುವ ಅವಕಾಶ ಮಿಸ್ ಆಗಿತ್ತು. ಈ ರೀತಿ ಆಗೋಕೆ ಯಾರು ಕಾರಣ ಅನ್ನೋದನ್ನು ಬಿಗ್ ಬಾಸ್ ಬಹಿರಂಗಪಡಿಸಿದ್ದಾರೆ. ಅರವಿಂದ್‍ಗೆ ತೋರಿಸಿದ ವೀಡಿಯೋದಲ್ಲಿ ದಿವ್ಯಾ ಸುರೇಶ್ ಆಯ್ಕೆಗೆ ಪ್ರಶಾಂತ್ ಕಾರಣ ಅನ್ನೋದು ಗೊತ್ತಾಗಿದೆ.
ಈ ವಿಚಾರದ ಕುರಿತಾಗಿ ಪ್ರಶಾಂತ್ ಬಳಿ ಅರವಿಂದ್ ಚರ್ಚೆ ಮಾಡಿದ್ದರು. ಆಗ ಪ್ರಶಾಂತ್, ಎಲ್ಲ ಆರೋಪಗಳನ್ನು ನಿಧಿ ಮೇಲೆ ಹಾಕಿದ್ದರು. ಚರ್ಚೆ ಮಾಡುವುದಕ್ಕೆ ನನಗೆ ನಿಧಿ ಅವಕಾಶವನ್ನೇ ನೀಡಲಿಲ್ಲ ಎಂದೆಲ್ಲ ಹೇಳಿದ್ದರು. ಆದರೆ ವೀಡಿಯೋದಲ್ಲಿ ನಿಧಿ, ಬೇರೆಯವರ ಹೆಸರು ಹೇಳಿದರೂ, ಬಲವಂತವಾಗಿ ದಿವ್ಯಾ ಸುರೇಶ್ ಹೆಸರನ್ನು ಪ್ರಶಾಂತ್ ಹೇಳಿರುವುದು ಬಹಿರಂಗವಾಗಿದೆ. ಕನ್ಪೆಷನ್ ರೂಮ್‍ನಲ್ಲಿ ಈ ವೀಡಿಯೋ ನೋಡಿ ನಿಧಿ ಬಗ್ಗೆ ಇದ್ದ ಬೇಜಾರ್ ಅರವಿಂದ್‍ಗೆ ಕಮ್ಮಿ ಆಗಿದೆ.
ನಂತರ ನಿಧಿ ಬಳಿ ಅರವಿಂದ್ ಕ್ಷಮೆಯನ್ನು ಕೇಳಿದ್ದಾರೆ. ಬಿಗ್ ಬಾಸ್ ನನಗೆ ನಿಮ್ಮಿಬ್ಬರ ಚರ್ಚೆಯ ವೀಡಿಯೋ ತೋರಿಸಿದರು. ಅಸಲಿ ವಿಚಾರ ಗೊತ್ತಾಯಿತು ಎಂದರು. ಅದಕ್ಕೆ ನಿಧಿ, ಸತ್ಯ ಏನು ಎಂಬುದು ಕ್ಯಾಮೆರಾಗಳಿಗೆ ಗೊತ್ತಿತ್ತು. ಅದಕ್ಕೆ ನಾನು ಸುಮ್ಮನೆ ಇದ್ದಿದ್ದು ಎಂದು ಹೇಳಿದರು. ನಿಧಿ ಬಗ್ಗೆ ಅರವಿಂದ್‍ಗೆ ಇರುವ ಮನಸ್ತಾಪ ಕಡಿಮೆಯಾಗಿದೆ. ಬಿಗ್‍ಬಾಸ್ ಮನೆಯಲ್ಲಿ ಸುಳ್ಳು, ಮೋಸಕ್ಕೆ ಜಾಗ ಇಲ್ಲ ಎಂಬುದು ಈ ಮೂಲಕವಾಗಿ ತಿಳಿದು ಬಂದಿದೆ.