ಪ್ರಶಾಂತ್ ಬಿಗ್‍ಬಾಸ್‍ನಲ್ಲಿ ಇಲ್ಲದಿದ್ರೆ ಒಗ್ಗರಣೆಯಲ್ಲಿ ಮೆಣಸಿನಕಾಯಿ ಇಲ್ಲದಂತೆ: ಅರವಿಂದ್

Public TV
2 Min Read
prashanth 2

ಬಿಗ್‍ಬಾಸ್ ಫಿನಾಲೆಗೆ ಇನ್ನೇನು 2-3 ದಿನವಷ್ಟೇ ಬಾಕಿ ಇದೆ. ಈ ವಾರ ಫಿನಾಲೆ ವೀಕ್ ಆಗಿರುವುದರಿಂದ ಬಿಗ್‍ಬಾಸ್ ಸೀಸನ್-8ರ ಟಾಪ್ 5 ಸ್ಪರ್ಧಿಗಳ ಜರ್ನಿಯನ್ನು ಫೋಟೋ ಫ್ರೇಮ್ ನಿರ್ಮಿಸುವ ಮೂಲಕ ಸವಿ ನೆನಪುಗಳನ್ನು ಮೆಲುಕು ಹಾಕಲಾಗುತ್ತಿದೆ. ಅರವಿಂದ್, ವೈಷ್ಣವಿ, ಮಂಜು ನಂತರ ಇದೀಗ ಪ್ರಶಾಂತ್ ಸಂಬರ್ಗಿ ಫೋಟೋವನ್ನು ಗಾರ್ಡನ್ ಏರಿಯಾದಲ್ಲಿ ವಾಲ್ ಆಫ್ ದಿ ಫ್ರೇಮ್ ಕ್ರಿಯೆಟ್ ಮಾಡಲಾಗಿತ್ತು. ಇದನ್ನು ಕಂಡು ಪ್ರಶಾಂತ್ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.

prashanth 1

ಈ ಬಗ್ಗೆ ಮಾತನಾಡಿದ ಪ್ರಶಾಂತ್, 115 ದಿನದ ಜರ್ನಿ ಇನ್ನೂ 4 ದಿನದಲ್ಲಿ ಮುಗಿಯುತ್ತದೆ. ಈ ಮನೆಯಲ್ಲಿ ಫ್ರೆಂಡ್ಸ್, ಶತ್ರು ಆದ್ರು ಮತ್ತೆ ಫ್ರೆಂಡ್ಸ್ ಆದ್ರು, ಪ್ರೀತಿ, ಅಣ್ಣ, ತಂಗಿ, ಫ್ರೆಂಡ್ ಎಲ್ಲರೂ ಮನೆಯವರ ರೂಪದಲ್ಲಿ ಸಿಕ್ಕಿದ್ರು. ಮಂಜು ಕಾಮಿಡಿ ಸೆನ್ಸ್ ನನಗೆ ಅರ್ಥ ಆಗಲು ಸಮಯ ಬೇಕಾಯಿತು. ಅವನು ವೈಯಕ್ತಿವಾಗಿ ಯಾವುದೇ ಕೆಟ್ಟವನಲ್ಲ. ಆಟದಲ್ಲಿ ಜಗಳವಾಗುತ್ತಿತ್ತು. ಅದು ಬಿಟ್ಟರೆ ಬೇರೆ ಏನೂ ನಮ್ಮ ಮಧ್ಯೆ ಇಲ್ಲ. ಸದ್ಯ ಈಗ ಮಂಜು ನನಗೆ ಸಹೋದರನಾಗಿದ್ದಾರೆ. ಬಿಗ್‍ಬಾಸ್ ನನ್ನ ಲೈಫ್‍ನಲ್ಲಿ ಒಂದು ಮೈಲಿಗಲ್ಲು. ಬಿಗ್‍ಬಾಸ್ ಜರ್ನಿ ಬಹಳ ಸೂಪರ್, ಧನ್ಯವಾದಗಳು ಬಿಗ್‍ಬಾಸ್ ಎಂದಿದ್ದಾರೆ.

prashanth

ಬಳಿಕ ದಿವ್ಯಾ ಉರುಡುಗ, ನನಗೆ ಈ ಮನೆಗೆ ಬಂದ ತಕ್ಷಣ ಪ್ರಶಾಂತ್ ಜೊತೆ ಅಣ್ಣ – ತಂಗಿ ಬಾಂಧವ್ಯ ಬೆಳೆಯಿತು. ಪ್ರಶಾಂತ್ ಅವರಲ್ಲಿ ಒಂದು ರೀತಿಯ ಮಗುವನ್ನು ಕಾಣುತ್ತೇನೆ. ಅವರಲ್ಲಿ ಎರಡು ರೀತಿಯ ವ್ಯಕ್ತಿತ್ವ ಇದೆ. ಒಂದು ತುಂಬಾ ಮಗ್ಧತನ ಮತ್ತೊಂದು ಕ್ರೂರ ಹುಲಿ. ಅವರು ಖುಷಿಯಾಗಿದ್ದಾಗ ಅವರಂತ ಮನುಷ್ಯ ಇನ್ನೊಬ್ಬರಿಲ್ಲ. ಪ್ರಶಾಂತ್ ನನ್ನ ಜೀವನದ ಅಣ್ಣ. ನಿಮ್ಮ ಲೈಫ್‍ನಲ್ಲಿ ಎಲ್ಲಾ ಒಳ್ಳೆಯದಾಗಲಿ, ಯಾವತ್ತಿಗೂ ನಗುತ್ತೀರಿ ಎಂದಿದ್ದಾರೆ.

prashanth 4

ಪ್ರಶಾಂತ್ ರವರ ಬಗ್ಗೆ ತಿಳಿದುಕೊಳ್ಳಲು ನನಗೆ ಖುಷಿಯಾಗಿದೆ. ಟಿವಿಯಲ್ಲಿ ನೋಡುವುದಕ್ಕೂ, ನಿಜವಾಗಿಯೂ ನೋಡಲು ಪ್ರಶಾಂತ್‍ರವರು ತುಂಬಾ ಡಿಫರೆಂಟ್ ಆಗಿದ್ದಾರೆ. ನೀವು ಫಿನಾಲೆ ತನಕ ಬರಲು ನಿಮ್ಮಲ್ಲಿರುವ ಸಾಮಥ್ರ್ಯ ಕಾರಣ. ಒಂದು ಟಾಸ್ಕ್ ವೇಳೆ ನಾನು ಕೈ ಎತ್ತಿದ್ದು, ನನಗೆ ಈಗಲೂ ಬೇಸರವಾಗುತ್ತದೆ. ಇಂದಿಗೂ ನಾನು ಆ ಬಗ್ಗೆ ಪಶ್ಚಾತಾಪ ಪಡುತ್ತೇನೆ, ಕ್ಷಮಿಸಿ. ನೀವು ಅಂದರೆ ನನಗೆ ತುಂಬಾ ಇಷ್ಟ. ನಿಮಗೆ ಒಳ್ಳೆಯದಾಗಲಿ ಎಂದು ವೈಷ್ಣವಿ ಹೇಳಿದ್ದಾರೆ.

prashanth 3

ಬಳಿಕ ಮಂಜು, ಬಿಗ್‍ಬಾಸ್ ಮನೆಯಲ್ಲಿ ನನ್ನ ಹಾಗೂ ಪ್ರಶಾಂತ್‍ರವರದ್ದು ಹಾವು, ಮುಂಗುಸಿ ಸಂಬಂಧ. ಆದರೆ ಬಿಗ್‍ಬಾಸ್ ಮನೆಯಲ್ಲಿ ಪ್ರಶಾಂತ್ ಇಲ್ಲದಿದ್ದರೆ ಈ ಜರ್ನಿ ಬಹಳ ಬೋರಿಂಗ್ ಆಗಿರುತ್ತಿತ್ತು. ಸರಸ, ವಿರಸ ಎಲ್ಲಾ ಇದ್ದರೆನೇ ಮನೆ ಅನಿಸಿಕೊಳ್ಳುವುದು. ಜಗಳ ಆಡಿದರೂ ಅದನ್ನು ತಿದ್ದುಕೊಂಡು ಹೋಗುತ್ತಿದ್ದೇವೆ. ಒಳ್ಳೆಯದಾಗಲಿ ಎಂದಿದ್ದಾರೆ.

prashanth 5

ಇನ್ನೂ ಅರವಿಂದ್, ಪ್ರಶಾಂತ್ ಈ ಜರ್ನಿಯಲ್ಲಿ ಇರಲಿಲ್ಲ ಅಂದರೆ ಒಗ್ಗರಣೆಯಲ್ಲಿ ಮೆಣಸಿನ ಕಾಯಿ ಕಡಿಮೆಯಾದಂತೆ, ಯಾವಗಲೂ ಚಟ-ಪಟ ಅಂತ ಅಂದರೆನೇ ಅದು ಒಗ್ಗರಣೆಯಾಗುತ್ತದೆ. ನಿಮ್ಮಿಂದ ಏನು ಮಾಡಬೇಕು ಏನು ಮಾಡಬಾರದು ಎರಡನ್ನು ಕೂಡ ತಿಳಿದುಕೊಂಡಿದ್ದೇನೆ. ನನಗೆ ಒಳ್ಳೆಯ ಸ್ನೇಹಿತರಾಗಿದ್ದಕ್ಕೆ ಧನ್ಯವಾದ. ಮುಂದೆ ಕೂಡ ನಾವು ಹೀಗೆ ಫ್ರೆಂಡ್ಸ್ ಆಗಿ ಮುಂದುವರಿಯುತ್ತೇವೆ ಅಂದುಕೊಂಡಿದ್ದೇನೆ. ದೇವರು ನಿಮಗೆ ಒಳ್ಳೆಯದನ್ನು ಮಾಡಲಿ ಎಂದು ಹಾರೈಸಿದ್ದಾರೆ. ಇದನ್ನೂ ಓದಿ:ಕಿಚ್ಚನಿಂದಾಗಿ ವೈಷ್ಣವಿ ಹೆಸರು ಬದಲಾಯಿಸಲು ಪೋಷಕರು ತೀರ್ಮಾನ

Share This Article
Leave a Comment

Leave a Reply

Your email address will not be published. Required fields are marked *