ಮನೆಯಿಂದ ದೂರ ಇರುವ ದೊಡ್ಮನೆ ಸ್ಪರ್ಧಿಗಳು ತಮ್ಮ ಮನೆಯವರನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಎಷ್ಟೋ ಬಾರಿ ಮನೆಯವರೊಂದಿಗೆ ಮಾತನಾಡಬೇಕು ಅಂತಾ ಅಂದುಕೊಂಡರೂ ಕೂಡ ಆಗದೇ ಬಿಗ್ಬಾಸ್ ಮನೆಯಲ್ಲಿ ಅತ್ತಿರುವುದನ್ನು ನಾವು ನೋಡಿರಬಹುದು. ಕನಿಷ್ಠ ಪಕ್ಷ ಮನೆಯವರ ಧ್ವನಿ ಕೇಳಿದರೆ ಸಾಕಪ್ಪಾ ಎಂದು ಪರದಾಡುತ್ತಿರುತ್ತಾರೆ.
Advertisement
ಈ ಮಧ್ಯೆ ಬೇರೆ ಸ್ಫರ್ಧಿಗಳಿಗೆ ಹೋಲಿಸಿದರೆ, ಪ್ರಶಾಂತ್ ಸಂಬರಗಿಗೆ ಎರಡೆರಡು ಬಾರಿ ಮನೆಯವರ ಧ್ವನಿ ಕೇಳುವ ಭಾಗ್ಯ ಬಿಗ್ಬಾಸ್ ಮನೆಯಲ್ಲಿ ಒಲಿದು ಬಂದಿದೆ. ಹೌದು, ಬಿಗ್ಬಾಸ್ ನೀಡಿದ್ದ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಗೆದ್ದ ಪ್ರಶಾಂತ್ ಸಂಬರ್ಗಿ ಇದೀಗ 2ನೇ ಬಾರಿ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಕ್ಯಾಪ್ಟನ್ ಆದ ಹಿನ್ನೆಲೆ ನಿನ್ನೆ ಪ್ರಶಾಂತ್ ಸಂಬರಗಿಗೆ ಪುತ್ರ ವಾಯ್ಸ್ ರೆಕಾರ್ಡ್ ಕಳುಹಿಸುವ ಮೂಲಕ ವಿಶ್ ಮಾಡಿದ್ದಾರೆ.
Advertisement
Advertisement
ಹಾಯ್, ಪಪ್ಪಾ ಆದಿ ಮಾತನಾಡುತ್ತಿದ್ದೇನೆ. 2ನೇ ಬಾರಿ ಕ್ಯಾಪ್ಟನ್ ಆಗಿದ್ದಕ್ಕೆ ಬಹಳ ಖುಷಿಯಾಗಿದೆ. ನಿಮ್ಮ ಬಗ್ಗೆ ನಾನು ಹೆಮ್ಮೆ ಪಡುತ್ತೇನೆ. ಆಟ ಎಲ್ಲಾ ಚೆನ್ನಾಗಿ ಆಡಿಕೊಂಡು ಬಾ.. ಬಿಗ್ಬಾಸ್ಗೆ ಹೋಗಲು ಒಂದು ಬಾರಿ ನಿನಗೆ ಅವಕಾಶ ಸಿಕ್ಕಿದೆ. ನೀನು ಅದನ್ನು ಉಪಯೋಗಿಸಿಕೋ, ನಿನ್ನ ಕೈಲಾದಷ್ಟು ಸಾಮಾಥ್ರ್ಯ ಬಳಸಿ ಆಟ ಆಡು. ನೀನು ಬೇರೆಯವರು ಏನು ಹೇಳುತ್ತಾರೋ ಎಂಬ ಬಗ್ಗೆ ಯೋಚಿಸಲು ಹೋಗಬೇಡ. ನೀನು ನಿನಗೇನು ಅನಿಸುತ್ತದೆಯೋ ಆ ನಿರ್ಧಾರಗಳನ್ನು ತೆಗೆದುಕೋ. ನನಗೆ ಗೊತ್ತಿದೆ ನಿನ್ನ ನಿರ್ಧಾರಗಳು ಯಾವಾಗಲೂ ಸರಿಯಾಗಿಯೇ ಇರುತ್ತದೆ ಅಂತಾ ಎಂದಿದ್ದಾರೆ.
Advertisement
ಮನೆಯಲ್ಲಿ ಎಲ್ಲರೂ ಚೆನ್ನಾಗಿದ್ದಾರೆ. ನಿಕ್ಕು ನನ್ನ ಪ್ರತಿ ದಿನ ಪಪ್ಪಾ ಯಾವಾಗ ಬರುತ್ತಾರೆ ಎಂದು ಕೇಳುತ್ತಿರುತ್ತಾನೆ. ನಾನು ಪಪ್ಪಾ ಬಿಗ್ಬಾಸ್ ಗೆದ್ದೆ ಬರುತ್ತಾರೆ ಎಂದು ಹೇಳುತ್ತಿರುತ್ತೇನೆ. ಅವನು ಪ್ರತಿ ದಿನ ಟಿವಿಯಲ್ಲಿ ನಿನ್ನ ನೋಡಿ ಪಪ್ಪಾ, ಪಪ್ಪಾ ಎನ್ನುತ್ತಿರುತ್ತಾನೆ. ವಿ ಮಿಸ್ ಯೂ, ವಿ ವೇರಿ ಪ್ರೌಡ್ ಆಫ್ ಯೂ, ಎನರ್ಜಿಯಿಂದ ಆಟವಾಡು, ಲವ್ ಯೂ, ಆಲ್ ದಿ ಬೆಸ್ಟ್ ಎಂದು ಪ್ರಶಾಂತ್ಗೆ ಅವರ ಮಗ ಆದಿತ್ಯ ವಿಶ್ ಮಾಡಿದ್ದಾರೆ.