– ನದಿಯಿಂದ 300 ಅಡಿ ಎತ್ತರದಲ್ಲಿರುವ ದೇವಸ್ಥಾನ
ಕಲಬುರಗಿ: ಜಿಲ್ಲೆಯ ಜನತೆ ಪ್ರವಾಹಕ್ಕೆ ತತ್ತರಿಸಿ ಹೋಗಿದ್ದಾರೆ. ಒಂದು ಕಡೆ ಭೀಮಾ ನದಿ ತನ್ನ ಅಟ್ಟಹಾಸ ಮೆರೆದರೆ ಮತ್ತೊಂದು ಕಡೆ ಕಾಗಿನಾ ನದಿ ತನ್ನ ರುದ್ರನರ್ತನ ಮುಂದುವರೆಸಿದೆ. ಜಿಲ್ಲೆಯ ಅಫಜಲಪುರ ತಾಲೂಕಿನ ಉಡಚಣ ಗ್ರಾಮದಲ್ಲಿ ಪ್ರವಾಹಕ್ಕೆ ಸಿಲುಕಿದ್ದ 225 ಜನರನ್ನು ರಕ್ಷಿಸಲಾಗಿದೆ.
ಭೀಮಾ ನದಿ ಪ್ರವಾಹದ ಹಿನ್ನಲೆ ಉಡಚಣ ಗ್ರಾಮದ ಪ್ರವಾಹದಲ್ಲಿ ಸಿಲುಕ್ಕಿದ 225 ಜನರ ರಕ್ಷಣೆ ಮಾಡಲಗಿದೆ. ಭೀಮಾ ನದಿಯಲ್ಲಿ ನೀರು ಹೆಚ್ಚಾಗಿ ಗ್ರಾಮ ಜಲಾವೃತವಾಗಿತ್ತು. ಗ್ರಾಮಸ್ಥರು ಪ್ರವಾಹದಲ್ಲಿ ಸಿಲುಕಿದ್ದರು. ಅಗ್ನಿಶಾಮಕದಳದ ಅಧಿಕಾರಿಗಳಿಂದ ರಕ್ಷಣಾಕಾರ್ಯ ನಡೆಸಲಾಗಿದ್ದು, 225 ಜನರನ್ನು ರಕ್ಷಿಸಲಾಗಿದೆ. ಇಂದು ಸಹ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆ ಇದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಜಿಲ್ಲೆಯ ಚಿತ್ತಾಪುರ ತಾಲೂಕಿನ ಮುತಗಾ ಗ್ರಾಮ ಸಂಪೂರ್ಣ ಜಲ ಪ್ರಳಯಕ್ಕೆ ತುತ್ತಾಗಿದೆ. ಗ್ರಾಮದ ಸುಮಾರು 500ಕ್ಕೂ ಹೆಚ್ಚು ಮನೆಗಳು ಜಲ ಸಮಾಧಿಯಾಗಿವೆ. ಮನೆಯಲ್ಲಿ ಇಟ್ಟ ವರ್ಷದ ಆಹಾರ ಜಲ ಪ್ರಳಯ ಕಿತ್ತುಕೊಂಡಿದೆ. ಮನೆ ಮಂದಿ ಎಲ್ಲ ಈಗ ತೆಲೆಯ ಮೇಲೆ ಕೈ ಹೊತ್ತು ಕುಳಿತುಕೊಂಡಿದ್ದಾರೆ. ಕೂಡಿಟ್ಟಿದ್ದ ಹಲವು ಜನರ ಚಿನ್ನ, ಹಣ ಸಹ ನೀರುಪಾಲಾಗಿವೆ. ಮುಂದೆ ಜೀವನ ಹೇಗೆ ಎನ್ನುವ ಸ್ಥಿತಿಯಲ್ಲಿ ಸಂತ್ರಸ್ತರಿದ್ದಾರೆ.
ಕಲಬುರಗಿಯ ಭೀಮಾ ನದಿಯಲ್ಲೂ ಹೆಚ್ಚಿದ ಪ್ರವಾಹ ಭೀತಿ ಎದುರಾಗಿದ್ದು, ಅಫಜಲಪುರ ಸೋನ್ನ ಬ್ಯಾರೇಜ್ ನಿಂದ ಅಪಾರ ಪ್ರಮಾಣದ ನೀರು ಭೀಮಾ ನದಿಗೆ ಹರಿದು ಬರುತ್ತಿದೆ. ಇದೇ ಮೊದಲ ಬಾರಿಗೆ ಭೀಮಾ ನದಿಯಿಂದ ಸುಮಾರು 300 ಅಡಿ ಎತ್ತರದಲ್ಲಿರುವ ಗಾಣಗಾಪುರ ಸಂಗಮ ದೇವಸ್ಥಾನ ಸಂಪೂರ್ಣ ಜಲಾವೃತವಾಗಿದೆ. ಭೀಮಾ ನದಿಯಲ್ಲಿ ಪ್ರವಾಹ ಹೆಚ್ಚಳ ಹಿನ್ನಲೆ ಅಫಜಲಪುರ, ಜೇವರ್ಗಿ ಹಾಗೂ ಚಿತ್ತಾಪುರ ಗ್ರಾಮದ ಜನ ಆತಂಕದಲ್ಲಿದ್ದಾರೆ.
ಒಂದು ಕಡೆ ಭೀಮಾ ನದಿ ತನ್ನ ಅಟ್ಟಹಾಸ ಮೆರೆದರೆ ಮತ್ತೊಂದು ಕಡೆ ಕಾಗಿನಾ ನದಿ ತನ್ನ ರುದ್ರನರ್ತನ ಮುಂದುವರಿಸಿದೆ. ಜಿಲ್ಲೆಯ ಚಿತ್ತಾಪುರ ತಾಲೂಕಿನ ಮುತಗಾ ಗ್ರಾಮ ಸಂಪೂರ್ಣ ಜಲ ಪ್ರಳಯಕ್ಕೆ ತುತ್ತಾಗಿದೆ. ಗ್ರಾಮದ ಸುಮಾರು 500ಕ್ಕೂ ಹೆಚ್ಚಿನ ಮನೆಗಳು ಜಲ ಸಮಾಧಿಯಾಗಿವೆ.