ರಾಯಚೂರು: ಕಳೆದ ಎರಡು ವರ್ಷಗಳಿಂದಲೂ ಪ್ರವಾಹ ಬರುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ರಾಯಚೂರು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಿದೆ.
ಕೃಷ್ಣ, ತುಂಗಭದ್ರಾ ನದಿಪಾತ್ರದ ಜನರಿಗೆ ಪ್ರವಾಹ ಮುನ್ಸೂಚನೆ ಬಗ್ಗೆ ಈಗಲೇ ಎಚ್ಚರಿಕೆಯನ್ನ ನೀಡುತ್ತಿದೆ. ಜಿಲ್ಲಾ ಅಗ್ನಿ ಶಾಮಕದಳ ಅಧಿಕಾರಿಗಳು ಹಾಗೂ ಅವರ ತಂಡ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತದಿಂದ ನೀಡಲಾದ ಬೋಟ್ ಮತ್ತು ಪ್ರವಾಹಕ್ಕೆ ಸಂಬಂಧಿಸಿದ ಸಲಕರಣೆ ಸುರಕ್ಷತೆಯ ಕುರಿತು ಪರಿಶೀಲನೆಯನ್ನು ನಡೆಸಿದ್ದಾರೆ.
Advertisement
Advertisement
ಸಂಸದ ರಾಜಾ ಅಮರೇಶ್ವರ ನಾಯಕ ಹಾಗೂ ರಾಯಚೂರು ಉಪವಿಭಾಗದ ಸಹಾಯಕ ಆಯುಕ್ತ ಸಂತೋಷ ಕಾಮೇಗೌಡ ಸೇರಿ ಅಧಿಕಾರಿಗಳ ತಂಡ ರಾಯಚೂರು ತಾಲೂಕಿನ ಗುರ್ಜಾಪುರ ಗ್ರಾಮಕ್ಕೆ ಭೇಟಿ ನೀಡಿ, ಸ್ಥಳಾಂತರ ಸೇರಿದಂತೆ ಅಲ್ಲಿನ ಸ್ಥಿತಿಗತಿಗಳ ಪರಿಶೀಲನೆ ಮಾಡಿದ್ದಾರೆ. ಗ್ರಾಮಸ್ಥರಿಗೆ ಪುನರ್ವಸತಿಯ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಮದ್ವೆಯಾದ ಮೊದಲ ರಾತ್ರಿಯೇ ತಾನು ಯಾವುದಕ್ಕೂ ಉಪಯೋಗವಿಲ್ಲದವನೆಂದ ವರ- ವಧು ಕಂಗಾಲು
Advertisement
ಕೃಷ್ಣ ಪ್ರವಾಹದಿಂದ ಲಿಂಗಸುಗೂರು, ದೇವದುರ್ಗ, ರಾಯಚೂರು ತಾಲೂಕಿನ ನದಿ ಪಾತ್ರದ ಗ್ರಾಮಗಳ ಮೇಲೆ ಪರಿಣಾಮ ಬೀರುತ್ತದೆ. ಲಿಂಗಸುಗೂರು ಹಾಗೂ ರಾಯಚೂರು ತಾಲೂಕಿನ ನಡುಗಡ್ಡೆಗಳಲ್ಲಿ ಜನವಸತಿ ಇರುವುದರಿಂದ ಪ್ರತೀ ವರ್ಷ ಸಂಕಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಮುಂಚಿತವಾಗಿಯೇ ಕ್ರಮಗಳನ್ನ ತೆಗೆದುಕೊಳ್ಳಲು ಮುಂದಾಗಿದೆ.