ಚಿಕ್ಕೋಡಿ: ಚಾಲಕನ ನಿಯಂತ್ರಣ ತಪ್ಪಿ ಜಾನುವಾರು ಹೊತ್ತೊಯ್ಯುತ್ತಿದ್ದ ವಾಹನ ಪ್ರವಾಹದಲ್ಲಿ ಪಲ್ಟಿಯಾಗಿದ್ದು, ವಾಹನದಲ್ಲಿದ್ದ ಜಾನುವಾರುಗಳು ಸಾವುನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೊಳವಾಡ ಗ್ರಾಮದ ಬಳಿ ನಡೆದಿದೆ.
ಕೃಷ್ಣಾ ನದಿ ನೀರು ಮೊಳವಾಡ ಗ್ರಾಮಕ್ಕೆ ನುಗ್ಗಿದ ಪರಿಣಾಮ ಈ ದುರ್ಘಟನೆ ನಡೆದಿದೆ. ಪ್ರವಾಹದ ಭೀತಿಯಿಂದ ಮೊಳವಾಡ ಗ್ರಾಮದಿಂದ ಕುಸನಾಳ ಗ್ರಾಮಕ್ಕೆ ಜಾನುವಾರು ಮತ್ತು ಮಹಿಳೆಯನ್ನು ಸ್ಥಳಾಂತರಿಸುವಾಗ ಈ ಘಟನೆ ನಡೆದಿದೆ. ಮಹಿಳೆ ಮತ್ತು ಜಾನುವಾರ ಸಮೇತ ಸೇತುವೆ ಮೇಲೆ ಹರಿಯುವ ನೀರಿನಲ್ಲಿ ವಾಹನ ಚಲಾಯಿಸಿದ್ದು, ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಗೂಡ್ಸ್ ವಾಹನ ನೀರಿನಲ್ಲಿ ಪಲ್ಟಿಯಾಗಿದೆ. ವಾಹನದಲ್ಲಿದ್ದ ಮಹಿಳೆ ಹಾಗೂ ಚಾಲಕನನ್ನು ಸ್ಥಳೀಯರು ರಕ್ಷಿಸಿದಾರೆ. ಆದರೆ ವಾಹನದಲ್ಲಿದ್ದ ಜಾನುವಾರುಗಳು ಹೊರತೆಗೆಯಲಾಗದೇ ಎರಡು ಎಮ್ಮೆ ಹಾಗೂ ಒಂದು ಹಸು ನೀರಿನಲ್ಲಿ ಮುಳುಗಿ ಸಾವನ್ನಪ್ಪಿವೆ.
ಎಮ್ಮೆ ರಕ್ಷಿಸಿದ ಯುವಕ
ಕೃಷ್ಣೆಯ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದ ಎಮ್ಮೆಯನ್ನು ಯುವಕ ಪ್ರಾಣದ ಹಂಗು ತೊರೆದು ರಕ್ಷಣೆ ಮಾಡಿದ್ದಾನೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸತ್ತಿ ಗ್ರಾಮದ ಕೃಷ್ಣಾ ನದಿಯ ಪ್ರವಾಹದಲ್ಲಿ ಕೊಚ್ಚಿಹೋಗುತ್ತಿದ್ದ ಎಮ್ಮೆಯ ರಕ್ಷಣೆ ಮಾಡಿದ್ದಾರೆ. ಯುವಕ ಆನಂದ ಚಿನಗುಂಡಿ, ಮನೋಜ್ ಗಂಗಪ್ಪನವರ ಅವರಿಗೆ ಸೇರಿದ್ದ ಎಮ್ಮೆಯ ರಕ್ಷಣೆ ಮಾಡಿದ್ದಾರೆ.