– ಪರಿಹಾರ ನೀಡಲು ಹಣದ ಕೊರತೆಯಿಲ್ಲ
ರಾಯಚೂರು: ಮುಂದಿನ ಅಧಿವೇಶನದಲ್ಲಿ ಕಂದಾಯ ಇಲಾಖೆಯ ಹೊಸ ಕಾಯ್ದೆಗಳನ್ನ ಜಾರಿ ಮಾಡುವುದಾಗಿ ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.
ರಾಯಚೂರಿನಲ್ಲಿ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಬಳಿಕ ಮಾತನಾಡಿದ ಸಚಿವರು, ರಾಜ್ಯದಲ್ಲಿ ಈ ಬಾರಿ ಪ್ರವಾಹದಿಂದ 8,071 ಕೋಟಿ ಹಾನಿಯಾಗಿದೆ. ಎನ್‍ಡಿಆರ್‍ಎಫ್ ನಿಯಮಾವಳಿ ಪ್ರಕಾರ 628 ಕೋಟಿ ಹಣ ಬೇಕಾಗಿದೆ. ಕೇಂದ್ರ ಸರ್ಕಾರ ಈಗಾಗಲೇ 325 ಕೋಟಿ ರೂಪಾಯಿ ನೀಡಿದೆ. ಪರಿಹಾರ ನೀಡಲು ಹಣದ ಕೊರತೆ ಇಲ್ಲ ಎಂದರು.
Advertisement
Advertisement
ನಾಳೆ ಮುಖ್ಯಮಂತ್ರಿಗಳು ಪ್ರವಾಹ ಅನುದಾನಕ್ಕಾಗಿ ದೆಹಲಿಗೆ ಹೋಗಲಿದ್ದಾರೆ. ಎರಡನೆಯ ಹಂತದ ಮಳೆ ಹಾನಿಯ ಬಗ್ಗೆ ಸಮೀಕ್ಷೆ ನಡೆಸಲಾಗುವುದು. ಜನರು ಹಾಗೂ ಜನಪ್ರತಿನಿಧಿಗಳ ಒತ್ತಾಯದ ಹಿನ್ನಲೆಯಲ್ಲಿ ಅರಕೇರಾ ನೂತನ ತಾಲೂಕು ಘೋಷಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮುದಗಲ್ ಹಾಗು ಗಬ್ಬೂರು ತಾಲೂಕು ಕೇಂದ್ರದ ಬಗ್ಗೆ ಪರಿಶೀಲಿಸಲಾಗುವುದು ಅಂತ ಹೇಳಿದರು.
Advertisement
Advertisement
ನಿರ್ಮಾಣ ಹಂತದಲ್ಲಿರುವ ರಾಯಚೂರು ಜಿಲ್ಲಾಡಳಿತ ಭವನ ನಗರದಿಂದ ದೂರವಾಗುತ್ತದೆ ಎಂಬ ಕಾರಣಕ್ಕೆ ಸ್ಥಳ ಬದಲಾವಣೆಯ ಬಗ್ಗೆ ಪರಿಶೀಲಿಸಲಾಗುತ್ತಿದೆ. ಮುಂದೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಅಂತ ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.