ಕಾರವಾರ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ನದಿಗಳು ತುಂಬಿ ಹರಿಯುತ್ತಿದ್ದು, ಪ್ರವಾಹ ಸೃಷ್ಟಿಸಿವೆ.
ಜಿಲ್ಲೆಯ ಅಘನಾಶಿನಿ, ಗಂಗಾವಳಿ, ಕಾಳಿ, ಶರಾವತಿ, ಚಂಡಿಕಾ, ವರದಾ ನದಿಗಳು ತುಂಬಿ ಹರಿಯುವ ಮೂಲಕ ಪ್ರವಾಹ ಸೃಷ್ಟಿಸಿದೆ. ಪ್ರವಾಹದಿಂದ 36 ಗ್ರಾಮಗಳು ಬಾಧಿತವಾಗಿದ್ದು, ಪ್ರವಾಹದಿಂದ ಓರ್ವ ವ್ಯಕ್ತಿ ಮೃತರಾಗಿದ್ದಾರೆ. ಸುಮಾರು 209ಕ್ಕೂ ಅಧಿಕ ಮನೆಗಳು ಭಾಗಶಃ ಹಾನಿಯಾಗಿದೆ. ಇನ್ನೂ ನಾಲ್ಕು ಸೇತುವೆಗಳು ಪ್ರವಾಹದಿಂದ ಮುಳುಗಡೆಯಾಗಿದ್ದು, 10 ರಸ್ತೆಗಳು ಸಂಪರ್ಕ ಕಡಿತಗೊಂಡಿದೆ.
Advertisement
Advertisement
ಜಿಲ್ಲೆಯಾದ್ಯಂತ ಈವರೆಗೆ 18 ಕಾಳಜಿ ಕೇಂದ್ರ ತೆರೆಯಲಾಗಿದ್ದು, ಅಲ್ಲಿ 699ಕ್ಕೂ ಹೆಚ್ಚು ಜನರು ಆಶ್ರಯ ಪಡೆದಿದ್ದಾರೆ. ಇಂದು ಪ್ರವಾಹದಿಂದ 125 ಹೆಕ್ಟೇರ್ ಕೃಷಿ ಕ್ಷೇತ್ರ, 536.98 ಹೆಕ್ಟೇರ್ ತೋಟಗಾರಿಕಾ ಕ್ಷೇತ್ರಗಳಿಗೆ ಹಾನಿ ಸಂಭವಿಸಿದೆ.
Advertisement
ಕಳೆದ 24 ಗಂಟೆ ಬಿದ್ದ ಮಳೆಯ ಪ್ರಮಾಣ:
ಅಂಕೋಲಾದಲ್ಲಿ 73.2 ಮಿ.ಮೀ, ಭಟ್ಕಳ 202.8 ಮಿ.ಮೀ, ಹೊನ್ನಾವರ 115.0 ಮಿ.ಮೀ, ಕಾರವಾರ 42.4 ಮಿ.ಮಿ, ಕುಮಟಾ 137.8 ಮಿ.ಮೀ, ಮುಂಡಗೋಡ 5.2 ಮಿ.ಮೀ, ಸಿದ್ದಾಪುರ 63.4 ಮಿ.ಮೀ ಶಿರಸಿ 74.5 ಮಿ.ಮೀ, ಜೋಯಡಾ 53.4 ಮಿ.ಮೀ, ಯಲ್ಲಾಪುರ 5.4 ಮಿ.ಮೀ. ಮಳೆಯಾಗಿದೆ.
Advertisement
ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ:
ಕದ್ರಾ: ಗರಿಷ್ಠ ಮಟ್ಟ 34.50 ಮೀಟರ್ ಆಗಿದ್ದರೆ, ಇಂದಿನ ಮಟ್ಟ 30.62 ಮೀಟರ್ ಆಗಿದೆ. 19,054 ಕ್ಯೂಸೆಕ್ ಒಳಹರಿವು ಇದ್ದರೆ, 15,478 ಕ್ಯೂಸೆಕ್ ಹೊರ ಹರಿವು ಇದೆ.
ಕೊಡಸಳ್ಳಿ: 75.50 ಮೀ (ಗರಿಷ್ಠ), ಇಂದು 71.05 ಮೀ, 10,461 ಕ್ಯೂಸೆಕ್ ಒಳ ಹರಿವು, 8,663 ಕ್ಯೂಸೆಕ್ ಹೊರ ಹರಿವು
ಸೂಪಾ: 564.00 ಮೀ (ಗರಿಷ್ಠ), ಇಂದು 542.70 ಮೀ, 21,887 ಕ್ಯೂಸೆಕ್ ಒಳ ಹರಿವು, ಹೊರ ಹರಿವು ಇಲ್ಲ
ತಟ್ಟಿಹಳ್ಳ: 468.38 ಮೀ (ಗರಿಷ್ಠ), ಇಂದು 461.91 ಮೀ, 1749 ಕ್ಯೂಸೆಕ್ ಒಳ ಹರಿವು, ಹೊರ ಹರಿವು ಇಲ್ಲ
ಬೊಮ್ಮನಹಳ್ಳಿ: 438.38 ಮೀ (ಗರಿಷ್ಠ), 436.20 ಮೀ , 1,737 ಕ್ಯೂಸೆಕ್ ಒಳ ಹರಿವು 3,400 ಕ್ಯೂಸೆಕ್ ಹೊರ ಹರಿವು
ಗೇರುಸೊಪ್ಪ: 55.00 ಮೀ (ಗರಿಷ್ಠ), 51.75 ಮೀ, 7,229 ಕ್ಯೂಸೆಕ್ ಒಳ ಹರಿವು 6,760 ಕ್ಯೂಸೆಕ್ ಹೊರ ಹರಿವು
ಮುಂದಿನ ಐದು ದಿನಗಳ ಕಾಲ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಇಂದು ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಕರಾವಳಿ ಭಾಗದಲ್ಲಿ ತೀವ್ರ ಮಳೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆಯ ಎಲ್ಲ ಕಡಲ ತೀರಗಳಿಗೆ ಪ್ರವಾಸಿಗರು ಹಾಗೂ ಸಾರ್ವಜನಿಕರು ತೆರಳದಂತೆ ನಿಷೇಧಿಸಲಾಗಿದೆ.