ಜಕಾರ್ತಾ: ನಿನ್ನೆ ಆಗಿರುವ ಪ್ರವಾಹದ ನಂತರ ಇಂಡೋನೇಷ್ಯಾ ರಸ್ತೆಗಳಲ್ಲಿ ಕೆಂಪು ಬಣ್ಣದ ನೀರು ಹರಿದು ಬರುತ್ತಿರುವ ವಿಚಿತ್ರ ಫೋಟೋ ಹಾಗೂ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡುತ್ತಿವೆ.
Advertisement
ಸೆಂಟ್ರಲ್ ಜಾವಾದ ಪೆಕಲಂಗಾನ್ ಸಮೀಪದ ಜೆನ್‍ಗಾಟ್ ಎಂಬ ಗ್ರಾಮದಲ್ಲಿ ಪ್ರವಾಹ ಅಪ್ಪಳಿಸಿದೆ. ಇಲ್ಲಿನ ಬಟೀಕ್ ಫ್ಯಾಕ್ಟರಿಯ ಡೈನೊಂದಿಗೆ ಬೆರೆತ ಪ್ರವಾಹದ ನೀರು ಕಡುಕೆಂಪು ಬಣ್ಣಕ್ಕೆ ತಿರುಗಿದೆ. ರಸ್ತೆಗಳ ಮೇಲೆ ಹರಿದು ಬಂದಿರುವ ನೀರು ರಕ್ತದಂತೆ ಭಾಸವಾಗಿದೆ. ಸಾವಿರಾರು ಮಂದಿ ಈ ಫೊಟೋ ಮತ್ತು ವೀಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
Advertisement
Advertisement
ಈ ನಗರದ ಸುತ್ತಮುತ್ತಲಿನ ನದಿಗಳು ಬೇರೆ ಬೇರೆ ಬಣ್ಣಗಳಿಗೆ ತಿರುಗುವುದು ಹೊಸ ವಿಚಾರವಲ್ಲ. ಕಳೆದ ತಿಂಗಳು ಉಂಟಾದ ಪ್ರವಾಹದಿಂದ ನದಿಯೊಂದು ಹಸಿರು ಬಣ್ಣಕ್ಕೆ ತಿರುಗಿತ್ತು. ಹೀಗೆ ಕೆಂಪು ಬಣ್ಣದ ನೀರು ರಕ್ತದಂತೆ ಕಾಣುತ್ತಿದೆ. ಈ ಫೋಟೋವನ್ನು ಬಳಸಿಕೊಂಡು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರಾ..? ಎಂದೆಲ್ಲಾ ಸಾಮಾಜಿಕಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ.
Advertisement