ನವದೆಹಲಿ: ಆಗಸ್ಟ್ 12ರವರೆಗೆ ಎಲ್ಲ ಪ್ರಯಾಣಿಕ ರೈಲುಗಳ ಸಂಚಾರವನ್ನು ಭಾರತೀಯ ರೈಲ್ವೇ ಬೋರ್ಡ್ ರದ್ದು ಮಾಡಿದೆ. ಪ್ರತಿದಿನದ ಮೇಲ್, ಇಎಂಯು, ಪ್ಯಾಸೆಂಜರ್ ರೈಲುಗಳು, ಎಕ್ಸಪ್ರೆಸ್, ಸರ್ಬಬನ್ ರೈಲುಗಳ ಸಂಚಾರವೂ ಸ್ಥಗಿತಗೊಳ್ಳಲಿದೆ.
ಆಗಸ್ಟ್ 12ವರೆಗೆ ಸೀಟು ಕಾಯ್ದಿರಿಸಿದ್ದ ಹಣ ಶೇ.100ರಷ್ಟು ರಿಫಂಡ್ ಆಗಲಿದೆ. ಮೇ 13ರಂದು ಹೊರಡಿಸಿದ್ದ ಆದೇಶದಲ್ಲಿ ಜೂನ್ 30ರವರಗೆ ರೆಗ್ಯೂಲರ್ ರೈಲುಗಳ ಬಂದ್ ಆಗಲಿದೆ ಎಂದು ಹೇಳಿತ್ತು. ಇದೀಗ ದಿನಾಂಕವನ್ನು ಆಗಸ್ಟ್ 12ರವರೆಹೆ ಮುಂದೂಡಿದೆ. ಮೇ 12ರಿಂದ ಆರಂಭವಾಗಿರುವ ರಾಜಧಾನಿ ಸೇರಿದಂತೆ ವಿಶೇಷ ರೈಲುಗಳ ಸಂಚಾರ ಎಂದಿನಂತೆ ಇರಲಿದೆ.
Advertisement
Advertisement
ರೈಲ್ವೇ ನಿಯಮಗಳ ಪ್ರಕಾರ, ಪ್ರಯಾಣಿಕರು 120 ದಿನಗಳ ಮುಂಚೆಯೇ ಟಿಕೆಟ್ ಬುಕ್ ಮಾಡಬಹುದು. ಏಪ್ರಿಲ್ ನಲ್ಲಿ ಪ್ರಯಾಣಿಕರು ಬುಕ್ ಮಾಡಿದ ಟಿಕೆಟ್ ಹಣ ಹಿಂದಿರುಗಿಸಲಾಗಿದೆ. ಜುಲೈನಲ್ಲಿ ಬುಕ್ ಮಾಡಿದ ಟಿಕೆಟ್ ಮೊತ್ತ ರಿಫಂಡ್ ಆಗಲಿದೆ ಎಂದು ಭಾರತೀಯ ರೈಲ್ವೇ ಬೋರ್ಡ್ ಬಂದ್ ಹೇಳಿದೆ. ದೇಶದಲ್ಲಿ ಕೊರೊನಾ ಸೋಂಕಿಕತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ.