ಪ್ರಪೋಸ್ ನಂತ್ರ 650 ಅಡಿ ಬಂಡೆಯಿಂದ ಕೆಳಗೆ ಬಿದ್ದ ಮಹಿಳೆ

Public TV
1 Min Read
woman

ವಿಯೆನ್ನಾ: ಪ್ರೇಮ ನಿವೇದನೆ ಮಾಡಿ ಒಪ್ಪಿಗೆ ಸಿಕ್ಕ ತಕ್ಷಣವೇ ಮಹಿಳೆ 650 ಅಡಿ ಬಂಡೆಯ ಮೇಲಿಂದ ಕೆಳಗೆ ಬಿದ್ದ ಘಟನೆ ವರದಿಯಾಗಿದೆ.

ಆಸ್ಟ್ರೀಯಾದ ಕ್ಯಾರಿಂಥಿಯಾದಲ್ಲಿ 27 ವರ್ಷದ ಯುವಕನೊಬ್ಬ 37 ವರ್ಷದ ಮಹಿಳೆಗೆ ಫಾಲರ್ಟ್ ಪರ್ವತದ ಮೇಲೆ ನಿಂತು ಪ್ರೇಮ ನಿವೇದನೆ ಮಾಡಿದ್ದ. ಇದನ್ನು ಒಪ್ಪಿಕೊಂಡ ಮರು ಕ್ಷಣವೇ ಮಹಿಳೆ ಕಾಲು ಜಾರಿ 650 ಅಡಿ ಕೆಳಕ್ಕೆ ಬಿದ್ದಿದ್ದಾಳೆ. ದಂಪತಿ ಒಂದು ದಿನದ ಹಿಂದೆ ಪರ್ವತಕ್ಕೆ ಚಾರಣ ಹೋಗಿದ್ದರು.

Capture

650 ಅಡಿ ಎತ್ತರದಿಂದ ಕೆಳಗೆ ಬಿದ್ದಿದ್ದರೂ ಮಹಿಳೆ ಆಶ್ಚರ್ಯಕರವಾಗಿ ಬದುಕುಳಿದಿದ್ದಾರೆ. ಮಹಿಳೆ ಬಿದ್ದ ತಕ್ಷಣ ಸಂಗಾತಿ ಆಕೆಯನ್ನು ಹಿಡಿದು ರಕ್ಷಿಸಲು ಪ್ರಯತ್ನಿಸಿದ್ದಾನೆ. ಈ ವೇಳೆ ಆತನೂ ಆಕೆಯೊಂದಿಗೆ ಕಾಲು ಜಾರಿ 50 ಅಡಿ ಕೆಳಕ್ಕೆ ಬಿದ್ದು ಒಂದು ಬಂಡೆಯನ್ನು ಹಿಡಿದು ರಕ್ಷಣೆಗಾಗಿ ಕೂಗಿಕೊಂಡಿದ್ದಾನೆ. ಈತನ ಧ್ವನಿ ಕೇಳಿಸಿಕೊಂಡ ಅದೇ ದಾರಿಯಲ್ಲಿ ಹೋಗುತ್ತಿದ್ದ ಕೆಲವರು ಬಂದು ನೋಡಿದ್ದಾರೆ. ಈ ವೇಳೆ ಮಹಿಳೆ ಪ್ರಜ್ಞೆತಪ್ಪಿ ಬಿದ್ದಿದ್ದನ್ನು ಗಮನಿಸಿ ಆಕೆಯನ್ನು ರಕ್ಷಣೆ ಮಾಡಿದ್ದಾರೆ. ನಂತರ ಬಂಡೆಹಿಡಿದು ನಿಂತಿದ್ದ ಯುವಕನನ್ನು ಹೆಲಿಕಾಪ್ಟರ್ ಸಹಾಯದಿಂದ ಸುರಕ್ಷಿತವಾಗಿ ಕಾಪಾಡಲಾಗಿದೆ.

love propose 1

ಇವರಿಬ್ಬರೂ ಅದೃಷ್ಟವಂತರು ಹಿಮಪಾತವಾಗದೆ ಇದ್ದ ಕಾರಣ ಬದುಕುಳಿದಿದ್ದಾರೆ. ಇಲ್ಲವೆಂದಿದ್ದರೆ ಪರಿಸ್ಥಿತಿ ಬೇರೆಯಾಗುತ್ತಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಘಟನೆಯ ಕುರಿತು ತಿಳಿಸಿದ್ದಾರೆ. ಇಬ್ಬರನ್ನೂ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿದೆ. ಯುವಕನ ಮೂಳೆ ಮುರಿತವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ರೀತಿ ಘಟನೆಗಳು ಹಿಂದೆಯೂ ವರದಿಯಾಗಿತ್ತು. ಸೆಪ್ಟೆಂಬರ್ ತಿಂಗಳಿನಲ್ಲಿ ಯುವ ಜೋಡಿಯೊಂದು ಪ್ರೇಮ ಸಲ್ಲಾಪದಲ್ಲಿದ್ದಾಗ ಚಲಿಸುತ್ತಿದ್ದ ದೋಣಿ ಮಗುಚಿ ನೀರಿಗೆ ಬೀಳುವಂತಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *