ನವದೆಹಲಿ: ದೇಶದ ರಾಷ್ಟ್ರಪತಿ, ಉಪ ರಾಷ್ಟ್ರಪತಿ ಹಾಗೂ ಪ್ರಧಾನಿಗಳ ಪ್ರವಾಸಕ್ಕಾಗಿ ವಿಶೇಷವಾಗಿ ತಯಾರಿಸಲ್ಪಟ್ಟ ಏರ್ ಇಂಡಿಯಾ ಒನ್ ವಿಮಾನ ಇಂದು ಭಾರತ ತಲುಪಿದೆ.
ಅಮೆರಿಕಾದಿಂದ ದೆಹಲಿಯ ಏರ್ ಪೋರ್ಟ್‍ಗೆ ಏರ್ ಇಂಡಿಯಾ ಒನ್ ಬಂದಿಳಿಯಿತು. ಆಗಸ್ಟ್ ನಲ್ಲಿಯೇ ಈ ವಿಮಾನ ಭಾರತಕ್ಕೆ ಹಸ್ತಾಂತರ ಆಗಬೇಕಿತ್ತು. ಆದರೆ ತಾಂತ್ರಿಕ ಕಾರಣಗಳಿಂದಾಗಿ ಇದೀಗ ಏರ್ ಇಂಡಿಯಾ ಒನ್ ದೆಹಲಿ ತಲುಪಿದೆ.
Advertisement
Advertisement
ಅಮೆರಿಕಾ ಅಧ್ಯಕ್ಷರು ಬಳಸುವ ಏರ್ ಫೋರ್ಸ್ ಒನ್ ಮಾದರಿಯಲ್ಲಿಯೇ ಎರಡು ಬೋಯಿಂಗ್-777 ವಿಮಾನಗಳನ್ನು ಏರ್ ಇಂಡಿಯಾ ಒನ್ ಹೆಸರಲ್ಲಿ ತಯಾರಿಸಲು ಆರ್ಡರ್ ನೀಡಲಾಗಿತ್ತು. ಸದ್ಯ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ಪ್ರಧಾನಿ ಪ್ರವಾಸಕ್ಕೆ ಬೋಯಿಂಗ್-747 ವಿಮಾನವನ್ನು ಬಳಸಲಾಗುತ್ತಿದೆ. ಮತ್ತೊಂದು ಬೋಯಿಂಗ್-777 ಏರ್ ಇಂಡಿಯಾ ಒನ್ ವಿಮಾನ ಮುಂದಿನ ದಿನಗಳಲ್ಲಿ ಭಾರತಕ್ಕೆ ಹಸ್ತಾಂತರ ಆಗಲಿದೆ.
Advertisement
#WATCH: VVIP aircraft Air India One that will be used for President, Vice President & PM arrives at Delhi International Airport from US.
It is equipped with advance communication system which allows availing audio & video communication function at mid-air without being hacked. pic.twitter.com/4MtXHi8F9O
— ANI (@ANI) October 1, 2020
Advertisement
ಏರ್ ಇಂಡಿಯಾ ಒನ್ ವಿಶೇಷತೆ:
ಅತ್ಯಾಧುನಿಕ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ವಿಮಾನ ಹೊಂದಿದ್ದು, 1,300 ಕೋಟಿ ರೂ. ಮೌಲ್ಯದ ಅಲ್ಟ್ರಾ ಸೂಪರ್ ವಿಮಾನ ಇದಾಗಿದೆ. ವಿವಿಐಪಿಗಳಿಗೆ ದೊಡ್ಡ ಕ್ಯಾಬಿನ್, ಮಿನಿ ಮೆಡಿಕಲ್ ಸೆಂಟರ್ ಸೇರಿದಂತೆ ನಿರಂತರವಾಗಿ 17 ಗಂಟೆ ಕಾಲ ಹಾರುವ ಸಾಮಥ್ರ್ಯವನ್ನು ಹೊಂದಿದೆ. ಬಹುತೇಕ ಬ್ಯುಸಿನೆಸ್ ಕ್ಲಾಸ್ ಸೀಟ್ ಅಳವಡಿಕೆ ಮಾಡಲಾಗಿದ್ದ, ವಾಯುಸೇನೆ ಪೈಲಟ್‍ಗಳಿಂದ ಮಾತ್ರ ಚಾಲನೆ ಮಾಡಲಾಗುತ್ತದೆ. ಈ ವಿಮಾನ ಅತ್ಯಾಧುನಿಕ ಸಂವಹನ ವ್ಯವಸ್ಥೆಯನ್ನು ಹೊಂದಿದ್ದು, ಹ್ಯಾಕ್ ಮಾಡದೆ ಮಧ್ಯ ಗಾಳಿಯಲ್ಲಿ ಆಡಿಯೋ ಮತ್ತು ವಿಡಿಯೋ ಸಂವಹನ ಕಾರ್ಯವನ್ನು ಮಾಡುವ ಸಾಮರ್ಥ್ಯವನ್ನು ಹೊಂದಿದೆ.
Air India One Arriving at Indira Gandhi International Airport Video Footage : pic.twitter.com/Y1lhytG6B8
— Guarding India (@guardingindia) October 1, 2020