– ಗಡಿ ವಿಚಾರದಲ್ಲಿ ಪ್ರಧಾನಿ ಮೋದಿ ಸುಳ್ಳು ಹೇಳಿದ್ದಾರೆ
ನವದೆಹಲಿ: ಗಲ್ವಾನ್ ವ್ಯಾಲಿಯಲ್ಲಿ ನಡೆದ ಚೀನಾ ಹಾಗೂ ಭಾರತದ ಗಡಿ ವಿಚಾರದ ಕುರಿತು ಪ್ರಧಾನಿ ನರೇಂದ್ರ ಮೋದಿ ಸುಳ್ಳು ಹೇಳಿದ್ದಾರೆ. ಭಾರತದ ಭೂಮಿಯನ್ನು ಆಕ್ರಮಿಸಿಕೊಳ್ಳಲು ಚೀನಾಗೆ ಅವಕಾಶ ನೀಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
सभी को भारतीय सेना की क्षमता और शौर्य पर विश्वास है।
सिवाय प्रधानमंत्री के-
जिनकी कायरता ने ही चीन को हमारी ज़मीन लेने दी।
जिनका झूठ सुनिश्चित करेगा कि वो चीन के पास ही रहेगी।
— Rahul Gandhi (@RahulGandhi) August 16, 2020
ಟ್ವೀಟ್ ಮಾಡಿ ಕೇಂದ್ರ ಸರ್ಕಾರ ಹಾಗೂ ನರೇಂದ್ರ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹೊರತುಪಡಿಸಿ ಭಾರತೀಯ ಸೈನ್ಯದ ಶೌರ್ಯ ಹಾಗೂ ಸಾಮಥ್ರ್ಯದ ಬಗ್ಗೆ ಸರ್ವರಿಗೂ ವಿಶ್ವಾಸವಿದೆ. ಪ್ರಧಾನಿ ಮೋದಿಯ ಹೇಡಿತನದಿಂದ ಚೀನಾ ಭಾರತದ ಜಾಗವನ್ನು ಆಕ್ರಮಿಸಿಕೊಂಡಿದೆ. ಅವರ ಗೊಂದಲಮಯ ಸುಳ್ಳುಗಳೇ ಇದನ್ನು ಖಚಿತಪಡಿಸುತ್ತವೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಭಾರತದ ಭೂಮಿಯನ್ನು ಚೀನಾ ಆಕ್ರಮಿಸಿಕೊಂಡಿದೆ, ಕೇಂದ್ರ ಸರ್ಕಾರ ಇದನ್ನು ಮುಚ್ಚಿಡುತ್ತಿದೆ ಎಂದು ಇತ್ತೀಚೆಗೆ ರಾಹುಲ್ ಗಾಂದಿ ಟ್ವೀಟ್ ಮಾಡುವ ಆರೋಪಿಸಿದ್ದರು. ಇದೀಗ ಗಡಿ ವಿಚಾರವಾಗಿ ಮತ್ತೊಮ್ಮೆ ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ.
ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಸಹ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆಗೆ ತಿರುಗೇಟು ನೀಡಿದ್ದರು. ನಿಮ್ಮ ಗೊಂದಲದ ಹೇಳಿಕೆಯಿಂದಲೇ ನೀವು ಸುಳ್ಳು ಹೇಳುತ್ತಿದ್ದೀರಿ ಎಂಬುದು ತಿಳಿಯುತ್ತದೆ ಎಂದು ಹರಿಹಾಯ್ದಿದ್ದರು. ಇದೀಗ ರಾಹುಲ್ ಗಾಂಧಿ ಸಹ ವಾಗ್ದಾಳಿ ನಡೆಸಿದ್ದಾರೆ.