ದಾವಣಗೆರೆ: ಕೊರೊನಾ ಬಂದಾಗಿನಿಂದ ಮಾಸ್ಕ್ ಪ್ರತಿಯೊಬ್ಬರ ಸಂಗಾತಿಯಾಗಿದೆ. ಬೆಣ್ಣೆ ನಗರಿಯಲ್ಲಿ ತಯಾರಾದ ಮಾಸ್ಕ್ ಪ್ರಧಾನಿಯವರೆಗೂ ತಲುಪಿ ಹೆಸರುವಾಸಿಯಾಗಿದೆ. ಅಲ್ಲದೆ ಪ್ರಧಾನಿ ಮೋದಿಯವರು ಈ ಮಾಸ್ಕ್ ಧರಿಸಿದ್ದು, ತಯಾರಿಸಿದವರಿಗೆ ಪ್ರಶಂಸನೀಯ ಪತ್ರವನ್ನು ಕೂಡ ನೀಡಿದ್ದಾರೆ.
Advertisement
ದಾವಣಗೆರೆಯ ಎಂಸಿಸಿ ಬಿ-ಬ್ಲಾಕ್‍ನ ಕುವೆಂಪು ನಗರದ ಸಾಮಾಜಿಕ ಕಾರ್ಯಕರ್ತ ಕೆ.ಪಿ ವಿವೇಕಾನಂದ ಅವರ ಮನೆಗೆ ಸ್ವತಃ ಪ್ರಧಾನಿ ಕಚೇರಿಯಿಂದ ಈ ಪ್ರಶಂಸನೀಯ ಪತ್ರ ಬಂದಿದೆ. ಕೊರೊನಾ ಲಾಕ್‍ಡೌನ್ ಸಂಕಷ್ಟದ ನಂತರ ಅರ್ಥಿಕ ಪುನಶ್ಚೇನಕ್ಕೆ ಅನ್ಲಾಕ್ ವರ್ಷನ್ ಆರಂಭವಾಯ್ತು. ಇದರ ಭಾಗವಾಗಿ ಪ್ರಧಾನಿಯವರು ಆತ್ಮನಿರ್ಭರ್ ಎಂಬ ಪರಿಕಲ್ಪನೆಯನ್ನು ಜಾಗೃತಗೊಳಿಸಿದರು. ದೇಸಿ ಉತ್ಪನ್ನಗಳಿಗೆ ಮಾನ್ಯತೆ ನೀಡುವ ಜೊತೆ ಎಲ್ಲ ಸ್ಥರಗಳಲ್ಲೂ ಅರ್ಥಿಕ ಅಭಿವೃದ್ಧಿ ಅಂಶಗಳನ್ನು ಹೊಂದಿತ್ತು. ಕೊರೊನಾ ಹೆಮ್ಮಾರಿ ಸೋಂಕಿನ ಹಿನ್ನೆಲೆ ಮಾಸ್ಕ್ ಗೆ ಸಾಕಷ್ಟು ಬೇಡಿಕೆ ಸೃಷ್ಟಿಯಾಗಿತ್ತು. ಬಳಸಿ ಬಿಸಾಡುವ ಮಾಸ್ಕ್ ಗಿಂತ ಮರುಬಳಕೆ ಮಾಡುವ ಹಾಗೂ ಸುರಕ್ಷಿತ ಮಾಸ್ಕ್ ನೀಡುವ ಉದ್ದೇಶದಿಂದ ಕೆ.ಪಿ. ವಿವೇಕಾನಂದ ಪಕ್ಕ ಕಾಟನ್ ಬಟ್ಟೆಯಿಂದ ಮಾಸ್ಕ್ ತಯಾರಿಸುವ ಚಿಂತನೆ ನಡೆಸುವ ಜೊತೆ ಕಾರ್ಯಯೋಜನೆಯನ್ನು ಜಾರಿಗೆ ತಂದರು. ಇದರಿಂದ ವಿವೇಕಾನಂದ ಅವರ ಕುಟುಂಬಸ್ಥರು ಹಾಗೂ ಸ್ನೇಹಿತರು ಎಲ್ಲರೂ ಸೇರಿ ದಾವಣಗೆರೆ ಹೆಸರು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ.
Advertisement
Advertisement
ಮಾಸ್ಕ್ ಗೆ ಕಾಟನ್ ಬಟ್ಟೆ ಹಾಗೂ ಕ್ಯಾನ್ವಾಸ್ ಬಳಸಿದ್ದರಿಂದ ಮಾಸ್ಕ್ ಸ್ಟಿಫ್ ಆಗಿತ್ತು. ನೋಡಲು ಸಹಾ ಸುಂದರವಾಗಿತ್ತು. ಆರಂಭದಲ್ಲಿ ದಾವಣಗೆರೆಗೆ ಮಾತ್ರ ಸೀಮಿತಗೊಳಿಸಿ ಮಾಸ್ಕ್ ತಯಾರಿಸಿದ್ರು. ನಂತರ ಅದನ್ನು ಪ್ರಧಾನಿ ಅವರಿಗೂ ತಲುಪಿಸುವ ಆಸೆ ಮೂಡಿತು. ರಂಜಿತ್ ಸಿಂಗ್ ಅವ ಸೊಸೆ ಕವಿತಾದೇವಿ ಹಾಗೂ ವಿವೇಕಾನಂದ ಅವರ ಮಗಳು ಕಾವ್ಯಾ ಹೆಸರಿನಲ್ಲಿ ಪ್ರಧಾನಿ ಅವರಿಗೆ ಇಂಡಿಯನ್ ಪೋಸ್ಟ್ ನ ಸ್ಪೀಡ್ ಪೋಸ್ಟ್ ಮೂಲಕ ಪ್ರಧಾನಿ ಕಚೇರಿಗೆ ಕೇಸರಿ, ಬಿಳಿ, ಹಸಿರು ಮೂರು ಬಣ್ಣದ ಪ್ರತ್ಯೇಕ ಮೂರು ಮಾಸ್ಕ್ ಗಳನ್ನು ಕಳುಹಿಸಿದ್ದರು. ಕೆಲವು ದಿನಗಳ ಕಾಲ ಯಾವುದೇ ಉತ್ತರ ಬರಲಿಲ್ಲ. ಹಲವು ದಿನಗಳ ಬಳಿಕ ಮೋದಿಜಿ ಅವರ ಒಂದು ವಿಶೇಷ ಫೋಟೋ ಸ್ನೇಹಿತರು ಕಳುಹಿಸಿದ್ದರು. ಅಲ್ಲ ದಾವಣಗೆರೆಯಿಂದ ಕಳುಹಿಸಿದ್ದ ಮಾಸ್ಕ್ ಅನ್ನು ಮೋದಿ ಅವರು ಧರಿಸಿದ್ದ ಭಾವಚಿತ್ರ ಕಂಡು ವಿವೇಕಾನಂದ ಹಾಗೂ ಅವರ ಸ್ನೇಹಿತರು ಮೂಕವಿಸ್ಮಿತರಾಗಿದ್ದರು. ಅಲ್ಲದೆ ಕೆಲ ದಿನಗಳ ನಂತರ ಪ್ರಧಾನಿ ಕಚೇರಿಯಿಂದ ಇವರ ಕುಟುಂಬಕ್ಕೆ ಪ್ರಶಂಸನೀಯ ಪತ್ರವನ್ನು ಕಳುಹಿಸಿದ್ದು, ಇದನ್ನು ನೋಡಿದ ವಿವೇಕಾನಂದರವರ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದರು.
Advertisement
ಆತ್ಮನಿರ್ಭರ್ ಪರಿಕಲ್ಪನೆಯಲ್ಲಿ ಹುರುಳಿಲ್ಲ ಎಂಬ ವಿರೋಧಿಗಳ ಕೂಗು ಜೋರಾಗಿತ್ತು. ಈ ಪರಿಕಲ್ಪನೆ ಕೇವಲ ಕಲ್ಪನೆಯಲ್ಲಿ ಅದು ಕೃತಿಯಲ್ಲಿ ಜಾರಿಗೆ ಬಂದಿದೆ ಹಾಗೂ ಅದಕ್ಕೆ ದೇಶದ ಪ್ರಧಾನಿಯಾಗಿ ಪ್ರೋತ್ಸಾಹ ನೀಡುತ್ತೇನೆ ಎಂಬ ಮಹತ್ತರವಾದ ಸಂದೇಶವನ್ನು ಪ್ರಧಾನಿ ನರೇಂದ್ರ ಮೋದಿ ರವಾನಿಸಿದ್ದಾರೆ. ವಿವೇಕಾನಂದ ಹಾಗೂ ಟೀಂನ ಪರಿಶ್ರಮದಿಂದ ಆತ್ಮನಿರ್ಭರ ಪರಿಕಲ್ಪನೆಯಲ್ಲಿ ದಾವಣಗೆರೆ ದೇಶದಲ್ಲಿ ಮತ್ತೊಮ್ಮೆ ಯಶಸ್ಸಿನ ಕಹಳೆ ಮೊಳಗಿಸಿದೆ.