ನವದೆಹಲಿ: ಅಟೋಮೊಬೈಲ್ ಕಂಪನಿ ಕಿಯಾ ಬಿಡುಗಡೆ ಮಾಡಿದ ಸ್ಫೋರ್ಟ್ಸ್ ಯುಟಿಲಿಟಿ ವೆಹಿಕಲ್(ಎಸ್‌ಯುವಿ) ಸೋನೆಟ್ ಕಾರು ಪ್ರತಿ ಎರಡು ನಿಮಿಷಕ್ಕೆ ಒಂದು ಮಾರಾಟವಾಗುತ್ತಿದೆ ಎಂದು ಕಂಪನಿ ತಿಳಿಸಿದೆ.
ಸೆ.18 ರಂದು ಸೋನೆಟ್ ಕಾರು ಮಾರುಕಟ್ಟೆಗೆ ಬಿಡುಗಡೆಯಾಗಿದ್ದು, ಕೇವಲ 12 ದಿನದಲ್ಲಿ 9,266 ಕಾರು ಮಾರಾಟಗೊಂಡಿದೆ. ಕಿಯಾದ ಮೊದಲ ಕಾರು ಸೆಲ್ಟೋಸ್‌ಗೆ ಉತ್ತಮ ಬೇಡಿಕೆ ಇದ್ದು 9,079 ಕಾರುಗಳು ಮಾರಾಟಗೊಂಡಿದೆ.
Advertisement
Advertisement
ಸೆಪ್ಟೆಂಬರ್ ತಿಂಗಳಿನಲ್ಲಿ ಕಿಯಾ ಅತಿ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದ್ದು ಒಟ್ಟು 18,676 ಕಾರು ಮಾರಾಟ ಮಾಡಿದೆ. ಸೋನೆಟ್, ಸೆಲ್ಟೋಸ್ ಅಲ್ಲದೇ ದುಬಾರಿ ಬೆಲೆ ಇರುವ 331 ಕಾರ್ನಿವಾಲ್ ಕಾರನ್ನು ಕಿಯಾ ಮಾರಾಟ ಮಾಡಿದೆ.
Advertisement
ಕಿಯಾ ಮೋಟಾರ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕುಖಿಯುನ್ ಶಿಮ್ ಪ್ರತಿಕ್ರಿಯಿಸಿ, ಭಾರತೀಯ ವಾಹನ ಮಾರುಕಟ್ಟೆ ನಿರೀಕ್ಷೆಗಿಂತ ಉತ್ತಮ ವೇಗದಲ್ಲಿ ಚೇತರಿಸಿಕೊಳ್ಳುತ್ತಿದೆ. ಭಾರತೀಯ ಜನರ ಮನಸ್ಥಿತಿಗೆ ಅನುಗುಣವಾಗಿ ಬೆಲೆ, ವಿನ್ಯಾಸ ಮಾಡಿದ ಕಾರಣ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸೆಲ್ಟೋಸ್ ಮತ್ತು ಕಾರ್ನಿವಲ್ ಸಹ ಬೇಡಿಕೆ ಇದೆ. ಇದೇ ರೀತಿಯ ಬೆಂಬಲ ಮುಂದೆಯೂ ಸಿಗಲಿದೆ ಎಂಬ ವಿಶ್ವಾಸ ನಮಗಿದೆ ಎಂದು ಅವರು ಹೇಳಿದ್ದಾರೆ.
Advertisement
ಸೋನೆಟ್ ಎಂಟ್ರಿ ಲೆವೆಲ್ ಎಚ್‌ಟಿಇ ಸ್ಮಾರ್ಟ್‌ಸ್ಟ್ರೀಮ್ ಜಿ1.2 5 ಎಂಟಿ ಮಾದರಿಯ ಕಾರಿಗೆ ಶೋರೂಂನಲ್ಲಿ 6.71 ಲಕ್ಷ ರೂ. ದರವಿದೆ. ಒಟ್ಟು 17 ಮಾದರಿಯಲ್ಲಿ ಸೋನೆಟ್ ಕಾರು ಲಭ್ಯವಿದೆ. ಇದನ್ನೂ ಓದಿ: ಇಂದಿನಿಂದ ನೀವು ಕಡಿಮೆ ಬೆಲೆಗೆ ಕಾರು, ಬೈಕ್ ಖರೀದಿಸಬಹುದು
ಹುಂಡೈ ವೆನ್ಯೂ, ಮಾರುತಿ ಸುಜುಕಿ ವಿಟಾರ ಬ್ರೀಜಾ, ಮಹೀಂದ್ರಾ ಎಕ್ಸ್‌ಯುವಿ 300 ಮತ್ತು ಟಾಟಾ ನೆಕ್ಸನ್ ಕಾರುಗಳಿಗೆ ಸ್ಪರ್ಧೆ ನೀಡಲು ಕಿಯಾ ಕಂಪನಿ ಸೋನೆಟ್ ಬಿಡುಗಡೆ ಮಾಡಿದೆ.