ಲಕ್ನೋ: ಪತಿಗೆ ಪ್ರತಿ ತಿಂಗಳು 2 ಸಾವಿರ ರೂ. ಜೀವನಾಂಶ ನೀಡುವಂತೆ 58 ವರ್ಷದ ಮಹಿಳೆಗೆ ಕೋರ್ಟ್ ಆದೇಶಿಸಿದೆ.
ಮುಜಾಫರ್ ನಗರ ಜಿಲ್ಲಾ ನ್ಯಾಯಾಲಯ ಆದೇಶ ನೀಡಿದ್ದು, 62 ವರ್ಷದ ಕಿಶೋರಿ ಲಾಲ್ ಸೊಹಂಕರ್ ಟೀ ಅಂಗಡಿ ನಡೆಸುತ್ತಿದ್ದು, ಇವರಿಗೆ ಬೇರೆ ಯಾವುದೇ ಆದಾಯ ಮೂಲವಿಲ್ಲ. ಆದರೆ 58 ವರ್ಷದ ಇವರ ಪತ್ನಿ ಮುನ್ನಿ ದೇವಿ ಸೇನೆಯಿಂದ ನಿವೃತ್ತಿ ಹೊಂದಿದವರಾಗಿದ್ದಾರೆ. ಹೀಗಾಗಿ ಇವರಿಗೆ 12 ಸಾವಿರ ರೂ. ಪೆನ್ಷನ್ ಬರುತ್ತದೆ. ಇದರಲ್ಲಿ 2 ಸಾವಿರ ರೂ. ನೀಡುವಂತೆ ಕೋರ್ಟ್ ಆದೇಶಿಸಿದೆ.
Advertisement
Advertisement
ಕಿಶೋರ್ ಲಾಲ್ ಸೊಹಂಕರ್ ಮುಜಾಫರ್ ನಗರದ ಖಟುವಾಲಿಯಲ್ಲಿ ಟೀ ಅಂಗಡಿ ಇಟ್ಟುಕೊಂಡಿದ್ದು, ಸೇನೆಯಲ್ಲಿ ಕಾರ್ಯನಿರ್ವಹಿಸಿ ಇತ್ತೀಚೆಗೆ ನಿವೃತ್ತರಾಗಿರುವ ಇವರ ಪತ್ನಿ 12 ಸಾವಿರ ರೂ. ಪಿಂಚಣಿ ಪಡೆಯುತ್ತಾರೆ.
Advertisement
Advertisement
ಆರಂಭದಲ್ಲಿ ಕಿಶೋರಿ ಲಾಲ್ ಸೊಹಂಕರ್ ಪತ್ನಿಯನ್ನು ಮನೆಗೆ ಬರುವಂತೆ ನಿರ್ದೇಶಿಸಬೇಕೆಂದು ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಆದರೆ ಪತ್ನಿ ಇವರ ಜೊತೆಗೆ ಇರಲು ಒಪ್ಪಿಲ್ಲ. ಹೀಗಾಗಿ ಸೊಹಂಕರ್ ತನ್ನ ಜೀವನ ನಿರ್ವಹಣೆಗೆ ಪ್ರತಿ ತಿಂಗಳ ಹಣ ಕೊಡಿಸುವಂತೆ ಕೋರ್ಟ್ ಬಳಿ ಮನವಿ ಮಾಡಿದರು ಎಂದು ಸೊಹಂಕರ್ ಪರ ವಕೀಲ ಬಿ.ಕೆ.ತಾಯಲ್ ಅವರು ತಿಳಿಸಿದ್ದಾರೆ.
ಮಹಿಳೆಯರು ತಮ್ಮ ಗಂಡಂದಿರಿಗೆ ಜೀವನಾಂಶ ಕೊಡುವ ಪ್ರಕರಣಗಳು ನಮ್ಮ ದೇಶದಲ್ಲಿ ತುಂಬಾ ವಿರಳ. ಹೀಗಾಗಿ ಸೊಹಂಕರ್‍ಗೆ ಮಾಸಿಕ ಜೀವನಾಂಶ ನೀಡುವ ಕುರಿತು ಮುನ್ನಿ ದೇವಿಗೆ ನಿರ್ದೇಶನ ನೀಡುವಂತೆ ನ್ಯಾಯಾಲಯಕ್ಕೆ ಮನವರಿಕೆ ಮಾಡಲು ಸ್ವಲ್ಪ ಸಮಯ ಹಿಡಿಯಿತು ಎಂದು ವಕೀಲರು ತಿಳಿಸಿದ್ದಾರೆ.