ನೆಲಮಂಗಲ: ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದು ಕ್ಷೇತ್ರದ ಗೌರವ ಹೆಚ್ಚಿಸಿರುವ 12 ವಿದ್ಯಾರ್ಥಿಗಳಿಗೆ ಶ್ರೀ ಸಾಯಿ ಫೌಂಡೇಶನ್ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಣೆ ಮಾಡಿ ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ಮಾತನಾಡಿದ ಟಿ.ದಾಸರಹಳ್ಳಿಯ ಮಾಜಿ ಶಾಸಕ ಮುನಿರಾಜು, ಗುರುಗಳಿಂದ ಕಲಿತ ವಿದ್ಯೆಯಿಂದ ಜ್ಞಾನ ಸಂಪಾದನೆ ಮಾಡಿಕೊಂಡು ಭವಿಷ್ಯದಲ್ಲಿ ಹೆತ್ತ ತಂದೆ-ತಾಯಿ ಹಾಗೂ ನಾಡಿಗೆ ಕೀರ್ತಿ ತರಬೇಕು ಎಂದರು.
Advertisement
Advertisement
ಶೆಟ್ಟಿಹಳ್ಳಿಯ ಬಿ. ಸುರೇಶ್ ಅವರು ಶ್ರೀ ಸಾಯಿ ಫೌಂಡೇಶನ್ ವತಿಯಿಂದ ಕ್ಷೇತ್ರದ ಶಾಲೆಯ ಪ್ರತಿಭಾವಂತ 12 ವಿದ್ಯಾರ್ಥಿಗಳಿಗೆ ಟ್ಯಾಬ್ ನೀಡಿದರು. ಬಹುಮಾನ ಪಡೆದ ನೀವುಗಳು ಮುಂದೆಯೂ ಯಶಸ್ವಿಯಾಗಬೇಕು ನಮ್ಮ ವಾರ್ಡಿನ ಎಲ್ಲಾ ಶಾಲೆಯಲ್ಲೂ ಹಾಗೂ ಸರ್ಕಾರಿ ಶಾಲೆಗಳಲ್ಲಿ ಮುಂದಿನ ದಿನಗಳಲ್ಲಿ ಸಹಾಯ ಮಾಡುತ್ತೇನೆ. ಸರ್ಕಾರಿ ಹಾಗೂ ಖಾಸಗಿ ಶಾಲೆಗಳು ಉತ್ತಮ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳ ಶ್ರಮಕ್ಕೆ ಶಿಕ್ಷಕರು ಕೆಲಸ ಮಾಡುತಿದ್ದಾರೆ. ಮಕ್ಕಳ ಏಳಿಗೆಗೆ ಶಿಕ್ಷಕರ ಪಾತ್ರ ಕೂಡ ಮುಖ್ಯವಾಗಿದೆ ಎಂದು ಸಂತಸವನ್ನ ವ್ಯಕ್ತಪಡಿಸಿದರು.
Advertisement
Advertisement
ಈ ವೇಳೆ ಮಾಜಿ ಶಾಸಕ ಮುನಿರಾಜು, ಶ್ರೀ ಸಾಯಿ ಫೌಂಡೇಶನ್ ಬಿ.ಸುರೇಶ್ ವಿದ್ಯಾರ್ಥಿಗಳ ಪೋಷಕರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.