ನೆಲಮಂಗಲ: ಕಾಡು ವಿಥ್ ನಾಡು ಪರಿಕಲ್ಪನೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಪ್ರಾದೇಶಿಕ ಸಾರಿಗೆ ಅಧಿಕಾರಿ ಡಾ.ಧನ್ವಂತರಿ ಒಡೆಯರ್ ಸೇರಿ ಪರಿಸರ ಸ್ನೇಹಿ ಕಾಳಜಿಗಾಗಿ, ಚಲನಚಿತ್ರ ಕಲಾವಿದರು ಹಾಗೂ ರಂಗಭೂಮಿ ಕಲಾವಿದರಾದ ಜ್ಯೂನಿಯರ್ ವಿಷ್ಣುವರ್ಧನ್, ಜ್ಯೂನಿಯರ್ ಶಂಕರ್ ನಾಗ್ ಜೊತೆಗೆ ಗಿಡ ನೆಟ್ಟು ಜನರಲ್ಲಿ ಪರಿಸರ ಜಾಗೃತಿಗೆ ಮುಂದಾಗಿದ್ದಾರೆ.
Advertisement
ಸಮೀಪದ ತೋಟದ ಗುಡ್ಡದಹಳ್ಳಿ ಬಳಿ ಚಾಲಕರು ಹಾಗೂ ಜ್ಯೂನಿಯರ್ ಕಲಾವಿದರ ಜೊತೆ ಸೇರಿ ಪರಿಸರ ಉಳಿಸಿ ನಾಡು ಬೆಳೆಸಿ ಮುಂದಿನ ಪೀಳಿಗೆಗೆ ಇದೇ ದಾರಿ ದೀಪ ಎಂದು ಜಾಗೃತಿ ಸಾರಿದ್ದಾರೆ. ನಂತರ ಮಾತನಾಡಿದ ನೆಲಮಂಗಲ ಆರ್.ಟಿ.ಓ ಕಚೇರಿಯ ಹಿರಿಯ ಮೋಟಾರು ನಿರೀಕ್ಷಕ ಡಾ.ಧನ್ವಂತರಿ ಒಡೆಯರ್, ವಿಶ್ವ ಪರಿಸರ ದಿನವನ್ನು ಪ್ರತಿದಿನವು ಆಚರಿಸಬೇಕು, ಮನೆಗೊಂದು ಗಿಡವನ್ನು ನೆಡಬೇಕೆಂದು ಕರೆ ನೀಡಿದ್ದಾರೆ.
Advertisement
Advertisement
ಇದು ಪ್ರತಿಯೊಬ್ಬರ ಕರ್ತವ್ಯ, ಉತ್ತಮ ಪರಿಸರದಿಂದ ನಾಡಿನಲ್ಲಿ ಮಳೆ, ಬೆಳೆ, ಪರಿಸರ, ತಂಪಾದ ಹಾಗೂ ಉತ್ತಮ ಗಾಳಿಯಿಂದ ಜೀವ ಸಂಕುಲಗಳು ಉಳಿಯುವ ಕೆಲಸವನ್ನು ಪ್ರತಿಯೊಬ್ಬರೂ ಕೈಜೋಡಿಸಿ ಪರಿಸರ ಕಾಳಜಿಯನ್ನ ಮೆರೆಯಬೇಕು ಎಂದು ತಿಳಿಸಿದರು. ಅದರ ಜೊತೆಗೆ ಚಾಲಕರು ಸಮಯ ಪ್ರಜ್ಞೆ, ಕಾಳಜಿ, ಹಾಗೂ ಸಾರಿಗೆ ನಿಯಮಗಳನ್ನ ಪಾಲಿಸಿ ವಾಹನಗಳ ಸಂಚಾರ ಮಾಡಬೇಕು ಎಂದು ಜಾಗೃತಿ ಮೂಡಿಸಿದ್ದಾರೆ.
Advertisement
ಜ್ಯೂನಿಯರ್ ವಿಷ್ಣುವರ್ಧನ್(ಅಲಿ) ಜ್ಯೂನಿಯರ್ ಶಂಕರ್ ನಾಗ್ ವೃತ್ತಿಯಲ್ಲಿ ಚಲನಚಿತ್ರ ಕಲಾವಿದರು ರಂಗಭೂಮಿ ಕಲಾವಿದರಾಗಿದ್ದು, ಪರಿಸರ ರಕ್ಷಣೆಯಲ್ಲಿ ಸಸಿಗಳನ್ನು ನೆಟ್ಟು ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಸಂದೇಶ ನೀಡಿದರು. ನಾಡು ವಿಥ್ ಕಾಡು ಎಂಬ ಕಲ್ಪನೆ ಯಲ್ಲಿ 30 ಸಸಿಗಳನ್ನು ಜೈ ಮಾರುತಿ ಟ್ರಾವೆಲ್ಸ್ ಆವರಣದಲ್ಲಿ ನೆಡಲಾಯಿತು. ಇದನ್ನೂ ಓದಿ: ಇಂದು ಆಷಾಢ ಅಮಾವಾಸ್ಯೆ, ಶುಕ್ರವಾರ – ಚಾಮುಂಡಿ ಬೆಟ್ಟದಲ್ಲಿ ತಾಯಿಯ ದರ್ಶನಕ್ಕಿಲ್ಲ ಅವಕಾಶ