-ಆರೋಗ್ಯದಲ್ಲಿ ಏರುಪೇರು
ಭೋಪಾಲ್: ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಇಂದು ನಗರದ ಬಿಜೆಪಿ ಕಚೇರಿಯಲ್ಲಿ ಪ್ರಜ್ಞೆ ತಪ್ಪಿದ್ದಾರೆ.
ಇಂದು ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಪುಣ್ಯತಿಥಿಯಲ್ಲಿ ಸಂಸದೆ ಭಾಗಿಯಾಗಿದ್ದರು. ದಿಢೀರ್ ಅಂತ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಕುಸಿದಿದ್ದಾರೆ. ಕೂಡಲೇ ಅವರನ್ನು ಹೊರಗೆ ತಂದು ನೀರು ಕುಡಿಸಿ ಆರೈಕೆ ಮಾಡಲಾಗಿದೆ. ತದನಂತರ ಪ್ರಜ್ಞಾ ಸಿಂಗ್ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ.
ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಭಾಷಣದ ವೇಳೆ ಪ್ರಜ್ಞಾ ಸಿಂಗ್ ಜ್ಞಾನ ತಪ್ಪಿದ್ದಾರೆ. ತುಂಬಾ ಸಮಯ ನಿಂತಿದ್ದರಿಂದ ತಲೆ ಸುತ್ತು ಬಂದ ಪರಿಣಾಮ ಕುಸಿದಿದ್ದಾರೆ ಎನ್ನಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಪ್ರಜ್ಞಾ ಸಿಂಗ್ ಮನೆಗೆ ತೆರಳಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಕಳೆದ ಕೆಲ ದಿನಗಳಿಂದ ಸಂಸದೆ ಆನಾರೋಗ್ಯದಿಂದ ಬಳಲುತ್ತಿದ್ದಾರೆ. ದೆಹಲಿ ಆಸ್ಪತ್ರೆಗೆ ದಾಖಲಾಗಿ ಹಲವು ದಿನ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಮೆದುಳಿನ ಭಾಗದಲ್ಲಿ ನರ ಊತಿದ್ದರಿಂದ ದೃಷ್ಟಿ ಸಮಸ್ಯೆ ಸಹ ಕಾಣಿಸಿಕೊಂಡಿದೆ.