ಕೋಲ್ಕತ್ತಾ: ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಗಿರಿಂದ್ರಾನಾಥ್ ಬರ್ಮನ್ ಮೇಲೆ ಹಲ್ಲೆ ನಡೆಸಿರುವ ಘಟನೆ ಉತ್ತರ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯಲ್ಲಿ ನಡೆದಿದೆ.
ಗುರುವಾರ ಪ್ರಚಾರ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ಟಿಎಂಸಿ ಅಭ್ಯರ್ಥಿ ಗಿರಿಂದ್ರಾನಾಥ್ ಬರ್ಮನ್ ಕಾರಿಗೆ ಅಡ್ಡ ಹಾಕಿ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ವೇಳೆ ಗಿರಿಂದ್ರಾನಾಥ್ ಬರ್ಮನ್‍ರವರ ತಲೆಗೆ ಪೆಟ್ಟಾಗಿದ್ದು, ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದೇವೆ ಎಂದು ಟಿಎಂಸಿ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.
ರಾಜ್‍ಬಂಗ್‍ಶಿ ಸಮುದಾಯದ ಬೆಂಬಲವನ್ನು ಕಳೆದುಕೊಳ್ಳುವ ಆತಂಕದಲ್ಲಿ ಬಂಗಾಳದ ಬಿಜೆಪಿ ಗೂಂಡಾಗಳು ಮತಪ್ರಚಾರ ನಡೆಸಿ ಬರುತ್ತಿದ್ದ ಟಿಎಂಸಿ ಅಭ್ಯರ್ಥಿ ಗಿರೀಂದ್ರನಾಥ್ ಬರ್ಮನ್ ಮೇಲೆ ದಾಳಿ ನಡೆಸಿದ್ದು, ರಾಜ್‍ಬಂಗ್‍ಶಿಯಲ್ಲಿ ಗೌರವಾನ್ವಿತ ವ್ಯಕ್ತಿಯಾಗಿದ್ದು, ಘೋಕ್ಸಡಂಗ ಜಿ.ಪಿ ಪಿಎಂ ಹಾಗೂ ಎಚ್‍ಎಂ ಕ್ಷಮೆಯಾಚಿಸಬೇಕು ಎಂದು ಒತ್ತಾಯ ಕೇಳಿ ಬಂದಿದೆ.