ಬೆಂಗಳೂರು: ನವೀನ್ ನ ಅವಹೇಳನಕಾರಿ ಫೇಸ್ ಬುಕ್ ಪೋಸ್ಟ್ ಕೇವಲ ನೆಪ ಆಗಿತ್ತು. ಪೋಸ್ಟ್ ನೆಪದಲ್ಲಿ ಮುಸ್ಲಿಂ ಸಮುದಾಯದೊಳಗೆ ಕಿಡಿ ಹತ್ತಿಸಿ ಹಬ್ಬಿಸಿ ಗಲಭೆ ನಡೆಯುವಂತೆ ಸಂಚು ರೂಪಿಸಿಲಾಗಿತ್ತು – ಇದು ಬಿಜೆಪಿ ಶೋಧಿಸಿದ ಸತ್ಯ.
ದೇವರಜೀವನ ಹಳ್ಳಿ ಮತ್ತು ಕಾಡಗೊಂಡನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ ಸಂಬಂಧ ರಾಜ್ಯ ಬಿಜೆಪಿ ಅರವಿಂದ ಲಿಂಬಾವಳಿ, ಮಾಲೀಕಯ್ಯ ಗುತ್ತೇದಾರ್, ಎಂ ಶಂಕರಪ್ಪ, ಪಿ ಸಿ ಮೋಹನ್, ಎ ನಾರಾಯಣಸ್ವಾಮಿ, ಛಲವಾದಿ ನಾರಾಯಣಸ್ವಾಮಿ ಅವರಿದ್ದ ಸತ್ಯಶೋಧನಾ ಸಮಿತಿಯನ್ನು ನೇಮಿಸಿತ್ತು.
Advertisement
Advertisement
ಮೂರು ದಿನಗಳ ಹಿಂದೆ ರಚನೆ ಆಗಿದ್ದ ಸಮಿತಿ ಈಗ ಮಾಹಿತಿಗಳನ್ನು ಕಲೆ ಹಾಕಿ ವರದಿ ತಯಾರಿಸಿದ್ದು ಇಂದು ಸಂಜೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಸಲ್ಲಿಸಲಿದೆ.
Advertisement
ಬಿಜೆಪಿಯ ಸತ್ಯ ಶೋಧನೆ ಏನು?
ಪ್ರಕರಣದಲ್ಲಿ ಪುಲಿಕೇಶಿ ನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರೇ ಟಾರ್ಗೆಟ್ ಆಗಿದ್ದರು. ಕಾಂಗ್ರೆಸ್‌ನಲ್ಲಿದ್ದರೂ ಅಖಂಡ ಶ್ರೀನಿವಾಸ ಮೂರ್ತಿ ಒಬ್ಬಂಟಿಯಾಗಿದ್ದರು. ಕ್ಷೇತ್ರದಲ್ಲಿ ಅಖಂಡ ಪರ ಯಾವ ಕಾಂಗ್ರೆಸ್ ಮುಖಂಡರು, ನಾಯಕರು ಇರಲಿಲ್ಲ.
Advertisement
ಮುಂಬರುವ ಬಿಬಿಎಂಪಿ ಚುನಾವಣೆ ಮತ್ತು ವಿಧಾನಸಭೆ ಕ್ಷೇತ್ರಗಳ ಚುನಾವಣೆಯಲ್ಲಿ ಅಖಂಡ ಶ್ರೀನಿವಾಸ ಮೂರ್ತಿಗೆ ಬೆಂಬಲಿಸಬಾರದು, ಟಿಕೆಟ್ ಸಿಗದಂತೆ ನೋಡಿಕೊಳ್ಳಬೇಕು. ಟಿಕೆಟ್ ಸಿಕ್ಕಿದ್ದರೂ ಸೋಲಿಸಬೇಕು ಎಂಬ ಉದ್ದೇಶ ಇತ್ತು.
ನವೀನ್ ನ ಅವಹೇಳನಕಾರಿ ಫೇಸ್ ಬುಕ್ ಪೋಸ್ಟ್ ಕೇವಲ ನೆಪ ಆಗಿತ್ತು. ಪೋಸ್ಟ್ ನೆಪದಲ್ಲಿ ಮುಸ್ಲಿಂ ಸಮುದಾಯದೊಳಗೆ ಕಿಡಿ ಹತ್ತಿಸಿ ಹಬ್ಬಿಸಿ ಗಲಭೆ ನಡೆಯುವಂತೆ ಸಂಚು ರೂಪಿಸಲಾಗಿತ್ತು. ಪ್ರತಿಭಟನೆ ಉದ್ದೇಶ ಇದ್ದ ಗುಂಪಿಗೆ ಅಖಂಡ ಮೇಲೆ ದಾಳಿ ಮಾಡುವಂತೆ ಪ್ರಚೋದಿಸಲಾಗಿತ್ತು.
ಗಲಭೆಗೆ ಕಾಂಗ್ರೆಸ್ ಸ್ಥಳೀಯ ಮುಖಂಡರು, ಲೋಕಲ್ ಪಾಲಿಟಿಕ್ಸ್, ಎಸ್‌ಡಿಪಿಐ ಕಾರಣ. ಇದು ದಲಿತ ಶಾಸಕರೊಬ್ಬರ ವಿರುದ್ಧ ನಡೆದ ವ್ಯವಸ್ಥಿತ ರಾಜಕೀಯ ಹುನ್ನಾರ.