– ಮಗುವಿಗೆ ಗಾಯವಾಗಿ ಅತ್ತರೂ ಬಿಡದ ಪಾಪಿ
ಭೋಪಾಲ್: ಮನೆಯವರು ಹೊರಗಡೆ ಹೋಗಿದ್ದಾಗ 19 ವರ್ಷದ ಯುವಕ 2 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯಲ್ಲಿ ನಡೆದಿದೆ.
ಹತ್ತಿರದ ಸಂಬಂಧಿಯಾದ ಯುವಕ ಅತ್ಯಾಚಾರ ಎಸಗಿ ಪರಾರಿಯಾಗಲು ಯತ್ನಿಸಿದ್ದು, ಈ ವೇಳೆ ಗ್ರಾಮಸ್ಥರು ಹಿಡಿಯಲು ಓಡಿ ಹೋಗಿದ್ದಾರೆ. ಈ ವೇಳೆ ಗ್ರಾಮಸ್ಥರಿಗೆ ಗಾಯಗಳೂ ಆಗಿವೆ. ಆದರೂ ಗ್ರಾಮಸ್ಥರು ಬಿಟ್ಟಿಲ್ಲ. ಆದರೆ ಅವರು ಯುವಕನ ಬಳಿ ಹೋಗುವಷ್ಟರಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಪೋಷಕರು ಮಾರ್ಕೆಟ್‍ಗೆ ಹೋದಾಗ ಕೃತ್ಯ
ಜಬಲ್‍ಪುರದ ಕಾತಂಗಿಯಿಂದ ಬಂದಿದ್ದ ತಮ್ಮ ಸಂಬಂಧಿಗೆ ಅಡುಗೆ ಮಾಡುವ ಸಲುವಾಗಿ ಮಗುವಿನ ಪೋಷಕರು ತರಕಾರಿ ತರಲು ಮಾರ್ಕೆಟ್‍ಗೆ ಹೋಗಿದ್ದಾರೆ. ಈ ವೇಳೆ ಇಬ್ಬರು ಮಕ್ಕಳನ್ನು ಜೊತೆಗೆ ಕರೆದೊಯ್ದಿದ್ದಾರೆ. 2 ವರ್ಷದ ಕಂದಮ್ಮನನ್ನು ಮನೆಯಲ್ಲಿಯೇ ಸಂಬಂಧಿ ಬಳಿ ಬಿಟ್ಟು ಹೋಗಿದ್ದಾರೆ.
ತರಕಾರಿ ತೆಗೆದುಕೊಂಡು ಮನೆಗೆ ಬಂದಾಗ 2 ವರ್ಷದ ಕಂದಮ್ಮನಿಗೆ ವಿಪರೀತ ಗಾಯಗಳಾಗಿ ಅಳುತ್ತಿರುವುದನ್ನು ನೋಡಿದ್ದಾರೆ. ಮಗು ತುಂಬಾ ಅಳುತ್ತಿದೆ. ಆದರೆ ಮನೆಗೆ ಬಂದ ಸಂಬಂಧಿ ಕಾಣೆಯಾಗಿದ್ದಾನೆ. ಅವರ ಇನ್ನೊಬ್ಬ ಮಗಳು ಘಟನೆ ಕುರಿತು ವಿವರಿಸಿದ್ದಾಳೆ. ನಂತರ ಈ ಕುರಿತು ಪೊಲೀಸರಿಗೆ ತಿಳಿಸಲಾಗಿದೆ. ಸುದ್ದಿ ಹಬ್ಬುತ್ತಿದ್ದಂತೆ ಗ್ರಾಮಸ್ಥರೆಲ್ಲರೂ ಭುಗಿಲೆದ್ದು ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಕೋಪಗೊಂಡ ಗ್ರಾಮಸ್ಥರು ಆತನ ಬಳಿಗೆ ಬರುವಷ್ಟರಲ್ಲಿ ಪೊಲೀಸರು ಭಾನುವಾರ ಮುಂಜಾನೆ 4 ಗಂಟೆಗೆ ಆರೋಪಿ ಯುವಕನನ್ನು ಬಂಧಿಸಿದ್ದಾರೆ. ಆದರೂ ಬಿಡದ ಗ್ರಾಮಸ್ಥರು ಪೊಲೀಸ್ ಠಾಣೆ ಬಳಿ ಜಮಾಯಿಸಿ ಆರೋಪಿಯನ್ನು ನಮ್ಮ ಕೈಗೆ ಒಪ್ಪಿಸಿ ಎಂದು ಕೂಗಾಡಿದ್ದಾರೆ. ಆದರೆ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.