ಬೆಂಗಳೂರು: ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳು ಹಾಗೂ ಕಾನ್‍ಸ್ಟೆಬಲ್‍ಗಳ ಪರೀಕ್ಷೆಗಾಗಿ ಅನಾಕಾಡೆಮಿ ಆರಂಭಿಸಿರುವ ವಿಶೇಷ ಕೋರ್ಸ್ ಗಳಿಗೆ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ನಗರದಲ್ಲಿ ಮಂಗಳವಾರ ಚಾಲನೆ ನೀಡಿದರು.
ಟಾರ್ಗೆಟ್ ಪಿಎಸ್‍ಐ ಹೆಸರಿನ ಈ ಕೋರ್ಸ್‍ಗಳನ್ನು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳು ಮತ್ತು ಕಾನ್‍ಸ್ಟೆಬಲ್ ಹುದ್ದೆಗಳಿಗಾಗಿ ವಿಶೇಷವಾಗಿ ರೂಪಿಸಲಾಗಿದ್ದು, ಇದು ಪ್ರತ್ಯೇಕ ಅಧ್ಯಯನ ಮಾದರಿಯನ್ನು ಹೊಂದಿದೆ ಎಂದು ಹೇಳಿದರು.
ಅನಾಕಾಡೆಮಿಯ ಕೋರ್ಸುಗಳನ್ನು ಆರಂಭಿಸಿ ಮಾತನಾಡಿದ ಡಿಸಿಎಂ, ಪೊಲೀಸ್ ಇಲಾಖೆ ಸೇರಬೇಕೆಂದು ಬಯಸುವ ಯುವ ಜನರಿಗೆ ಈ ಕೋರ್ಸುಗಳು ಹೆಚ್ಚು ಉಪಯುಕ್ತ. ಅಕಾಡೆಮಿಗೆ ಸೇರಿ ಸೂಕ್ತ ಮಾರ್ಗದರ್ಶನ ಪಡೆಯಬಹುದು ಎಂದರು.
ಯಾವುದೇ ಪರೀಕ್ಷೆಯನ್ನು ಎದುರಿಸಬೇಕಾದರೆ, ಅದಕ್ಕೆ ಉತ್ತಮ ಪೂರ್ವ ಸಿದ್ಧತೆಯೂ ಅಗತ್ಯ. ನಿರಂತರ ಅಧ್ಯಯನವೂ ಮುಖ್ಯ ಎಂದು ಡಿಸಿಎಂ ಹೇಳಿದರು.
ಕರ್ನಾಟಕ ಪೊಲೀಸ್ ಸೇವೆಯ ಆಕಾಂಕ್ಷಿಗಳಿಗಾಗಿ 2021 ಮಾರ್ಚ್ 9 ರಿಂದ ಬ್ಯಾಚ್‍ಗಳು ಪ್ರಾರಂಭವಾಗಿವೆ. ಪ್ರಚಲಿತ ವಿದ್ಯಮಾನಗಳು, ರಾಜಕೀಯ, ವಿಜ್ಞಾನ- ತಂತ್ರಜ್ಞಾನ, ಇತಿಹಾಸ, ಅನುವಾದ, ಅರ್ಥಶಾಸ್ತ್ರ, ಮತ್ತು ಪಿಎಸ್‍ಐ ಹಾಗೂ ಪಿಸಿ ಪರೀಕ್ಷೆಗಳಿಗೆ ಸಂಬಂಧಿಸಿದ ಮಾನಸಿಕ ಸಾಮಥ್ರ್ಯದಂತಹ ಎಲ್ಲಾ ಪ್ರಮುಖ ವಿಷಯಗಳನ್ನು ಒಳಗೊಂಡ ಕೋರ್ಸುಗಳು ಇಲ್ಲಿವೆ.