ಪೊಲೀಸ್, ಯೋಧರ ಮೇಲೆ ಉಗ್ರರ ದಾಳಿ – ಇಬ್ಬರಿಗೆ ಗಾಯ

Public TV
1 Min Read
soldiers

ಶ್ರೀನಗರ: ಇಂದು ಶ್ರೀನಗರದಲ್ಲಿ ಪೊಲೀಸ್ ಮತ್ತು ಯೋಧರ ಮೇಲೆ ಉಗ್ರರು ದಾಳಿ ಮಾಡಿದ್ದು, ಓರ್ವ ಪೊಲೀಸ್ ಮತ್ತು ಒಬ್ಬ ನಾಗರಿಕನಿಗೆ ಗಾಯವಾಗಿದೆ.

ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಶ್ರೀನರಗದ ಹವಾಲ್ ಪ್ರದೇಶದ ಸಜ್ಗರಿಪೊರಾದಲ್ಲಿ ಈ ಘಟನೆ ನಡೆದಿದೆ. ಉಗ್ರರ ದಾಳಿಯ ವೇಳೆ ಇಬ್ಬರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜೊತೆಗೆ ಭಯೋತ್ಪಾದಕರನ್ನು ಬಂಧಿಸಲು ಈ ಪ್ರದೇಶವನ್ನು ಸುತ್ತುವರಿಯಲಾಗಿದೆ ಎಂದರು.

ಈ ವಿಚಾರವಾಗಿ ಟ್ವೀಟ್ ಮಾಡಿರುವ ಕಾಶ್ಮೀರ ಪೊಲೀಸರು, ಸಜ್ಗರಿಪೊರಾದ ಹವಾಲ್‍ನಲ್ಲಿ ಉಗ್ರರು ನಿರ್ದಾಕ್ಷಿಣ್ಯವಾಗಿ ಪೊಲೀಸರು ಮತ್ತು ಯೋಧರ ಮೇಲೆ ಗುಂಡು ಹಾರಿಸಿದರು. ಈ ವೇಳೆ ಪೊಲೀಸ್ ಸಿಬ್ಬಂದಿ ಫಾರೂಕ್ ಅಹ್ಮದ್ ಚೋಪನ್ ಮತ್ತು ಸ್ಥಳೀಯ ನಾಗರಿಕ ಮುನೀರ್ ಅಹ್ಮದ್ ಗಾಯಗೊಂಡಿದ್ದಾರೆ. ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಪೊಲೀಸ್ ಮತ್ತು ಸೈನಿಕರು ಪ್ರದೇಶವನ್ನು ಸುತ್ತವರಿದಿದ್ದಾರೆ ಎಂದು ತಿಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *