ನವದೆಹಲಿ: ಬಾಬಾ ಕಾ ಡಾಬಾ ಖ್ಯಾತಿ ಯ ಕಾಂತಾ ಪ್ರಸಾದ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಯು ಟ್ಯೂಬರ್ ಗೌರವ್ ವಾಸನ್ ವಿರುದ್ಧ ದೂರು ಸಲ್ಲಿಸಿದ್ದಾರೆ.
ಕಾಂತಾ ಪ್ರಸಾದ್ ಕಷ್ಟಕ್ಕೆ ಮರುಗಿದ ಜನ ನೀಡಿದ ಹಣದಲ್ಲಿ ಮೋಸ ನಡೆದಿದೆ ಎಂದು ಆರೋಪಿಸಿ ಕಾಂತಾ ಪ್ರಸಾದ್ ಮಾಳವೀಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಯುಟ್ಯೂಬರ್ ಲಕ್ಷ್ಯ ಚೌಧರಿ ಎಂಬವರ ವೃದ್ಧನಿಗಾಗಿ ದಾನದ ರೂಪದಲ್ಲಿ ಬಂದ ಹಣ ಕಾಂತಾ ಪ್ರಸಾದ್ ಅವರಿಗೆ ತಲುಪಿಲ್ಲ ಎಂದು ಆರೋಪಿಸಿದ್ದರು. ಆರೋಪದ ಬೆನ್ನಲ್ಲೇ ವೃದ್ಧ ದೂರು ದಾಖಲಿಸಿದ್ದಾರೆ. ಜನರು ವರ್ಗಾಯಿಸಿರುವ ಹಣ ಗೌರವ್ ವಾಸನ್ ಮತ್ತು ಆತನ ಪತ್ನಿಯ ಖಾತೆಗೆ ಜಮೆ ಆಗಿರುವ ಬಗ್ಗೆ ಆರೋಪಗಳು ಕೇಳಿ ಬಂದಿವೆ. ಇದನ್ನೂ ಓದಿ: ಬಾಬಾ ಕಾ ಡಾಬಾ ಬಳಿಕ ಮತ್ತೊಂದು ವೀಡಿಯೋ ವೈರಲ್- 90ರ ವೃದ್ಧನ ಸಹಾಯಕ್ಕಾಗಿ ಮನವಿ
Advertisement
Delhi: Kanta Prasad, owner of #BabaKaDhaba, files Police complaint against Gaurav Wasan -who first shot his video & posted it- for allegedly misappropriating funds raised to help his wife & him. He alleges cheating, mischief, criminal breach of trust, criminal conspiracy by Wasan pic.twitter.com/f1IGxwcB2e
— ANI (@ANI) November 2, 2020
Advertisement
ಕಾಂತಾ ಪ್ರಸಾದ್ ಎಂಬವರು ದೂರು ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ. ಇನ್ನೂ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ತೀವ್ರ ಸಂಕಷ್ಟಗೊಳಗಾಗಿ ಕಣ್ಣೀರಿಟ್ಟ ವೃದ್ಧ ದಂಪತಿಗೆ ಬೆನ್ನೆಲುಬಾದ ನೆಟ್ಟಿಗರು!
Advertisement
#बाबाकाढाबा #dilliwalon #dil #dikhao. Whoever eats here, sends me pic, I shall put up a sweet message with your pics ! ♥️ #supportlocalbusiness #localvendors https://t.co/5DH73wz3SD
— Raveena Tandon (@TandonRaveena) October 8, 2020
Advertisement
ಕೆಲ ದಿನಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಬಾಬಾ ಕಾ ಡಾಬಾ ವೀಡಿಯೋ ಸಖತ್ ವೈರಲ್ ಆಗಿತ್ತು. ಕೊರೊನಾದಿಂದಾಗಿ ರಸ್ತೆ ಬದಿ ಹೋಟೆಲ್ ನಡೆಸುತ್ತಿದ್ದ ವೃದ್ಧ ದಂಪತಿಯ ಕಷ್ಟವನ್ನ ವೀಡಿಯೋದಲ್ಲಿ ತೋರಿಸಲಾಗಿತ್ತು. ಈ ವೀಡಿಯೋ ಗೌರವ್ ತಮ್ಮ ಯು ಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಿಕೊಂಡು, ವೃದ್ಧ ದಂಪತಿಗೆ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದದ್ದರು.