ಬೆಂಗಳೂರು: ದಂಡ ಹಾಕುತ್ತಾರೆಂದು ಟ್ರಾಫಿಕ್ ಪೊಲೀಸರ ಕಣ್ತಪ್ಪಿಸಲು ಹೋಗಿ ಬೈಕ್ ಸವಾರ ಲಾರಿಗೆ ಡಿಕ್ಕಿ ಹೊಡೆದು ಕಣ್ಣು ಕಳೆದುಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.
ಕೆಂಗೇರಿಯ ವಿಷ್ಣುವರ್ಧನ್ ಸಮಾಧಿ ರಸ್ತೆ ಬಳಿ ಶುಕ್ರವಾರ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಟ್ರಾಫಿಕ್ ಪೊಲೀಸರಿಂದ ಕಣ್ಣು ತಪ್ಪಿಸಿಕೊಳ್ಳಲು ಹೋಗಿ ಬೈಕ್ ಸವಾರ ತನ್ನ ಕಣ್ಣೇ ಕಳೆದುಕೊಂಡು ಅವಾಂತರ ಮಾಡಿಕೊಂಡಿದ್ದಾನೆ.
ರಸ್ತೆ ಅಪಘಾತದಿಂದ ಉಬ್ರಾನ್ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು, ಎರಡೂ ಕಣ್ಣುಗಳನ್ನು ಕಳೆದುಕೊಂಡಿರುವ ಸಾಧ್ಯತೆ ಇದೆ. ಸದ್ಯ ಉಬ್ರಾನ್‍ಗೆ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಕುಟುಂಬಸ್ಥರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.