– ಎರಡು ಪ್ರಶ್ನೆಗಳ ಪಾಪ ಪ್ರಜ್ಞೆ ಕಾಡುತ್ತಿದೆ
ಬೆಂಗಳೂರು: ನಿಜವಾದ ಕೊರೊನಾ ವಾರಿಯರ್ಸ್ ಎಂದರೆ ಅದು ಪೊಲೀಸರು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿಯವರು ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಈಗ ಎರಡು ಪ್ರಶ್ನೆ ಉದ್ಭವ ಆಗುತ್ತೀವೆ. ಏಕೆ ಕೊರೊನಾ ವೇಳೆ ಪೊಲೀಸರು ಪ್ರಾಣ ತೆತ್ತರು? ಗೃಹ ಇಲಾಖೆಯ ಮಂತ್ರಿಯಾಗಿ ಸಾವು ನೋವನ್ನು ತಡೆಯಲಾಗಲಿಲ್ಲವೇಕೆ ಎಂಬ ಎರಡು ಪ್ರಶ್ನೆಗಳ ಪಾಪ ಪ್ರಜ್ಞೆ ಕಾಡುತ್ತಿದೆ. ಪ್ರಾಣಗಳನ್ನು ಉಳಿಸಿಕೊಳ್ಳಲಾಗಲಿಲ್ಲ ಎಂಬ ನೋವಿದೆ ಎಂದರು.
Advertisement
Advertisement
ಹಿರಿಯ ಸಚಿವರ ಸಭೆಯಲ್ಲಿ ನಾನು ಈ ಹಿಂದೆ ಹೇಳಿದ್ದೆ, ನಿಜವಾದ ಕೊರೊನಾ ವಾರಿಯರ್ ಇದ್ರೆ ಅದು ಪೊಲೀಸರು ಮಾತ್ರ. ಬೇರೆ ಇಲಾಖೆಗಳಿಗೆ ಸಹಾಯಧನ ಘೋಷಣೆ ಆಯ್ತು. ಅನೇಕ ಇಲಾಖೆ ಪ್ರಸ್ತಾವನೆಗಳನ್ನು ಕಳುಹಿಸಲಾಯ್ತು. ನಮ್ಮ ಇಲಾಖೆಗೆ ಚರ್ಚೆ ಮಾಡುವಾಗಿದ್ದರೆ ಪರಿಹಾರ ಕೊಡಲೇ ಬೇಡಿ. ಪೊಲೀಸರು ನಿಜವಾದ ಕೊರೊನಾ ವಾರಿಯರ್ಸ್, ಯಾವ ಕಾರಣಕ್ಕೂ ಪ್ರಶ್ನೆ ಮಾಡದೆ ಪರಿಹಾರ ಕೊಡಿ ಎಂದಿದ್ದೆ ಎಂದು ಬೊಮ್ಮಾಯಿ ತಿಳಿಸಿದರು.
Advertisement
Advertisement
ನನ್ನ ಈ ಬೇಡಿಕೆಗೆ ಮುಖ್ಯಮಂತ್ರಿಗಳು 30 ಲಕ್ಷ ಕೊಡಲು ಒಪ್ಪಿದರು. ಪೊಲೀಸರು ದೊಡ್ಡ ಕುಟುಂಬ ಇದ್ದಂತೆ. ಬೇರೆ ಇಲಾಖೆಯಲ್ಲಿ ಯಾರಿಗಾದರು ತೊಂದರೆಯಾದರೆ, ಇಡೀ ಪೊಲೀಸ್ ಇಲಾಖೆ ಸ್ಪಂದಿಸುತ್ತದೆ. ಹೀಗಾಗಿ ನಿಜವಾದ ಕೊರೊನಾ ವಾರಿಯರ್ಸ್ ಪೊಲೀಸರು ಎಂದು ತಮ್ಮ ಇಲಾಖೆಯನ್ನು ಹಾಡಿಹೊಗಳಿದರು.