ಪೊಲೀಸರನ್ನು ಕೊಂದ ನನ್ನ ಮಗನನ್ನು ಗುಂಡಿಕ್ಕಿ ಕೊಲ್ಲಿ- ಗ್ಯಾಂಗ್‍ಸ್ಟಾರ್ ವಿಕಾಸ್ ದುಬೆ ತಾಯಿ

Public TV
2 Min Read
Vikas Dubey Mother

– ಆತ ಪಾಪಿ, ಎಂಎಲ್‍ಎ ಆಗಲು ಸಚಿವರನ್ನೇ ಕೊಂದ
– ರಾಜಕೀಯಕ್ಕೆ ಬಂದು ನನ್ನ ಮಗ ಕ್ರಿಮಿನಲ್ ಆದ

ಲಕ್ನೋ: ಪೊಲೀಸರನ್ನು ಕೊಂದ ನನ್ನ ಮಗನನ್ನು ಗುಂಡಿಕ್ಕಿ ಕೊಲ್ಲಿ ಎಂದು ಉತ್ತರ ಪ್ರದೇಶದ ಗ್ಯಾಂಗ್‍ಸ್ಟಾರ್ ವಿಕಾಸ್ ದುಬೆ ತಾಯಿ ಸರ್ಲಾ ದೇವಿ ಅವರು ಹೇಳಿದ್ದಾರೆ.

ಕೊಲೆ ಪ್ರಕರಣದ ಆರೋಪಿಯಾಗಿದ್ದ ಹಳೇ ರೌಡಿ ಶೀಟರ್ ವಿಕಾಸ್ ದುಬೆಯನ್ನು ಅರೆಸ್ಟ್ ಮಾಡಲು ಹೋದ ಪೊಲೀಸರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಓರ್ವ ಡಿವೈಎಸ್ಪಿ, ಮೂವರು ಸಬ್ ಇನ್ಸ್ ಪೆಕ್ಟರ್ ಗಳು ಹಾಗೂ ನಾಲ್ಕು ಮಂದಿ ಕಾನ್ಸ್ ಸ್ಟೇಬಲ್‍ಗಳು ಸೇರಿದಂತೆ ಒಟ್ಟು ಎಂಟು ಜನ ಪೊಲೀಸರನ್ನು ಕಾನ್ಪುರದ ಡಿಕ್ರು ಗ್ರಾಮದಲ್ಲಿ ಗುರುವಾರ ರಾತ್ರಿ ಕ್ರಿಮಿನಲ್ ಗ್ಯಾಂಗ್ ಹತ್ಯೆ ಮಾಡಿತ್ತು.

ಈ ಹತ್ಯೆಯ ನಂತರ ರೌಡಿ ಶಿಟ್ಟರ್ ವಿಕಾಸ್ ದುಬೆ ಹೆಸರು ಮುನ್ನೆಲೆಗೆ ಬಂದಿತ್ತು. ಈಗ ಮಗನ ಪೈಶಾಚಿಕ ಕೃತ್ಯದ ಬಗ್ಗೆ ಆಕ್ರೋಶ ವ್ಯಕ್ತಿ ಪಡಿಸಿರುವ ಆತನ ತಾಯಿ, ಆತ ಪೊಲೀಸರಿಗೆ ಶರಣಾಗಬೇಕು. ಅದನ್ನು ಬಿಟ್ಟು ಅವನು ಹೀಗೆ ಮೊಂಡುತನ ತೋರಿಸಿದರೆ. ಅವನನ್ನು ಪೊಲೀಸರು ಎನ್‍ಕೌಂಟರ್ ಮಾಡಬೇಕು. ಅವನು ಮಾಡಿದ್ದು ತಪ್ಪು, ಆತನನ್ನು ಹಿಡಿಯಲು ಆಗಲಿಲ್ಲ ಎಂದರೆ ಆತನನ್ನು ಗುಂಡಿಕ್ಕಿ ಕೊಂದುಬಿಡಿ ಎಂದು ಹೇಳಿದ್ದಾರೆ.

ಕಾನ್ಪುರದಲ್ಲಿ ನಡೆದ ಕೃತ್ಯದಲ್ಲಿ ಡಿವೈಎಸ್ಪಿಯನ್ನು ಕೂಡ ಕೊಲ್ಲಲಾಗಿತ್ತು. ಈ ಪ್ರಕರಣದಲ್ಲಿ ವಿಕಾಸ್ ದುಬೆಯೇ ಪ್ರಮುಖ ಆರೋಪಿಯಾಗಿದ್ದ. ಅಮಾಯಕ ಪೊಲೀಸರನ್ನು ಕೊಂದು ನನ್ನ ಮಗ ಬಹಳ ತಪ್ಪು ಮಾಡಿದ್ದಾನೆ. ಅವನು ಹೊರಗೆ ಬಂದು ಪೊಲೀಸರಿಗೆ ಶರಣಾಗಬೇಕು. ರಾಜಕೀಯದ ಸಂಪರ್ಕಕ್ಕೆ ಬಂದ ನಂತರ ನನ್ನ ಮಗ ಈ ರೀತಿ ಕ್ರಿಮಿನಲ್ ಆದ. ನನ್ನ ಕುಟುಂಬದ ಮರ್ಯಾದೆ ತೆಗೆದ. ಆತನಿಗೆ ಶಿಕ್ಷೆ ಆಗಲೇ ಬೇಕು ಎಂದು ಸರ್ಲಾ ದೇವಿ ಕಣ್ಣೀರು ಹಾಕಿದ್ದಾರೆ.

Vikas Dubey 2

ವಿಕಾಸ್ ಎಂಎಲ್‍ಎ ಚುನಾವಣೆಗೆ ನಿಂತು ಗೆಲ್ಲಬೇಕು ಎಂದುಕೊಂಡಿದ್ದ. ಅದಕ್ಕಾಗಿ ಆತ ಬಿಜೆಪಿ ಸಚಿವ ಸಂತೋಷ್ ಶುಕ್ಲಾ ಅವರನ್ನು ಕೊಲೆ ಕೂಡ ಮಾಡಿದ್ದ. ನಾನು ನನ್ನ ಹಿರಿಯ ಮಗನ ಜೊತೆ ಲಕ್ನೋದಲ್ಲಿ ವಾಸವಿದ್ದೇನೆ. ಕಳೆದ ನಾಲ್ಕು ತಿಂಗಳಿಂದ ವಿಕಾಸ್ ದುಬೆಯನ್ನು ಮಾತನಾಡಿಸಿಲ್ಲ. ಅವನಿಂದ ನಮಗೆ ಬಹಳ ಸಮಸ್ಯೆಯಾಗಿದೆ. ಆತನಿಂದ ಹುಟ್ಟಿದ ಊರು ಬಿಟ್ಟು ಬಂದು ಲಕ್ನೋದಲ್ಲಿ ಇದ್ದೇವೆ ಎಂದು ಸರ್ಲಾ ದೇವಿ ನೋವವನ್ನು ತೋಡಿಕೊಂಡಿದ್ದಾರೆ.

Vikas Dubey 3

2001ರಲ್ಲಿ ವಿಕಾಸ್ ದುಬೆ ಅಂದಿನ ಬಿಜೆಪಿ ಸರ್ಕಾರದ ಕ್ಯಾಬಿನೆಟ್ ಮಿನಿಸ್ಟರ್ ಆಗಿದ್ದ ಸಂತೋಷ್ ಶುಕ್ಲಾ ಅವರನ್ನು ಪೊಲೀಸ್ ಠಾಣೆಯಲ್ಲೇ ಗುಂಡಿಕ್ಕಿ ಕೊಲೆ ಮಾಡಿದ್ದ. ನಂತರ ಗ್ಯಾಂಗ್‍ಸ್ಟಾರ್ ಆಗಿ ಬೆಳೆದ ವಿಕಾಸ್ ದುಬೆ, ಹಲವಾರು ಕೊಲೆ ಮಾಡಿ ಜೈಲುವಾಸ ಅನುಭವಿಸಿದ್ದ. ನಂತರ ಜೈಲಿನಲ್ಲಿ ಇದ್ದುಕೊಂಡೇ ನಗರ ಪಂಚಾಯ್ತಿ ಚುನಾವಣೆಯಲ್ಲಿ ಗೆದ್ದಿದ್ದ. ಈತನ ಮೇಲೆ ಸುಮಾರು 60 ಕ್ರಿಮಿನಲ್ ಮೊಕದ್ದಮೆಗಳು ಇವೆ. ಇದನ್ನು ಓದಿ:ಪೊಲೀಸರನ್ನು ನರಹತ್ಯೆಗೈದ ಡೆಡ್ಲಿ ರೌಡಿ ಶೀಟರ್ ವಿಕಾಸ್ ದುಬೆ ಯಾರು?

ಸದ್ಯ ವಿಕಾಸ್ ದುಬೆಗಾಗಿ ಇಡೀ ಉತ್ತರ ಪ್ರದೇಶದ ಪೊಲೀಸರು ಹುಡುಕುತ್ತಿದ್ದಾರೆ. ಸಿಎಂ ಯೋಗಿ ಆದಿತ್ಯನಾಥ್ ಅವರು ಕೂಡ ಪೊಲೀಸರನ್ನು ಕೊಂದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಇತ್ತ ವಿಕಾಸ್ ದುಬೆ ಬಗ್ಗೆ ಸುಳಿವು ನೀಡಿದವರಿಗೆ 50 ಸಾವಿರ ರೂ. ಬಹುಮಾನ ನೀಡುವುದಾಗಿ ಕಾನ್ಪುರದ ಪೊಲೀಸರು ಘೋಷಣೆ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *