ಪೊಲಾರ್ಡ್ ಬ್ಯಾಟಿಂಗ್ ಸುನಾಮಿ- ಮುಂಬೈಗೆ ರೋಚಕ 4 ವಿಕೆಟ್ ಜಯ

Public TV
2 Min Read
polard 1

ನವದೆಹಲಿ: ಬೌಂಡರಿ ಸಿಕ್ಸರ್‍ ಗಳ ಸುರಿಮಳೆಗೈದ ಕೀರನ್ ಪೊಲಾರ್ಡ್ ಸ್ಪೋಟಕ ಆಟದಿಂದಾಗಿ ಮುಂಬೈ ತಂಡ ರೋಚಕವಾಗಿ 4 ವಿಕೆಟ್‍ಗಳ ಜಯ ಗಳಿಸಿತು.

polard

ಚೆನ್ನೈ ತಂಡ ನೀಡಿದ 219 ರನ್‍ಗಳ ಗುರಿ ಬೆನ್ನಟ್ಟಿದ ಮುಂಬೈ ತಂಡದ ಪರವಾಗಿ ಕೊನೆಯ ಬಾಲ್‍ನಲ್ಲಿ ಪೊಲಾರ್ಡ್ ಎರಡು ರನ್ ಕದಿಯುವ ಮೂಲಕ ಮುಂಬೈ ತಂಡಕ್ಕೆ ಜಯ ತಂದುಕೊಟ್ಟರು.

polard 2

ಮುಂಬೈ ಬ್ಯಾಟಿಂಗ್ ಸರದಿಯಲ್ಲಿ ಸುನಾಮಿಯಂತೆ ಬ್ಯಾಟ್‍ಬೀಸಿದ ಪೊಲಾರ್ಡ್ 87ರನ್(34 ಎಸೆತ, 6 ಬೌಂಡರಿ, 8 ಸಿಕ್ಸ್) ಸಿಡಿಸಿ ಅಜೇಯರಾಗಿ ಉಳಿಯುವ ಮೂಲಕ ಮುಂಬೈಗೆ ರೋಚಕ ಜಯ ತಂದುಕೊಟ್ಟರು. ಇವರಿಗೆ ಉತ್ತಮ ಸಾಥ್ ನೀಡಿದ ಕೃಣಾಲ್ ಪಾಂಡ್ಯ 32 ರನ್(23 ಎಸೆತ, 2 ಬೌಂಡರಿ, 2 ಸಿಕ್ಸರ್) ಮತ್ತು ಹಾರ್ದಿಕ್ ಪಾಂಡ್ಯ 16 ರನ್( 7 ಎಸೆತ, 2 ಸಿಕ್ಸ್) ಸಿಡಿಸಿ ತಂಡಕ್ಕೆ ನೆರವಾದರು. ಈ ಮೊದಲು ಮುಂಬೈ ತಂಡಕ್ಕೆ ಕ್ವಿಂಟನ್ ಡಿಕಾಕ್ ಮತ್ತು ರೋಹಿತ್ ಶರ್ಮಾ ಉತ್ತಮ ಆರಂಭವನ್ನು ಒದಗಿಸಿದರು ಡಿಕಾಕ್ 38ರನ್ (28 ಎಸೆತ,4 ಬೌಂಡರಿ, 1 ಸಿಕ್ಸ್) ಬಾರಿಸದರೆ ರೋಹಿತ್ ಶರ್ಮಾ 35ರನ್ (24 ಎಸೆತ 4 ಬೌಂಡರಿ, 1 ಸಿಕ್ಸರ್) ಸಿಡಿಸಿದರು.

moeen ali

ಟಾಸು ಸೋತರು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಕೇವಲ 4ರನ್(4 ಎಸೆತ, 1 ಬೌಂಡರಿ) ಸಿಡಿಸಿ ಪೆವಿಲಿಯನ್ ಸೇರಿಕೊಂಡರು. ನಂತರ ಬಂದ ಮೊಯೀನ್ ಅಲಿ, ಫಾಫ್ ಡು’ಪ್ಲೆಸಿಸ್ ಸೇರಿಕೊಂಡು ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಮೊಯೀನ್ ಅಲಿ 58 ರನ್( 36 ಎಸೆತ, 5 ಬೌಂಡರಿ, 5 ಸಿಕ್ಸ್) ಸಿಡಿಸದರೆ, ಫಾಫ್ ಡು’ಪ್ಲೆಸಿಸ್ 50ರನ್ (28 ಎಸೆತ,2 ಬೌಂಡರಿ, 4 ಸಿಕ್ಸರ್) ಬಾರಿಸಿ ಔಟ್ ಆದರು ಬಿರುಸಿನ ಬ್ಯಾಟಿಂಗ್ ನಡೆಸಿದ ಈ ಜೋಡಿ ಎರಡನೇ ವಿಕೆಟ್‍ಗೆ 108 ರನ್ (61 ಎಸೆತ) ಒಟ್ಟುಗೂಡಿಸಿದರು.

moeen ali and duflcy

ರಾಯುಡು ಸ್ಪೋಟಕ ಆಟ
11ನೇ ಓವರ್‍ನ ಕೊನೆಯಲ್ಲಿ 116ರನ್‍ಗೆ 4 ವಿಕೆಟ್ ಕಳೆದುಕೊಂಡಿದ್ದ ಚೆನ್ನೈಗೆ ನಂತರ ಬಂದ ಅಂಬಾಟಿ ರಾಯುಡು ಬೌಂಡರಿ, ಸಿಕ್ಸರ್‍ ಗಳ ಸುರಿಮಳೆಗೈದರು ಮುಂಬೈ ಬೌಲರ್‍ ಗಳ ಬೆವರಿಳಿಸಿದ ರಾಯುಡು ಮತ್ತು ರವೀಂದ್ರ ಜಡೇಜಾ ಜೋಡಿ 5ನೇ ವಿಕೆಟ್‍ಗೆ ಮುರಿಯದ 102ರನ್ (56 ಎಸೆತ)ಗಳ ಜೊತೆಯಾಟವಾಡಿದರು. ಅಂಬಾಟಿ ರಾಯುಡು 72 ರನ್(27 ಎಸೆತ, 4 ಬೌಂಡರಿ, 7 ಸಿಕ್ಸರ್) ಸಿಡಿಸಿ ಅಜೇಯರಾಗಿ ಉಳಿದರು. ಇವರಿಗೆ ಉತ್ತಮ ಸಾಥ್ ನೀಡಿದ ರವೀಂದ್ರ ಜಡೇಜಾ 22ರನ್ (22 ಬಾಲ್, 2 ಬೌಂಡರಿ) ಬಾರಿಸಿದರು. ಅಂತಿಮವಾಗಿ ಚೆನ್ನೈ 20 ಓವರ್‍ ಗಳಲ್ಲಿ 4 ವಿಕೆಟ್ ಕಳೆದುಕೊಂಡು 218ರನ್ ಮಾಡಿತು.

rayudu

ಮುಂಬೈ ಪರ ಕೀರನ್ ಪೊಲಾರ್ಡ್ 2 ವಿಕೆಟ್ ಪಡೆದರೆ ಟ್ರೆಂಟ್ ಬೌಲ್ಟ್ ಮತ್ತು ಬುಮ್ರಾ ತಲಾ ಒಂದು ವಿಕೆಟ್ ಕಬಳಿಸಿದರು.

ರನ್ ಏರಿದ್ದು ಹೇಗೆ?

50 ರನ್-37 ಎಸೆತ
100 ರನ್-61 ಎಸೆತ
150 ರನ್-96 ಎಸೆತ
218 ರನ್-120 ಎಸೆತ

Share This Article
Leave a Comment

Leave a Reply

Your email address will not be published. Required fields are marked *