ಬೆಂಗಳೂರು: ಪೊಗರು ಸಿನಿಮಾದ ಬಗ್ಗೆ ಬ್ರಾಹ್ಮಣ ಮಹಾಸಭಾದ ಮಾಜಿ ಉಪಾಧ್ಯಕ್ಷ ಲಕ್ಷ್ಮಿಕಾಂತ್ ಅವರು ನೀಡಿದ ಅವಾಚ್ಯವಾಗಿ ನಿಂದಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪೊಗರು ಸಿನಿಮಾದಲ್ಲಿ ಬ್ರಾಹ್ಮಣರಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪದಿಂದಾಗಿ ಪೊಗರು ಸಿನಿಮಾ ಹಲವು ದೃಶ್ಯಗಳಿಗೆ ಕತ್ತರಿ ಪ್ರಯೋಗಿಸಿ ಸಿನಿಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಚಲನಚಿತ್ರ ಮಂಡಳಿಯಲ್ಲಿ ನಡೆದ ಸಭೆಯಲ್ಲಿ ಪೊಗರು ಸಿನಿಮಾದ ನಿರ್ದೇಶಕ ನಂದಕಿಶೋರ್ ಮುಂದೆ ಚಿತ್ರಕಥೆ ಬರೆದವರನ್ನು ಅವಾಚ್ಯವಾಗಿ ನಿಂದಿಸಿರುವ ಲಕ್ಷ್ಮಿಕಾಂತ್ ಅವರ ವಿಡಿಯೋ ಇದೀಗ ವೈರಲ್ ಆಗಿದೆ.
ವಿಡಿಯೋದಲ್ಲಿ ಏನಿದೆ?
ಲಕ್ಷ್ಮಿಕಾಂತ್ ಅವರು ಸಭೆಯಲ್ಲಿ ಚಿತ್ರದ ಕುರಿತು, ಯಾರು ನಿಮಗೆ ಚಿತ್ರಕಥೆ ಬರೆದುಕೊಟ್ಟಿದ್ದು, ಅಯೋಗ್ಯ ನನ್ಮಗ ಅವನು, ನೀವು ವಿಚಾರ ಮಾಡಬೇಕಿತ್ತು. ಒಬ್ಬ ಬ್ರಾಹ್ಮಣನಿಗೆ ಹೋಗಿ, ಪೂಜೆ ಮಾಡುವವನಿಗೆ ಹೋಗಿ, ಹೆಗಲ ಮೇಲೆ ಜನಿವಾರದ ಮೇಲೆ ಚಪ್ಪಲಿ ಇಡ್ತಾನೆ ಅವನು. ಸೂ…. ತಂದೆಗೆ ಹುಟ್ಟಿದ್ದಾನೇನ್ರಿ ಅವನು? ನಿಮ್ಮ ಜನಾಂಗಕ್ಕೆ ಯಾರಾದರೂ ಅವಮಾನ ಮಾಡಿದರೆ ನೀವು ಏನು ಮಾಡ್ತೀರಾ ಹೇಳಿ? ಎಲ್ಲಿವರೆಗೆ ಸಹನೆ ಇರುತ್ತೆ ಟೇಕ್ ಇಟ್ ಫಾರ್ ಗ್ರಾಂಟೆಡ್ ಸಮಾಜ ನಿಮಗೆ ಸಿಡಿದೆದ್ದರೆ ಖಂಡಿತಾ ನೀವು ನಿರ್ನಾಮ ಆಗಿಬಿಡ್ತೀರಾ ಎಂದು ಹೇಳಿದ್ದಾರೆ.