ಪೊಗರು ಮೊದಲ ದಿನದ ಕಲೆಕ್ಷನ್ ಕಂಡು ಧ್ರುವ ಅಚ್ಚರಿ

Public TV
2 Min Read
pogaru

ಬೆಂಗಳೂರು: ನಿನ್ನೆಯಷ್ಟೇ ತೆರೆ ಕಂಡಿರುವ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ ತನ್ನ ಓಟವನ್ನು ಮುಂದುವರಿಸಿದ್ದು, ಇದರ ಮಧ್ಯೆಯೇ ಅಚ್ಚರಿಯ ಮಾಹಿತಿಯೊಂದನ್ನು ಧ್ರುವ ಸರ್ಜಾ ಹಂಚಿಕೊಂಡಿದ್ದಾರೆ.

hubballi pogaru

ಪೊಗರು ಸಿನಿಮಾದ ಮೊದಲ ದಿನದ ಕಲೆಕ್ಷನ್ ಕುರಿತು ಮಾಹಿತಿಯನ್ನು ಧ್ರುವ ಹಂಚಿಕೊಂಡಿದ್ದು, ಅವರೂ ಸಹ ಈ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಈ ಕುರಿತು ಇನ್‍ಸ್ಟಾಗ್ರಾಮನಲ್ಲಿ ಹಂಚಿಕೊಂಡಿರುವ ಅವರು, ಪೊಗರು ಮೊದಲ ದಿನದ ಕಲೆಕ್ಷನ್ 10.05 ಕೋಟಿ ರೂ. ಇದು ಬೃಹತ್ ಮೊತ್ತವಾಗಿದೆ ಎಂದು ತಿಳಿಸಿದ್ದಾರೆ. ಈ ಮೂಲಕ ಪೊಗರು ಚಿತ್ರದ ಮೊದಲ ದಿನದ ಕಲೆಕ್ಷನ್ 10.05 ಕೋಟಿ ಎಂಬುದನ್ನು ಬಹಿರಂಗಪಡಿಸಿದ್ದಾರೆ.

dhruva sarjaa 151813661 871612303660787 8616906163825594001 n e1613815891868

ಪೊಗರು ಸಿನಿಮಾ ನಿನ್ನೆಯಷ್ಟೇ ಭರ್ಜರಿಯಾಗಿ ರಿಲೀಸ್ ಆಗಿದ್ದು, ಲಕ್ಷಾಂತರ ಅಭಿಮಾನಿಗಳು ಸಂಭ್ರಮದಿಂದ ಚಿತ್ರವನ್ನು ನೋಡಿದ್ದಾರೆ. ಈಗಲೂ ಭಾರೀ ಸದ್ದು ಮಾಡುತ್ತಿದ್ದು, ಫುಲ್ ಹವಾ ಕ್ರಿಯೇಟ್ ಮಾಡಿದೆ. ಬರೋಬ್ಬರಿ 1 ಸಾವಿರ ಚಿತ್ರ ಮಂದಿರಗಳಲ್ಲಿ ಪೊಗರು ಸಿನಿಮಾ ತೆರೆ ಕಂಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರ ಮಧ್ಯೆಯೇ ಇದೀಗ ಕಲೆಕ್ಷನ್ ಹೆಚ್ಚಿರುವ ಕುರಿತು ಸಹ ಮಾಹಿತಿ ಹೊರ ಬಿದ್ದಿದೆ. ಹೀಗಾಗಿ ಅಭಿಮಾನಿಗಳು ಇನ್ನೂ ಸಂಭ್ರಮದಲ್ಲಿ ಮುಳುಗಿದ್ದಾರೆ.

Pogaru

ಕನ್ನಡ, ತೆಲುಗು, ತಮಿಳು ಒಟ್ಟು ಮೂರು ಭಾಷೆಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಮೊದಲ ದಿನ ಬೆಳಗ್ಗೆ 5 ಗಂಟೆಯಿಂದಲೇ ಫಸ್ಟ್ ಶೋ ಪ್ರದರ್ಶನ ಕಂಡಿದ್ದು, ಬಹುತೇಕ ಎಲ್ಲ ಚಿತ್ರಮಂದಿರಗಳಲ್ಲಿ ಹೌಸ್‍ಫುಲ್ ಪ್ರದರ್ಶನ ಕಂಡಿದೆ. ಈ ಮೂಲಕ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲೇ ಭಾರೀ ನಿರೀಕ್ಷೆ ಮೂಡಿಸಿದ್ದ ಪೊಗರು ಸಿನಿಮಾ ಇದೀಗ ಗಳಿಯಲ್ಲಿ ಹುಬ್ಬೇರಿಸುವಂತೆ ಮಾಡಿದೆ.

Pogaru Movie Dialogues

ಬರೋಬ್ಬರಿ 3 ವರ್ಷಗಳ ಬಳಿಕ ಧ್ರುವ ಸರ್ಜಾ ಸಿಲ್ವರ್ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿದ್ದು, ನೆಚ್ಚಿನ ನಟನನ್ನು ಕಂಡು ಪ್ರೇಕ್ಷಕರು ಫಿದಾ ಆಗಿದ್ದಾರೆ. ಆಕ್ಷನ್ ಜೊತೆ ಫ್ಯಾಮಿಲಿ ಸೆಂಟಿಮೆಂಟ್ ಕಥೆಯನ್ನು ಹೊಂದಿರುವ ಪೊಗರು ಸಿನಿಮಾ ಸ್ಯಾಂಡಲ್‍ವುಡ್‍ನಲ್ಲಿ ಧೂಳೆಬ್ಬಿಸುತ್ತಿದೆ.

pogaru 2

ಇದೇ ಮೊದಲ ಬಾರಿಗೆ ಧ್ರುವ ಸರ್ಜಾ ಜೊತೆ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ. ನಂದಕಿಶೋರ್ ನಿರ್ದೇಶನದ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್, ತಾರಾ ಅನುರಾಧ, ರವಿಶಂಕರ್, ಪವಿತ್ರ ಲೋಕೇಶ್, ಡಾಲಿ ಧನಂಜಯ, ಚಿಕ್ಕಣ್ಣ, ದಿವಂಗತ ಬುಲೆಟ್ ಪ್ರಕಾಶ್ ಸೇರಿದಂತೆ ಹಲವರು ನಟಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *