ಪೇಡ ನಗರಿಗೆ ದರ್ಶನ್ ಭೇಟಿ- ಚಕ್ಕಡಿ ಸವಾರಿ ಮಾಡಿದ ಚಾಲೆಂಜಿಂಗ್ ಸ್ಟಾರ್

Public TV
1 Min Read
DARSHAHN

ಧಾರವಾಡ: ಚಾಲೆಜಿಂಗ್ ಸ್ಟಾರ್ ದರ್ಶನ ಇಂದು ಧಾರವಾಡದಲ್ಲಿದ್ದಾರೆ. ಕೊರೊನಾ ವೈರಸ್ ಹಬ್ಬುತ್ತಿರುವ ಹಿನ್ನೆಲೆ ಬೆಂಗಳೂರಿನಲ್ಲಿನ ಸಿನಿಮಾ ಇಂಡಸ್ಟ್ರಿಯಲ್ಲಿ ಯಾವುದೇ ಚಿತ್ರಿಕರಣ ಇಲ್ಲದ ಕಾರಣ ದರ್ಶನ್ ಧಾರವಾಡ ಟೂರ್ ಹಮ್ಮಿಕೊಂಡಿದ್ದಾರೆ.

ಮಾಜಿ ಸಚಿವ ವಿನಯ ಕುಲಕರ್ಣಿ ಜೊತೆ ಹಲವು ವರ್ಷಗಳಿಂದ ದರ್ಶನ್ ಸ್ನೇಹ ಇದೆ. ಈ ಹಿನ್ನೆಲೆಯಲ್ಲಿ ಆಗಾಗ ದರ್ಶನ್ ಇಲ್ಲಿಗೆ ಭೇಟಿ ನೀಡುತ್ತಾ ಇರುತ್ತಾರೆ. ಧಾರವಾಡ ನಗರದ ಹೊರ ವಲಯದಲ್ಲಿರುವ ವಿನಯ ಕುಲಕರ್ಣಿ ಹಾಲಿನ ಡೈರಿಯಲ್ಲಿ ಇಳಿದುಕೊಂಡಿರುವ ದರ್ಶನ್, ಅಲ್ಲಿ ಚಕ್ಕಡಿ ಸವಾರಿ ಮಾಡಿದ್ದಾರೆ.

darshan

ಗುಡ್ಡಗಾಡು ಪ್ರದೇಶದಲ್ಲಿ ಈ ಡೈರಿ ಇರುವುದರಿಂದ ದರ್ಶನ್ ಅಲ್ಲಿ ಸ್ವಲ್ಪ ಸುತ್ತಾಡಿ ತಮ್ಮ ದಣಿವನ್ನ ಆರಿಸಿಕೊಂಡಿದ್ದಾರೆ. ಇಲ್ಲಿ ಬಂದಾಗೊಮ್ಮೆ ವಿನಯ ಡೈರಿಯಿಂದ ಅವರು ಹಸುಗಳನ್ನ ಕೂಡ ತೆಗೆದುಕೊಂಡು ಹೋಗಿದ್ದಾರೆ. ಅಲ್ಲದೇ ವಿನಯ ಕುಲಕರ್ಣಿ ಬಳಿ ಇರುವ ಕುದುರೆ ಸವಾರಿ ಕೂಡ ಮಾಡಿದ್ದಾರೆ.

ವಿನಯ ಕುಲಕರ್ಣಿ ಬಳಿ ನಾಲ್ಕಕ್ಕೂ ಹೆಚ್ಚು ಕುದುರೆ ಇವೆ. ಅದರಲ್ಲಿ ದರ್ಶನ್‍ಗೆ ಬಿಳಿ ಕುದುರೆ ಅಂದರೆ ಇಷ್ಟ ಅಂತೆ. ಹೀಗಾಗಿ ಅವರು ಬಿಳಿ ಕುದುರೆ ಸವಾರಿ ಮಾಡಿ ಹೋಗಿದ್ದೂ ಇದೆ.

https://www.youtube.com/watch?v=r6fFLX_JUsU

Share This Article