– ಕುಟುಂಬಸ್ಥರಿಂದ ಫುಲ್ ಡ್ಯಾನ್ಸ್
– ಸಮಾಜಕ್ಕೆ ಸಂದೇಶ ನೀಡಿದ ವಧುವಿನ ಕುಟುಂಬ
ಭೋಪಾಲ್: ಉತ್ತರ ಭಾರತದ ಮದುವೆ ಸಮಾರಂಭದಲ್ಲಿ ವಧು ಮನೆಗೆ ವರ ಕುದುರೆ ಏರಿ ವಧು ಮನೆಗೆ ಆಗಮಿಸೋದು ಸಂಪ್ರದಾಯ. ಆದ್ರೆ ಮಧ್ಯ ಪ್ರದೇಶದ ವಧು ಪೇಟ ತೊಟ್ಟು ಮಾಡರ್ನ್ ಲುಕ್ ನಲ್ಲಿ ಕುದುರೆ ಏರಿ ಮಂಟಪ್ಪಕ್ಕೆ ಆಗಮಿಸಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ.
ಮಧ್ಯಪ್ರದೇಶದ ಸತಾರ ನಗರದ ವಧು ದೀಪಾ ವಲೇಚಾ ಕುದುರೆ ಏರಿ ಫುಲ್ ಎಂಜಾಯ್ ಮಾಡಿದ್ದಾರೆ. ಮಗಳ ಖುಷಿಕಂಡ ಪೋಷಕರು ಮತ್ತು ಕುಟುಂಬಸ್ಥರು ಮ್ಯೂಸಿಕ್ ಬ್ಯಾಂಡ್ ಜೊತೆ ಸಖತ್ ಹೆಜ್ಜೆ ಹಾಕಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿರುವ ದೀಪಾ, ನಾನು ಕುದುರೆ ಸವಾರಿ ಮೂಲಕ ಕಲ್ಯಾಣ ಮಂಟಪಕ್ಕೆ ಎಂಟ್ರಿ ಕೊಡಬೇಕೆಂದು ಯೋಚನೆ ಸಹ ಮಾಡಿರಲಿಲ್ಲ. ನನ್ನ ಫ್ಯಾಮಿಲಿ ಇಷ್ಟೆಲ್ಲ ತಯಾರಿ ಮಾಡಿದ್ದನ್ನ ಕಂಡು ಖುಷಿ ಆಯ್ತು. ಮಗಳು ಕುಟುಂಬಕ್ಕೆ ಭಾರವಲ್ಲ ಅನ್ನೋದನ್ನ ನನ್ನ ಪೋಷಕರು ಸಾಬೀತು ಮಾಡಿದ್ದಾರೆ. ಸಮಾಜದಲ್ಲಿ ಸಿಗುವ ಸ್ಥಾನಮಾನಗಳು ಮಹಿಳೆಯರಿಗೂ ಸಿಗಬೇಕು ಎಂದು ಹೇಳಿದ್ದಾರೆ.
ಬಹಳ ವರ್ಷಗಳ ನಂತರ ವಲೇಚಾ ಕುಟುಂಬಕ್ಕೆ ಹೆಣ್ಣು ಮಗುವಾಗಿ ದೀಪಾ ಬಂದಿದ್ದಳು. ಅಂದಿನಿಂದ ದೀಪಾ ಎಲ್ಲರ ಮುದ್ದಿನ ಮಗಳಾಗಿ ಬೆಳೆದಿದ್ದಳು. ವಲೇಚಾ ಕುಟುಂಬ ದೀಪಾಳನ್ನ ಮಗನ ಹಾಗೆಯೇ ಬೆಳೆಸಿತ್ತು. ಹಾಗಾಗಿ ಮದುವೆ ದಿನ ಅಳುತ್ತ ಮಗಳನ್ನ ಕಳುಹಿಸಕೊಡದೇ ಡೋಲು, ಬ್ಯಾಂಡ್ ಕುದುರೆ ಮೇಲೆ ಕೂರಿಸಿ ಮಂಟಪಕ್ಕೆ ಪೋಷಕರು ಕರೆ ತಂದಿದ್ದರು.
ನಾವು ಎಂದಿಗೂ ಮಗ-ಮಗಳಲ್ಲಿ ವ್ಯತ್ಯಾಸ ಕಂಡಿಲ್ಲ. 25 ವರ್ಷದ ನಂತರ ನಮ್ಮ ಕುಟುಂಬದಲ್ಲಿ ಹೆಣ್ಣು ಮಗುವಾಗಿ ನೇಹಾ ಹುಟ್ಟಿ ಬಂದಳು. ಮಗನ ಮದುವೆಯಂತೆ ಕಾರ್ಯಕ್ರಮವನ್ನ ಮಾಡಿದ್ದೇವೆ. ಈಗಲೂ ಸಹ ಎಷ್ಟೋ ಜನ ಹೆಣ್ಣು ಮಗುವನ್ನ ಭಾರ ಎಂದು ತಿಳಿಯುತ್ತಾರೆ. ಸಂತೋಷದಿಂದ ಎಲ್ಲರೂ ಕನ್ಯಾದಾನ ಮಾಡಿದ್ದೇವೆ ಎಂದು ದೀಪಾ ತಾಯಿ ನೇಹಾ ಹೇಳುತ್ತಾರೆ.