ಬೆಂಗಳೂರು: ಪೆಟ್ರೊಲ್ ಬೆಲೆ ನೂರು ರೂಪಾಯಿ ದಾಟಿದ ಹಿನ್ನೆಲೆ ಕೇಕ್ ಕಟ್ ಮಾಡಿ, ಶತಕದ ಸಂಭ್ರಮ ಆಚರಿಸಿ ವ್ಯಂಗ್ಯ ಮಾಡಲು ಮುಂದಾದ ಕಾಂಗ್ರೆಸ್ ಶಾಸಕರು ಮುಂದಾಗಿದ್ದರು. ಆದರೆ ಕೊನೆಗೆ ಕೇಕ್ ಕತ್ತರಿಸದೆ ಸುದ್ದಿಗೋಷ್ಠಿ ನಡೆಸಿ, ಕೇಕ್ ಹಾಗೇ ಬಿಟ್ಟು ಹೋದ ಘಟನೆ ಕೆಪಿಸಿಸಿ ಕಚೇರಿಯಲ್ಲಿ ನಡೆದಿದೆ.
Advertisement
ಶಾಸಕರಾದ ಕೃಷ್ಣಬೈರೇಗೌಡ, ರಿಜ್ವಾನ್ ಅರ್ಷದ್ ಹಾಗೂ ಪ್ರಿಯಾಂಕ ಖರ್ಗೆ ಜೋಶ್‍ನಲ್ಲಿ ಕೇಕ್ ತೆಗೆದುಕೊಂಡು ಪತ್ರಿಕಾಗೋಷ್ಠಿಗೆ ಬಂದಿದ್ದರು. ಪೆಟ್ರೋಲ್ ದರ ಹೆಚ್ಚಳ ಖಂಡಿಸಿ ಮಾತನಾಡಿದರು, ಆದರೆ ಕೊನೆ ಕ್ಷಣದಲ್ಲಿ ಕೇಕ್ ಕಟ್ ಮಾಡದೆ ಎದ್ದು ಹೋಗಿದ್ದಾರೆ. ಸಂಭ್ರಮಾಚರಣೆ ಮಾಡಿದರೆ ಕೆಟ್ಟ ಸಂದೇಶ ರವಾನೆಯಾಗುತ್ತದೆ ಎಂಬ ಉದ್ದೇಶದಿಂದ ಕೇಕ್ ಕಟ್ ಮಾಡಲು ಹಿಂಜರಿದಿದ್ದಾರೆ. ಪತ್ರಿಕಾಗೋಷ್ಠಿ ನಡೆಸಿ ಕೇಕ್ ಬಿಟ್ಟು ಹೋಗಿದ್ದಾರೆ.
Advertisement
Advertisement
ಕಾಂಗ್ರೆಸ್‍ನಿಂದ 100 ನಾಟ್ ಔಟ್ ಅಭಿಯಾನ
ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಖಂಡಿಸಿ ಕೆಪಿಸಿಸಿ ವತಿಯಿಂದ 100 ನಾಟ್ ಔಟ್ ಅಭಿಯಾನ ನಡೆಸಲು ತೀರ್ಮಾನಿಸಲಾಗಿದೆ. ಪತ್ರಿಕಾಗೋಷ್ಠಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೂನ್ 11ರಿಂದ ರಾಜ್ಯದ ಪೆಟ್ರೋಲ್ ಬಂಕ್ ಗಳಲ್ಲಿ 5 ದಿನಗಳ ಕಾಲ ಈ ಅಭಿಯಾನ ಹಮ್ಮಿಕೊಳ್ಳಲಿದ್ದೇವೆ ಎಂದಿದ್ದಾರೆ. ಕನಿಷ್ಠ 5 ಸಾವಿರ ಪೆಟ್ರೋಲ್ ಬಂಕ್ ಗಳಲ್ಲಿ ಬೆಳಗ್ಗೆ 11 ರಿಂದ 12 ಗಂಟೆವರೆಗೆ ಒಂದು ಗಂಟೆ ಕಾಲ ಬಂಕ್ ಗಳಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಪೆಟ್ರೋಲ್ ಪಿಕ್ ಪಾಕೆಟ್ ನಡೆಯುತ್ತಿರುವುದರಿಂದ 100 ನಾಟ್ ಔಟ್ ಅಭಿಯಾನ ನಡೆಸುತ್ತಿದ್ದೇವೆ. ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಪ್ರತಿಭಟನೆ ಮಾಡುತ್ತೇವೆ. ಇವರು ಚುನಾವಣೆ ಸಂದರ್ಭದಲ್ಲಿ, ಕುಂಭ ಮೇಳದಲ್ಲಿ ಹೇಗೆ ಕೊರೊನಾ ನಿಯಮ ಪಾಲಿಸಿದರು ಎಂದು ಗೊತ್ತಿದೆ ಎಂದಿದ್ದಾರೆ.