– ನಾಲ್ಕು ಲಕ್ಷ ನಗದು, 300 ಗ್ರಾಂ ಚಿನ್ನ ಕಳವು
ಕೋಲಾರ: ದಂಪತಿಯನ್ನು ಕಟ್ಟಿಹಾಕಿ ನಗ ನಾಣ್ಯವನ್ನು ದೋಚಿ ಖದೀಮರು ಸ್ಥಳದಿಂದ ಪರಾರಿಯಾಗಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮುಡಿಯನೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಜಯಲಕ್ಷ್ಮಿ, ಮುನಿಯಪ್ಪ ದಂಪತಿಯನ್ನು ಕಟ್ಟಿಹಾಕಿ ಕಳ್ಳರು ಮನೆಯಲ್ಲಿದ್ದ ಹಣ ಮತ್ತು ಆಭರಣವನ್ನು ದೋಚಿದ್ದಾರೆ. ನಾಲ್ಕು ಲಕ್ಷ ನಗದು ಹಾಗೂ 300 ಗ್ರಾಂ ಚಿನ್ನದಾಭರಣ ದೋಚಿ ಪರಾರಿಯಾಗಿದ್ದಾರೆ.
ಪೆಟ್ರೋಲ್ ಕೇಳುವ ನೆಪದಲ್ಲಿ ಮನೆಯ ಹತ್ತಿರ ಬಂದ ಇಬ್ಬರು ಕಿಡಿಗೇಡಿಗಳು ದಂಪತಿಯನ್ನು ಹಿಡಿದು ಕಟ್ಟಿ ಹಾಕಿದ್ದಾರೆ. ನಂತರ ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳಾದ ಚಿನ್ನಾಭರಣ ಮತ್ತು ಹಣವನ್ನು ದೋಚಿದ್ದಾರೆ. ಸ್ಥಳಕ್ಕೆ ಮುಳಬಾಗಿಲು ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ.