ಪುಸ್ತಕ ಓದೋ ಹವ್ಯಾಸ ಬೆಳೆಸಿಕೊಂಡ ರಾಗಿಣಿ

Public TV
1 Min Read
RAGINI

ಬೆಂಗಳೂರು: ಡ್ರಗ್ಸ್ ಪ್ರಕರಣ ಆರೋಪದ ಹಿನ್ನೆಲೆಯಲ್ಲಿ ಜೈಲು ಸೇರಿದ್ದ ಸ್ಯಾಂಡಲ್‍ವುಡ್ ನಟಿ ರಾಗಿಣಿ ದ್ವಿವೇದಿ ಈಗ ರಿಲೀಸ್ ಆದ ನಂತರ ಕುಟುಂಬಸ್ಥರ ಜೊತೆ ಸಮಯ ಕಳೆಯುತ್ತಿದ್ದಾರೆ.

ಹೌದು. 144 ದಿನಗಳ ಬಳಿಕ ರಾಗಿಣಿ ಪರಪ್ಪನ ಅಗ್ರಹಾರದಿಂದ ಹೊರ ಬಂದ ಬಳಿಕ ಅವರು ತಂದೆ-ತಾಯಿ ಜೊತೆ ಟೈಂಪಾಸ್ ಮಾಡುತ್ತಿದ್ದಾರೆ. ಜೊತೆಗೆ ಪುಸ್ತಕ ಓದುವ ಹವ್ಯಾಸವನ್ನು ರೂಢಿಸಿಕೊಳ್ಳುತ್ತಾ ಇದ್ದಾರೆ.

ragini bail

ಜೈಲಿನಿಂದ ಹೊರ ಬರುತ್ತಿದ್ದಂತೆಯೇ ಅಪ್ಪ – ಅಮ್ಮ ಕೊಟ್ಟ ಸರ್ ಪ್ರೈಸ್ ಗಿಫ್ಟ್ ಪುಸ್ತಕ ಹಾಗೂ ಪುಟಾಣಿ ಡೈರಿಯನ್ನು ಇಟ್ಕೊಂಡು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳನ್ನು ಸಾಮಾಜಿಕ ಜಾಲತಾಣ ಫೇಸ್ ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಜೀವನದ ಅತ್ಯಂತ ಸಂತೋಷದ ಕ್ಷಣ, ನೀವು ಬದಲಾಯಿಸಲಾಗದನ್ನು ಬಿಡಲು ಧೈರ್ಯವನ್ನು ಕಂಡುಕೊಳ್ಳಿ ಎಂದು ಪಾಸಿಟಿವ್ ಆಗಿ ಬರೆದುಕೊಂಡಿದ್ದಾರೆ.

Ragini 4 3

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ 2020 ಸೆಪ್ಟೆಂಬರ್ 4 ರಂದು ರಾಗಿಣಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. 144 ದಿನದ ಬಳಿಕ ರಾಗಿಣಿಗೆ ಸುಪ್ರೀಂಕೋರ್ಟ್‍ನ ನ್ಯಾ. ರೊಹಿಂಗ್ಟನ್ ನಾರಿಮನ್ ನೇತೃತ್ವದ ತ್ರೀ ಸದಸ್ಯ ಪೀಠ ಗುರುವಾರ ಜಾಮೀನು ಮಂಜೂರು ಮಾಡಿತ್ತು. ಕೋವಿಡ್ 19, ವಾರದ ರಜೆ ಹಿನ್ನೆಲೆಯಲ್ಲಿ ಜಾಮೀನು ಪ್ರಕ್ರಿಯೆ ತಡವಾದ ಕಾರಣ ನಾಲ್ಕು ದಿನದ ಬಳಿಕ ಅಂದರೆ 2021ರ ಜನವರಿ 25ರಂದು ಪರಪ್ಪನ ಅಗ್ರಹಾರದಿಂದ ರಾಗಿಣಿ ಹೊರಬಂದಿದ್ದರು.

Happiest moment of life : Find the courage to let go of what you cannot change ????
SET YOURSELF FREE ????????????
2021 with gifts…

Posted by Rragini Dwivedi – Actor on Tuesday, February 2, 2021

Share This Article
Leave a Comment

Leave a Reply

Your email address will not be published. Required fields are marked *