ಮಹಿಳೆಯರ ರೀತಿಯಲ್ಲಿ ಪುರುಷರು ಸಹ ತ್ವಚೆಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಮಹಿಳೆಯ ರೀತಿ ತ್ವಚೆಯ ಕಾಳಜಿಯ ಬಗ್ಗೆ ಪುರುಷರು ಹೆಚ್ಚು ಗಮನ ಹರಿಸಲ್ಲ. ಕೆಲಸದ ಒತ್ತಡಗಳ ನಡುವೆ ತ್ವಚೆಯ ರಕ್ಷಣೆ ಮಾಡಿಕೊಳ್ಳುವುದನ್ನ ಮರೆತು ಬಿಡುತ್ತಾರೆ. ಕೆಲವು ಸರಳ ವಿಧಾನಗಳನ್ನು ಫಾಲೋ ಮಾಡೋದರಿಂದ ಮೊಡವೆ, ಒಣ ತ್ವಚೆ, ಎಣ್ಣೆ ತ್ವಚೆ ಸಮಸ್ಯೆಗಳನ್ನ ದೂರ ಮಾಡಬಹುದಾಗಿದೆ.
1. ಪ್ರೊಡೆಕ್ಟ್ ಆಯ್ಕೆ: ಮೊದಲಿಗೆ ನಿಮ್ಮ ತ್ವಚೆಯ ಗುಣ ಯಾವ ರೀತಿ ಅನ್ನೋದನ್ನ ತಿಳಿದುಕೊಳ್ಳಬೇಕು. ನಿಮ್ಮ ಸ್ಕಿನ್ ಡ್ರೈ, ಆಯಿಲ್ ಅಥವಾ ಎರಡೂ ಗುಣಗಳಿಂದ ಕೂಡಿದೆ ಎಂಬುದನ್ನ ತಿಳಿಯಬೇಕು. ನಂತರ ನಿಮ್ಮ ತ್ವಚೆಗೆ ಅನುಗುಣವಾಗುವಂತಹ ಕ್ರೀಮ್, ಪೌಡರ್, ಸೋಪ್ ಸೇರಿದಂತೆ ಇನ್ನಿತರ ಪ್ರೊಡೆಕ್ಟ್ ಬಳಸುವ ಅಭ್ಯಾಸ ರೂಡಿ ಮಾಡಿಕೊಳ್ಳಬೇಕು. ಇದರಿಂದ ತ್ವಚೆಯ ಅರ್ಧ ಸಮಸ್ಯೆಗಳು ನಿವಾರಣೆ ಆಗುತ್ತವೆ.
Advertisement
Advertisement
2. ಸಿಟಿಎಂ: ದಿನಕ್ಕೆ ಎರಡೂ ಬಾರಿಯಾದ್ರೂ ಸಿಟಿಎಂ(ಕ್ಲೀನ್ಸಿಂಗ್, ಟೋನಿಂಗ್ ಮತ್ತು ಮೊಯಿಸ್ಚರೈಸಿಂಗ್) ಮಾಡಿಕೊಳ್ಳಬೇಕು. ಸಿಟಿಎಂ ಮಾಡುವದರಿಂದ ನಿಮ್ಮ ತ್ವಚೆ ಸ್ವಚ್ಛವಾಗಿರುತ್ತದೆ. ಟೋನಿಂಗ್ ಗಾಗಿ ನಿಮ್ಮ ತ್ವಚೆಯನುಗುಣವಾದ ಟೋನರ್ ಪ್ರೊಡೆಕ್ಟ್ ಬಳಸಬೇಕು. ನಿಮ್ಮ ತ್ವಚೆ ಜಿಗುಟು ಜಿಗುಟಾಗಿದ್ರೆ ಲಿಕ್ವಿಡ್ ಮೊಯಿಸ್ಚರೈಸರ್ ಮತ್ತು ಒಣ ತ್ವಚೆಯಾಗಿದ್ರೆ ಆಯಿಲ್ ಮೊಯಿಸ್ಟರೈಸರ್ ಬಳಸಿದ್ರೆ ಉತ್ತಮ.
Advertisement
Advertisement
3. ಸ್ಕ್ರಬ್ಬಿಂಗ್: ತ್ವಚೆಯ ಆರೋಗ್ಯಕ್ಕಾಗಿ ಸ್ಕ್ರಬ್ಬಿಂಗ್ ಮಾಡಿಕೊಳ್ಳಬೇಕು ಎಂದು ಸೌಂದರ್ಯ ತಜ್ಞರು ಸಲಹೆ ನೀಡುತ್ತಾರೆ. ವಾತಾವರಣದಲ್ಲಿ ಧೂಳು ಮುಖದ ಮೇಲೆ ನೇರವಾಗಿ ಬೀಳುವದರಿಂದ ಬ್ಲ್ಯಾಕ್ ಡಾಟ್ಸ್, ವೈಟ್‍ಹೆಡ್ಸ್ ಉಂಟಾಗುತ್ತವೆ. ಹೀಗಾಗಿ ಸ್ಕ್ರಬ್ಬಿಂಗ್ ಮಾಡಿಕೊಳ್ಳುವದರಿಂದ ಈ ಎಲ್ಲ ಸಮಸ್ಯೆಗಳ ನಿವಾರಣೆ ಆಗುತ್ತವೆ. ನೀವು ಹೆಚ್ಚು ಹೊರಗಡೆ ಸುತ್ತುತ್ತಿದ್ದರೆ ವಾರಕ್ಕೆ ಒಂದು ಅಥವಾ ಎರಡು ಬಾರಿ ಸ್ಕ್ರಬ್ಬಿಂಗ್ ಮಾಡಿಸಿಕೊಂದ್ರೆ ತ್ವಚೆ ಆರೋಗ್ಯ ಮತ್ತು ಕಾಂತಿಯುತವಾಗಿ ಹೊಳೆಯುತ್ತಿರುತ್ತದೆ.
4. ಸನ್‍ಸ್ಕ್ರೀನ್: ಕೆಲವರು ಬೇಸಿಗೆಯಲ್ಲಿ ಮಾತ್ರ ಸನ್‍ಸ್ಕ್ರೀನ್ ಬಳಸುತ್ತಾರೆ. ವರ್ಷದ ಎಲ್ಲ ದಿನವೂ ಸನ್‍ಸ್ಕ್ರೀನ್ ಬಳಸುವ ಸಲಹೆಯ ಸೌಂದರ್ಯ ತಜ್ಞರು ನೀಡುತ್ತಾರೆ. ಸನ್‍ಸ್ಕ್ರೀನ್ ಬಳಕೆಯಿಂದ ಸೂರ್ಯನ ಕಿರಣಗಳಿಂದ ತ್ವಚೆಗೆ ರಕ್ಷಣೆ ಸಿಗುತ್ತೆ.