ಬೆಂಗಳೂರು: ಚಿತ್ರರಂಗದಲ್ಲಿ ನಟರ ಮಧ್ಯೆ ಪೈಪೋಟಿ ಸಹಜ. ಹಾಗೆಯೇ ಒಳ್ಳೆಯ ಸಿನಿಮಾಗಳು ಬಂದಾಗ ಒಬ್ಬರಿಗೊಬ್ಬರು ಪ್ರಶಂಶಿಸುವುದು ಕೂಡ ಕಾಮನ್. ಸದ್ಯ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾ ವೀಕ್ಷಿಸಿದ ನಟ ರಕ್ಷಿತ್ ಶೆಟ್ಟಿ ಪುನೀತ್ ನಟನೆಗೆ ಫಿದಾ ಆಗಿದ್ದಾರೆ.
ಸೋಮವಾರ ರಾತ್ರಿ ಯುವರತ್ನ ಸಿನಿಮಾ ನೋಡುವ ಬಗ್ಗೆ ಟ್ವೀಟ್ ಮಾಡಿದ್ದ ರಕ್ಷಿತ್, ಸಿನಿಮಾ ವೀಕ್ಷಿಸಿದ ನಂತರ ಪುನೀತ್ ಅಭಿನಯಕ್ಕೆ ಮಾರು ಹೋಗಿದ್ದಾರೆ. ಈ ಬಗ್ಗೆ ರಕ್ಷಿತ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಒನ್ ಮ್ಯಾನ್ ಶೋ.. ಅಪ್ಪು ಸರ್.. ಎಂದು ಕ್ಯಾಪ್ಷನ್ ಹಾಕುವ ಮೂಲಕ ಟ್ವೀಟ್ ಮಾಡಿದ್ದಾರೆ.
One man show… Appu Sir ???????? #AppuDance ????????
— Rakshit Shetty (@rakshitshetty) April 5, 2021
ಪುನೀತ್ ಹಾಗೂ ರಕ್ಷಿತ್ ಶೆಟ್ಟಿ ಇಬ್ಬರು ಉತ್ತಮ ಸ್ನೇಹಿತರಾಗಿದ್ದು, ಸಿನಿಮಾ ವೀಕ್ಷಿಸಲು ಶೇ.50 ರಷ್ಟು ಜನ ವೀಕ್ಷಿಸಲು ಸರ್ಕಾರ ಅನುಮತಿ ನೀಡಿದಾಗ, ಯುವರತ್ನ ಚಿತ್ರತಂಡಕ್ಕೆ ಬೆಂಬಲವಾಗಿ ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿದ್ದರು. ಕೆಲವು ದಿನಗಳ ಬಳಿಕ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹಿಂತೆಗೆದುಕೊಂಡಾಗ, ಪುನೀತ್ ರಾಜ್‍ಕುಮಾರ್ ಎಲ್ಲರಿಗೂ ಧನ್ಯವಾದ ತಿಳಿಸಿದ್ದರು. ಈ ವೇಳೆ ರಕ್ಷಿತ್ ಶೆಟ್ಟಿಗೆ ಕೂಡ ಪುನೀತ್ ಧನ್ಯವಾದ ಹೇಳುವುದನ್ನು ಮರೆಯಲಿಲ್ಲ.
#Yuvaratna now ☺️????????@SanthoshAnand15 @PuneethRajkumar @VKiragandur @Karthik1423
— Rakshit Shetty (@rakshitshetty) April 5, 2021
ಸದ್ಯ ರಕ್ಷಿತ್ ಶೆಟ್ಟಿ ಚಾರ್ಲಿ 999 ಸಿನಿಮಾದಲ್ಲಿ ಅಭಿನಯಿಸಿದ್ದು, ಸಿನಿಮಾ ಮುಂಬರುವ ದಿನಗಳಲ್ಲಿ ಬಿಡುಗಡೆಗೊಳ್ಳಲಿದೆ.