ಧಾರವಾಡ: ಕೊರೊನಾ ಹಿನ್ನೆಲೆ ರಾಜ್ಯಾದ್ಯಂತ ಜಾತ್ರೆಗಳಿಗೆ ನಿಷೇಧ ಮಾಡಿರುವುದರಿಂದ ಗ್ರಾಮದ ಕೆಲವೇ ಜನ ಸೇರಿ ಪುಟ್ಟ ರಥ ಎಳೆದು ಜಾತ್ರೆ ಮಾಡುವ ಮೂಲಕ ಮಾದರಿಯಾಗಿದ್ದಾರೆ.
ಜಿಲ್ಲೆಯ ಹೆಬ್ಬಳ್ಳಿ ಗ್ರಾಮದಲ್ಲಿ ಈ ವಿಶೇಷ ರಥೋತ್ಸವ ನಡೆದಿದೆ. ಗ್ರಾಮದಲ್ಲಿ ಪ್ರತಿ ವರ್ಷ ವೀರಭದ್ರೇಶ್ವರ ರಥೋತ್ಸವ ವಿಜೃಂಭಣೆಯಿಂದ ನಡೆಯುತಿತ್ತು. ಆದರೆ ಈ ಬಾರಿ ಕೊರೊನಾ ಹಿನ್ನೆಲೆ ಎಲ್ಲ ಜಾತ್ರೆ ರದ್ದು ಮಾಡಿದ್ದರಿಂದ, ಈ ಗ್ರಾಮದಲ್ಲಿ ಸಹ ಸರಳವಾಗಿ ರಥೋತ್ಸವ ಆಚರಿಸಲಾಗಿದೆ.
Advertisement
Advertisement
ಗ್ರಾಮದ ಕೆಲವೇ ಜನರು ಚಿಕ್ಕದೊಂದು ರಥ ನಿರ್ಮಾಣ ಮಾಡಿ ಏಳೆದಿದ್ದಾರೆ. ಪ್ರತಿ ವರ್ಷದ ದವನದ ಹುಣ್ಣಿಮೆಯಂದು ಈ ಜಾತ್ರೆ ನಡೆಯುತ್ತದೆ. ಬೃಹತ್ ರಥೋತ್ಸವದ ಸಂಪ್ರದಾಯ ಇರುವ ಈ ದೇವಸ್ಥಾನದಲ್ಲಿ ಸಂಪ್ರದಾಯ ಬಿಡಬಾರದೆಂದು ಪುಟ್ಟ ರಥ ಎಳೆಯಲಾಗಿದೆ.