-ಜಪಾನಿ ಭಾಷೆ ಜೊತೆ ರೋಬೋಟಿಕ್ ತಂತ್ರಜ್ಞಾನದ ಕಲಿಕೆ
ಮುಂಬೈ: ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ದೂರರದರಾಜ್ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳು ಜಪಾನಿ ಭಾಷೆ ಕಲಿಯುತ್ತಿದ್ದಾರೆ.
ಶಾಲೆಯಲ್ಲಿ ಕಡಿಮೆ ಸೌಲಭ್ಯಗಳಿದ್ದರೂ ಮಕ್ಕಳು ಮಾತ್ರ ರೋಬೋಟಿಕ್ಸ್ ಮತ್ತು ತಂತ್ರಜ್ಞಾನಾಧರಿತ ವಿಷಯಗಳನ್ನು ಅತ್ಯಂತ ಶ್ರದ್ಧೆಯಿಂದ ಕಲಿಯುತ್ತಿದ್ದಾರೆ. ಇದರ ಜೊತೆಗೆ ಆನ್‍ಲೈನ್ ತರಗತಿ ಮೂಲಕ ಜಪಾನಿ ಭಾಷೆಯನ್ನು ಸುಮಾರು 70 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
Advertisement
Advertisement
ಕಳೆದ ವರ್ಷ ಸರ್ಕಾರಿ ಶಾಲೆಯ ನಾಲ್ಕರಿಂದ ಎಂಟನೇ ವರ್ಗದ ಮಕ್ಕಳಿಗೆ ವಿದೇಶಿ ಭಾಷೆಯ ಕಲಿಯುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಡಿ 70 ವಿದ್ಯಾರ್ಥಿಗಳು ಜಪಾನಿ ಭಾಷೆ ಕಲಿಯುತ್ತಿದ್ದಾರೆ. ಇಂಟರ್‍ನೆಟ್ ಸಹಾಯದಿಂದ ಮಕ್ಕಳು ಜಪಾನಿ ಪದಗಳನ್ನು ಭಾಷಾಂತರ ಮಾಡಿಕೊಳ್ಳುತ್ತಾರೆ. ಇನ್ನು ಕೆಲ ಮಕ್ಕಳು ಮಕ್ಕಳು ರೋಬೋಟಿಕ್ಸ್ ತಂತ್ರಜ್ಞಾನ ಕಲಿಯಲು ಹೆಚ್ಚಿನ ಆಸಕ್ತಿ ವಹಿಸಿದ್ದಾರೆ ಎಂದು ಶಾಲೆಯ ಶಿಕ್ಷಕ ದಾದಾಸಾಹೇಬ್ ನವಪೂತ್ ಹೇಳುತ್ತಾರೆ.
Advertisement
Advertisement
ಮಕ್ಕಳಿಗೆ ಜಪಾನಿ ಭಾಷೆ ಕಲಿಯಲು ಪಠ್ಯಪುಸ್ತಕ ಸೇರಿದಂತೆ ಅಗತ್ಯ ಸೌಲಭ್ಯಗಳು ಇಲ್ಲ. ಶಾಲೆಯ ಇಂಟರ್‍ನೆಟ್ ಬಳಸಿ ಮಕ್ಕಳು ಒಂದೆಡೆ ಸೇರಿ ಒಗ್ಗಟ್ಟಾಗಿ ಜಪಾನಿ ಭಾಷೆ ಕಲಿಯುತ್ತಿದ್ದಾರೆ. ಇನ್ನು ಮಕ್ಕಳ ಆಸಕ್ತಿ ಕಂಡ ಜಿಲ್ಲೆಯ ಭಾಷಾ ತಜ್ಞ ಸುನಿಲ್ ಜುಗದೌ ಉಚಿತವಾಗಿ ಪಾಠ ಮಾಡುತ್ತಿದ್ದಾರೆ.