ಬೆಂಗಳೂರು: ತುಮಕೂರಿನ ಶಿರಾ ಹಾಗೂ ಬೆಂಗಳೂರಿನ ಆರ್‍ಆರ್ ನಗರದ ಉಪಚುನಾವಣೆಗೆ ಈಗಾಗಲೇ ಮತದಾನ ಆರಂಭವಾಗಿದ್ದು, ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಆದರೆ ಪೀಣ್ಯ ರಸ್ತೆಯಲ್ಲಿ ಹ್ಯಾಂಡ್ ಗ್ಲೌಸ್ ಗಳನ್ನು ಎಲ್ಲೆಂದರಲ್ಲಿ ಬಿಸಾಕಿರುವುದು ಕಂಡು ಬಂದಿದೆ.
Advertisement
ಹೌದು. ರಸ್ತೆಯಲ್ಲಿ ಹ್ಯಾಂಡ್ ಗ್ಲೌಸ್ ಗಳನ್ನು ಬಿಸಾಡಲಾಗಿದೆ. ಮತದಾನ ಮಾಡಿದ ಬಳಿಕ ಜನ ಎಲ್ಲೆಂದರಲ್ಲಿ ಹಾಕಿಹೋಗಿದ್ದಾರೆ. ಮತದಾನ ಮಾಡಲು ಒಬ್ಬ ವ್ಯಕ್ತಿಗೆ ಒಂದು ಗ್ಲೌಸ್ ವಿತರಣೆ ಮಾಡಲಾಗುತ್ತಿದೆ. ಆದರೆ ಸಿಬ್ಬಂದಿ ಮತದಾರರಲ್ಲಿ ಜಾಗೃತಿ ಮೂಡಿಸಿಲ್ಲ. ಹೀಗಾಗಿ ಜನ ಮತದಾನ ಮಾಡಿ ಬಳಿಕ ಗ್ಲೌಸ್ ಗಳನ್ನು ಸಿಕ್ಕ ಸಿಕ್ಕ ಕಡೆ ಬಿಸಾಡಿ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಡಸ್ಟ್‍ಬಿನ್ ವ್ಯವಸ್ಥೆ ಮಾಡಬೇಕಿದೆ.
Advertisement
Advertisement
ಪೀಣ್ಯದ ಸರ್ಕಾರಿ ಪದವಿಪೂರ್ವ ಕಾಲೇಜಿನ ಮತದಾನ ಕೇಂದ್ರದಲ್ಲಿ ಆಗ್ಗಾಗ್ಗೆ ಸ್ಯಾನಿಟೈಸರ್ ಮಾಡಲಾಗುತ್ತಿದೆ. ಮತದಾನ ಕೇಂದ್ರದ ಹೊರಗೆ, ಕಾರಿಡಾರ್ ನಲ್ಲಿ ಸ್ಯಾನಿಟೈಸರ್ ಸಿಂಪಡಿಸಲಾಗುತ್ತಿದೆ. ಬಿಬಿಎಂಪಿ ಸಿಬ್ಬಂದಿ ಪ್ರತೀ ಗಂಟೆಗೊಮ್ಮೆ ಸ್ಯಾನಿಟೈಸ್ ಮಾಡ್ತಿದ್ದಾರೆ.