ಕೋಲಾರ: ಮನೆಯಲ್ಲಿ ಪಿಕ್‍ನಿಕ್‍ಗೆ ಹೋಗುತ್ತೇನೆಂದು ಹೇಳಿ ಹೋಗಿದ್ದ ಬಾಲಕಿ ಶವವಾಗಿ ಪತ್ತೆಯಾಗಿರುವ ಆಘಾತಕಾರಿ ಘಟನೆ ಜಿಲ್ಲೆಯ ಕೆಜಿಎಫ್ ತಾಲೂಕಿನ ಕ್ಯಾಸಂಬಳ್ಳಿಯಲ್ಲಿ ನಡೆದಿದೆ.
ಪಿಕ್‍ನಿಕ್‍ಗೆ ಹೋಗುತ್ತೇನೆಂದು ತೆರಳಿದ್ದ 17 ವರ್ಷದ ಕೀರ್ತಿ ಕಾರಿಣಿ ಅನುಮಾನಾಸ್ಪದ ರೀತಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಕೆಜಿಎಫ್‍ನ ಸೆಂಟ್ ಥೆರೆಸಾ ಕಾಲೇಜು ವಿದ್ಯಾರ್ಥಿನಿ ಎನ್ನಲಾಗಿದೆ.
ಕಳೆದ ಎರಡು ದಿನಗಳಿಂದ ಬಾಲಕಿ ಕಾಣೆಯಾಗಿದ್ದಾಳೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಪೋಷಕರು, ಬಾಲಕಿ ಹುಡುಕಾಟದಲ್ಲಿದ್ದರು. ಆದರೆ ಇಂದು ಬಾಲಕಿ ಬ್ಯಾಗ್ ಮತ್ತು ಮೊಬೈಲ್ ಕೆರೆ ದಡದಲ್ಲಿ ಪತ್ತೆ ಯಾಗಿತ್ತು. ಹೀಗಾಗಿ ಕೆರೆಯಲ್ಲಿ ಹುಡುಕಾಟ ನಡೆಸಿದ ವೇಳೆ ಶವ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಘಟನಾ ಸ್ಥಳಕ್ಕೆ ಕೆಜಿಎಫ್ ಡಿವೈಎಸ್‍ಪಿ ಉಮೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಂಡರ್‍ಸನ್ ಪೇಟ್ ಪೋಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.