ಚಾಮರಾಜನಗರ: ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದೆ ಎಂದು ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಂಸದ ವಿ.ಶ್ರೀನಿವಾಸ ಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯಗೆ ಕಾಮನ್ ಸೆನ್ಸ್ ಇಲ್ವಾ? ಅವರಿಗೆ ಏನೂ ಕೆಲಸವಿಲ್ಲ. ಅವರು ಅರ್ಥ ಮಾಡ್ಕೋ ಬೇಕು. ಇಡೀ ಜಗತ್ತೇ ಆರ್ಥಿಕ ಸಂಕಷ್ಟದಲ್ಲಿದೆ. ಲಾಕ್‍ಡೌನ್, ಸೀಲ್‍ಡೌನ್ ನಿಂದ ಜಗತ್ತೇ ತತ್ತರಿಸಿದೆ. ನಮ್ಮ ರಾಜ್ಯದಲ್ಲಿ ಮಾತ್ರ ಆರ್ಥಿಕ ಸಂಕಷ್ಟವಿದೆಯಾ ಎಂದು ಪ್ರಶ್ನಿಸಿದರು. ಅಲ್ಲದೆ ಪಿಂಜರಾ ಪೌಲ್ ಸಚಿವರೆಲ್ಲ ಹಣಕಾಸು ಸಚಿವರಾದರೆ ಇಷ್ಟೆ ಎಂದು ವ್ಯಂಗವಾಡಿದರು.
ಹಣಕಾಸು ಸಚಿವರಾಗಿ, ಮುಖ್ಯಮಂತ್ರಿಯಾಗಿ ಅಷ್ಟು ವರ್ಷ ಕೆಲಸ ಮಾಡಿದ್ದೀನಿ ಅಂತ ಕೊಚ್ಚಿ ಕೊಳ್ತೀರಾ, ಸಾಮಾನ್ಯ ವ್ಯಕ್ತಿಗೆ ಅರ್ಥವಾಗೋದು, ನಿಮಗೆ ಅರ್ಥ ಆಗೊಲ್ವಾ ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.