ಬಾಗಲಕೋಟೆ: ಪಾಸಿಟಿವ್ ಬಂದ ಮನೆಯವರು ಹಾಗೂ ಪಕ್ಕದ ಮನೆಯವರನ್ನು ಒಂದೇ ಕಡೆ ಕ್ವಾರಂಟೈನ್ ಮಾಡಿರೋದಕ್ಕೆ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಇತರೆ ಎರಡು ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ ಪ್ರಸಂಗ ನಡೆದಿದೆ.
ಈ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್ ನಲ್ಲಿರುವ ಕ್ವಾರಂಟೈನ್ ಸೆಂಟರ್ ಆವರಣದಲ್ಲಿ ನಡೆದಿದೆ. ಕ್ವಾರಂಟೈನ್ ಸೆಂಟರ್ ಆವರಣದಲ್ಲಿ ಗುಡಿಸಲು ಹಾಕಿಕೊಂಡು ಕುಳಿತ ಕುಳಗೇರಿ ಕ್ರಾಸ್ ಗ್ರಾಪಂ ಸದಸ್ಯ ಹನುಮಂತ ನರಗುಂದ ಪ್ರಸನ್ನ ಹಾಗೂ ಮಂಜುನಾಥ ಎಂಬವರು ಒಂದೇ ಕಡೆ ಕ್ವಾರಂಟೈನ್ ಆಗಲು ವಿರೋಧ ಮಾಡ್ತಿದಾರೆ.
Advertisement
Advertisement
ಕುಳಗೇರಿ ಕ್ರಾಸ್‍ನಲ್ಲಿ ಗ್ರಾಪಂ ಸದಸ್ಯನ ಪಕ್ಕದ ಮನೆಯ ಓರ್ವ ವ್ಯಕ್ತಿಗೆ ಪಾಸಿಟಿವ್ ಬಂದಿದೆ. ಪಾಸಿಟಿವ್ ವ್ಯಕ್ತಿಯ ಕುಟುಂಬಸ್ಥರನ್ನು ಸಾಂಸ್ಥಿಕ ಕ್ವಾರಂಟೈನ್ ನಲ್ಲಿ ಇರಿಸಿದ್ದಾರೆ. ಅದೇ ಕ್ವಾರಂಟೈನ್ ಕೇಂದ್ರದಲ್ಲಿ ತಮ್ಮನ್ನು ಸೇರಿಸೋದಕ್ಕೆ ಗ್ರಾಮ ಪಂಚಾಯತಿ ಸದಸ್ಯ ವಿರೋಧ ಮಾಡಿದ್ದಾನೆ.
Advertisement
ಅಲ್ಲದೆ ಪಾಸಿಟಿವ್ ಬಂದವನ ಮನೆಯವರಿಗೆ ಸೋಂಕಿನ ಲಕ್ಷಣಗಳಿವೆ. ಆದ್ದರಿಂದ ನಮ್ಮನ್ನು ಬೇರೆ ಕಡೆ ಕ್ವಾರಂಟೈನ್ ಮಾಡಿ. ಯಾವುದೇ ಕಾರಣಕ್ಕೂ ನಾವು ಒಳಗೆ ಹೋಗೋದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.