– ಮೈಸೂರು 1,265, ಹಾಸನ 974, ಯಾವ ಜಿಲ್ಲೆಯಲ್ಲಿ ಎಷ್ಟು?
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ನಿಧಾನವಾಗಿ ಕಡಿಮೆಯಾಗುತ್ತಿದ್ದು, ಇಂದು 16,068 ಹೊಸ ಪ್ರಕರಣಗಳು ವರದಿಯಾಗಿವೆ. 364 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. ಖುಷಿಯ ವಿಚಾರ ಎಂಬಂತೆ ಪಾಸಿಟಿವಿಟಿ ರೇಟ್ ಶೇ.10.66ಕ್ಕೆ ಇಳಿಕೆಯಾಗಿದೆ.
Advertisement
ಇಂದು 22,316 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, 2,80,186 ಸಕ್ರಿಯ ಪ್ರಕರಣಗಳಿವೆ. ಇಂದು ಕೊರೊನಾಗೆ 364 ಸೋಂಕಿತರು ಸಾವನ್ನಪ್ಪಿದ್ದು, ಮರಣ ಪ್ರಮಾಣ ಶೇ.2.26ಕ್ಕೆ ತಲುಪಿದೆ. ಇದುವರೆಗೂ ರಾಜ್ಯದಲ್ಲಿ 30,895 ಜನರನ್ನು ಕೊರೊನಾ ಬಲಿ ಪಡೆದುಕೊಂಡಿದೆ.
Advertisement
Advertisement
ಇಂದು ಒಟ್ಟು 1,50,610 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದ್ದು, ಇಂದು 3,221 ಜನರು ಸೋಂಕಿಗೆ ತುತ್ತಾದ್ರೆ, 206 ಸೋಂಕಿತರು ಸಾವನ್ನಪ್ಪಿದ್ದಾರೆ. ಸದ್ಯ ಬೆಂಗಳೂರಿನಲ್ಲಿ 1,31,179 ಸಕ್ರಿಯ ಪ್ರಕರಣಗಳಿವೆ.
Advertisement
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 208, ಬಳ್ಳಾರಿ 423, ಬೆಳಗಾವಿ 792, ಬೆಂಗಳೂರು ಗ್ರಾಮಾಂತರ 429, ಬೆಂಗಳೂರು ನಗರ 3,221, ಬೀದರ್ 19, ಚಾಮರಾಜನಗರ 296, ಚಿಕ್ಕಬಳ್ಳಾಪುರ 400, ಚಿಕ್ಕಮಗಳೂರು 595, ಚಿತ್ರದುರ್ಗ 702, ದಕ್ಷಿಣ ಕನ್ನಡ 806, ದಾವಣಗೆರೆ 620, ಧಾರವಾಡ 235, ಗದಗ 194, ಹಾಸನ 974, ಹಾವೇರಿ 100, ಕಲಬುರಗಿ 46, ಕೊಡಗು 388, ಕೋಲಾರ 304, ಕೊಪ್ಪಳ 299, ಮಂಡ್ಯ 526, ಮೈಸೂರು 1,265, ರಾಯಚೂರು 184, ರಾಮನಗರ 146, ಶಿವಮೊಗ್ಗ 636, ತುಮಕೂರು 857, ಉಡುಪಿ 561, ಉತ್ತರ ಕನ್ನಡ 559, ವಿಜಯಪುರ 190 ಮತ್ತು ಯಾದಗಿರಿಯಲ್ಲಿ 93 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.