ಹುಬ್ಬಳ್ಳಿ: ಮಹಾನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದೆ. ಮನೆ, ಅಂಗಡಿ ಕಳ್ಳತನ ಹೆಚ್ಚಾದ ಬೆನ್ನಲ್ಲೇ ಇದೀಗ ಕಳ್ಳರು ಕಸದ ವಾಹನಗಳ ಬ್ಯಾಟರಿಗಳನ್ನು ಕಳ್ಳತನ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
Advertisement
ಹುಬ್ಬಳ್ಳಿ ಮಹಾನಗರ ಪಾಲಿಕೆ ವಲಯ ಕಚೇರಿ 11ರಲ್ಲಿ ಬರುವ 09 ಆಟೋ ಟಿಪ್ಪರ್‍ಗಳ ಬ್ಯಾಟರಿ ಕಳ್ಳತನ ಮಾಡಿ ಕಳ್ಳರು ತಮ್ಮಕೈಚಳಕ ತೋರಿದ್ದಾರೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಮನೆ ಮನೆಯ ಕಸ ಸಂಗ್ರಹಣೆ ಮಾಡುವ 9 ಆಟೋ ಟಿಪ್ಪರಗಳ ಬ್ಯಾಟರಿ ಕಳ್ಳತನ ಆಗಿದ್ದು, ವಲಯ ಕಚೇರಿ 11ರ ಕಂಪ್ಯಾಕ್ಟರ್ ಸ್ಟೇಷನ್‍ನಲ್ಲಿ ನಿಲ್ಲಿಸಿದ್ದ 09 ಗಾಡಿಗಳ ಬ್ಯಾಟರಿಗಳನ್ನು ಕಳ್ಳರು ಕಳ್ಳತನ ಮಾಡಿದ್ದಾರೆ.
Advertisement
Advertisement
ಕಸಬಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣ ವರದಿಯಾಗಿದ್ದು, ಪಾಲಿಕೆ ವಾಹನಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡಿದ ಖದೀಮರಿಗೆ ಕಾನೂನು ರೀತಿಯಲ್ಲಿ ಬಿಸಿ ಮುಟ್ಟಿಸಬೇಕಿದೆ. ಅಲ್ಲದೇ ಕಾವಲು ಸಿಬ್ಬಂದಿ ಸಿಸಿ ಕ್ಯಾಮರಾ ಇದ್ದಾಗಲೂ ಬ್ಯಾಟರಿ ಕಳ್ಳತನ ನಡೆದಿದ್ದಾದರೂ ಹೇಗೆ ಎನ್ನುವ ಅನುಮಾನ ಪಾಲಿಕೆ ಅಧಿಕಾರಿಗಳದ್ದಾಗಿದೆ. ಈ ಘಟನೆಯ ಕುರಿತು ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Advertisement