ಪಾರ್ಥನೆ ವೇಳೆ ಕದ್ದು ಮುಚ್ಚಿ ಲಾಲಿಪಾಪ್ ಸವಿದ ಬಾಲಕ – ನೆಟ್ಟಿಗರ ಮನಗೆದ್ದ ವೀಡಿಯೋ

Public TV
1 Min Read
lallipop

ಮುದ್ದಾದ ಪುಟ್ಟ ಬಾಲಕನೋರ್ವ ಪ್ರಾರ್ಥನೆ ವೇಳೆ ಲಾಲಿಪಾಪ್‍ನನ್ನು ಕದ್ದು ಚೀಪುವ ವೀಡಿಯೋವೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.

ಸಾಮಾನ್ಯವಾಗಿ ಮಕ್ಕಳು ಮಾಡುವ ಚೇಷ್ಟೆ ಎಷ್ಟೋ ಜನರಿಗೆ ಕಿರಿಕಿರಿಯುಂಟು ಮಾಡುತ್ತದೆ. ಆದರೆ ವೀಡಿಯೋವೊಂದರಲ್ಲಿ ಬಾಲಕ ಮಾಡಿರುವ ತುಂಟ ಕೆಲಸ ಎಲ್ಲರ ಮನ ಗೆದ್ದಿದೆ. 30 ಸೆಕೆಂಡ್ ಇರುವ ಈ ವೀಡಿಯೋದಲ್ಲಿ ಬಾಲಕ ಶಾಲೆಯ ಆವರಣದಲ್ಲಿ ಇತರ ಮಕ್ಕಳೊಂದಿಗೆ ಕಣ್ಣು ಮುಚ್ಚಿ, ಎರಡು ಕೈಗಳನ್ನು ಜೋಡಿಸಿ ಪ್ರಾರ್ಥನೆ ಮಾಡಲು ನಿಂತಿರುತ್ತಾನೆ. ಬಾಲಕನನ್ನು ನೋಡಿದವರು ಪ್ರಾರ್ಥನಾ ಗೀತೆ ಹಾಡುತ್ತಾ ಪ್ರಾರ್ಥನೆ ಮಾಡುತ್ತಿದ್ದಾನೆ ಎಂದು ತಿಳಿದುಕೊಳ್ಳಬೇಕು ಹಾಗೇ ನಿಂತಿರುತ್ತಾನೆ.

LOLLIPOP

ಆದರೆ ಕ್ಯಾಮೆರಾದಲ್ಲಿ ಬಾಲಕ ಲಾಲಿಪಾಪ್ ತಿನ್ನುತ್ತಿರುವುದು ಸೆರೆಯಾಗಿದ್ದು, ಬಾಲಕ ತನ್ನ ಅಂಗೈಗಳ ನಡುವೆ ಲಾಲಿಪಾಪ್‍ನನ್ನು ಬಚ್ಚಿಟ್ಟುಕೊಂಡು ಕದ್ದುಮುಚ್ಚಿಕೊಂಡು ಚೀಪುತ್ತಿರುತ್ತಾನೆ. ಆದರೆ ನಿಜವಾಗಿಯೂ ಪ್ರಾರ್ಥನೆ ಮಾಡುತ್ತಿರುವಂತೆ ನಟಿಸುತ್ತಿರುತ್ತಾನೆ.

ಸದ್ಯ ಈ ಕ್ಯೂಟ್ ವೀಡಿಯೋವನ್ನು ಎಎಸ್ ಅಧಿಕಾರಿ ಅವನಿಶ್ ಶರಣ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದು ನಿಮಗೂ ಸಂಬಂಧಿಸಿದೆಯೇ, ಇಲ್ಲವೇ? ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ 29.5 ಸಾವಿರ ವೆವ್ಸ್ ಪಡೆದುಕೊಂಡಿದ್ದು, ಬಾಲಕನ ಮುಗ್ದತೆ ಕುರಿತಂತೆ ಕೆಲವರು ಕಮೆಂಟ್ ಮಾಡುತ್ತಿದ್ದರೆ ಮತ್ತೆ ಕೆಲವರು ತಮ್ಮ ಬಾಲ್ಯದ ದಿನಗಳನ್ನು ನೆನಪಾಗುತ್ತಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *