ಪಾನ್‍ಶಾಪ್‍ನಲ್ಲಿ ಅಫೀಮು ಮಾರಾಟ- ಮೂವರ ಬಂಧನ

Public TV
1 Min Read
blg arrest

– 1.15 ಕೆ.ಜಿ.ಅಫೀಮು ವಶಕ್ಕೆ

ಬೆಳಗಾವಿ: ಸಿಇಎನ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಅಫೀಮು ಮಾರಾಟ ಮಾಡ್ತಿದ್ದ ಮೂವರನ್ನು ಬಂಧಿಸಿದ್ದಾರೆ.

ನಗರದ ಪಾನ್‍ಶಾಪ್‍ನಲ್ಲಿ ಅಫೀಮು ಸಂಗ್ರಹಿಸಿಟ್ಟುಕೊಂಡು ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಇಎನ್ ಪೊಲೀಸರು, ಆರೋಪಿಗಳಾದ ಬರಖತ್‍ಖಾನ್, ಕಮಲೇಶ್ ಬೇನಿವಾಲಾ, ಸರವನ್ ಅಸನೋಯಿಯವರನ್ನು ಬಂಧಿಸಿದ್ದಾರೆ.

vlcsnap 2021 02 19 13h17m39s875

ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದ ರಾಜಸ್ಥಾನ ದಾಬಾ ಬಳಿ ಪಾನ್‍ಶಾಪ್‍ನಲ್ಲಿ ಮಾರಾಟ ಮಾಡುತ್ತಿದ್ದರು. ಒಟ್ಟು 20 ಲಕ್ಷ ರೂಪಾಯಿ ಮೌಲ್ಯದ 1.15 ಕೆ.ಜಿ. ಅಫೀಮನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಬಂಧಿತ ಮೂವರು ಆರೋಪಿಗಳು ರಾಜಸ್ಥಾನ ಮೂಲದವರಾಗಿದ್ದು, ಬೆಳಗಾವಿಯಲ್ಲಿ ವಾಸವಿದ್ದರು. ರಾಜಸ್ಥಾನ ಮೂಲದ ವ್ಯಕ್ತಿಗಳನ್ನು ಟಾರ್ಗೆಟ್ ಮಾಡಿಕೊಂಡು ಆರೋಪಿಗಳು ಅಫೀಮು ಸಪ್ಲೈ ಮಾಡುತ್ತಿದ್ದರು.

vlcsnap 2021 02 19 13h18m28s780

ಈ ಗ್ಯಾಂಗ್ ಲಾರಿಗಳ ಮೂಲಕ ರಾಜಸ್ಥಾನದಿಂದ ಬೆಳಗಾವಿಗೆ ಅಫೀಮು ತರುತ್ತಿತ್ತು. ಬೆಳಗಾವಿಯ ಸಿಇಎನ್ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *