ಬೆಂಗಳೂರು: ಕೊರೊನಾ ವೈರಸ್ ಭಾರತದಲ್ಲಿ ತನ್ನ ಅಟ್ಟಹಾಸವನ್ನ ಹೆಚ್ಚಾಗಿಸಿಕೊಳ್ಳುತ್ತಲೇ ಇದೆ. ರಾಜ್ಯದಲ್ಲೂ ಲಾಕ್‍ಡೌನ್ ಸಡಲಿಕೆ ನಂತರ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಬೆಂಗಳೂರಿನ ಪಾದರಾಯನಪುರ ಏರಿಯಾದ ಜನ ಸ್ವಾಬ್ ಟೆಸ್ಟ್ ಮಾಡಿಸಿಕೊಳ್ಳಿ ಅಂತ ಮನೆ ಬಾಗಿಲಿಗೆ ಹೋದರೆ ಆರೋಗ್ಯ ಸಿಬ್ಬಂದಿಗಳಿಗೆ ಅವಾಜ್ ಹಾಕಿ ಕಳಿಸುತ್ತಿದ್ದಾರೆ.
ಬೆಂಗಳೂರಿನ ಕೊರೊನಾ ಕಾರ್ಖಾನೆಯಾಗಿರುವ ಪಾದರಾಯನಪುರದಲ್ಲಿ ವೈರಸ್ ರಣಕೇಕೆಯಾಗುತ್ತಿದ್ದರೂ ಇಲ್ಲಿನ ಜನ ಬುದ್ಧಿ ಕಲಿಯುತಿಲ್ಲ. ಬಿಬಿಎಂಪಿ ಇಲ್ಲಿನ ಜನರ ರ್‍ಯಾಂಡಮ್ ಟೆಸ್ಟ್‌ಗೆ ಮುಂದಾಗಿತ್ತು. ರ್‍ಯಾಂಡಮ್ ಟೆಸ್ಟ್ ಪರೀಕ್ಷೆ ವೇಳೆ ಅನೇಕರಿಗೆ ಸೋಂಕು ಇರೋದು ದೃಢಪಟ್ಟಿದ್ದು, ಸಮುದಾಯದ ಹಂತಕ್ಕೆ ಬಂದಿರುವ ಅನುಮಾನಗಳು ಹೆಚ್ಚಾಗಿತ್ತು. ಹೀಗಾಗಿ ಇಲ್ಲಿ ವಾಸ ಮಾಡೋ ಎಲ್ಲ ಜನರ ಕೋವಿಂಡ್ ಟೆಸ್ಟ್ ಮಾಡಿಸಲು ಬಿಬಿಎಂಪಿ ಆರೋಗ್ಯ ಇಲಾಖೆ ಆಪರೇಷನ್ ಪಾದರಾಯನಪುರದ ಪ್ಲಾನ್‍ಗೆ ಚಾಲನೆ ನೀಡಿ ಜೆಜೆ ನಗರದಲ್ಲೇ ಲ್ಯಾಬ್ ಕೂಡ ಪ್ರಾರಂಭ ಮಾಡಿದೆ.
Advertisement
Advertisement
ಆದರೆ ಇಲ್ಲಿನ ಜನ ಆರೋಗ್ಯ ಅಧಿಕಾರಿಗಳ ಜೊತೆ ಸಹಕಾರ ನೀಡದೆ ಮೊಂಡತನವನ್ನ ಪ್ರದರ್ಶನ ಮಾಡುತ್ತಿದ್ದಾರೆ. ಟೆಸ್ಟ್‌ಗೆ ಒಪ್ಪದೇ ನಮ್ಮಲ್ಲಿ ಕೊರೊನಾದಿಂದ ಯಾರು ಸತ್ತಿಲ್ಲ, ಹಬ್ಬ ಇದೆ, ನಾವೂ ಪರೀಕ್ಷೆಗೆ ಬರುವುದಕ್ಕೆ ಆಗೋಲ್ಲ ಅಂತ ಆರೋಗ್ಯ ಅಧಿಕಾರಿಗಳ ಜೊತೆ ಕಿರಿಕ್ ತೆಗೆದಿದ್ದಾರೆ. ನೀವು ಏನ್ ಹೇಳಿದರೂ ಪರೀಕ್ಷೆ ಮಾಡಿಸಿಕೊಳ್ಳುವುದಿಲ್ಲ ಅಂತ ರಸ್ತೆಗಿಳಿದು ಕಿರಿಕಿರಿ ಮಾಡಿದ್ದಾರೆ. ನರ್ಸ್ ಗಳು, ವೈದ್ಯರು ಎಷ್ಟೇ ಮನವೊಲಿಸಿದರೂ ಜನ ಕೇಳುತ್ತಿಲ್ಲ.
Advertisement
Advertisement
ಪಾದರಾಯನಪುರದ ಪುಂಡರ ಪುಂಡಾಟಿಕೆಯಿಂದ ಪೊಲೀಸರು, ಆರೋಗ್ಯ ಇಲಾಖೆಯ ಸಿಬ್ಬಂದಿ, ಬಿಬಿಎಂಪಿ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಹೈರಾಣಾಗಿದ್ದಾರೆ. ಕೊರೊನಾ ಎಂತಹ ಮಹಾಮಾರಿ ಅಂತ ಗೊತ್ತಿದರೂ ಇಲ್ಲಿನ ಜನ ಮಾತ್ರ ಸರ್ಕಾರದ ಕ್ರಮಗಳಿಗೆ ಸಮ್ಮತಿಸುತ್ತಿಲ್ಲ.